ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಶವಾದ ನಂತರ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಅಫ್ಘಾನ್ ಸೇನೆ, ಪೊಲೀಸರು, ಅಧಿಕಾರಿಗಳು, ಕಾಬೂಲ್ನಲ್ಲಿದ್ದ ಜಾಗತಿಕ ಮಾಧ್ಯಮಗಳ ಸಿಬ್ಬಂದಿ, ಸ್ಥಳೀಯ ಜನತೆ, ಪ್ರಮುಖವಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈಗಾಗಲೇ ಅನೇಕರನ್ನು ಹತ್ಯೆ ಮಾಡಲಾಗಿದ್ದು, ಹಿಂಸಾಚಾರವೂ ಹೆಚ್ಚಾಗುತ್ತಿದೆ. ಈ ನಡುವೆ, ಅಫ್ಘಾನಿಸ್ತಾನದ ಪೊಲೀಸ್ ಮುಖ್ಯಸ್ಥರೊಬ್ಬರನ್ನು ಅಮಾನುಷವಾಗಿ ಗಲ್ಲಿಗೇರಿಸಿದ ವಿಡಿಯೋ ದೃಶ್ಯಾವಳಿಗಳು ಹೊರಬಂದಿವೆ. ತಾಲಿಬಾನ್ಗೆ ಶರಣಾದ ಪೊಲೀಸ್ ಮುಖ್ಯಸ್ಥನನ್ನು ಗಲ್ಲಿಗೇರಿಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಹೆರಾತ್ನ ಬಾಗ್ದಿಸ್ ಪ್ರಾಂತ್ಯದಲ್ಲಿ ಪೊಲೀಸರ ನೇತೃತ್ವ ವಹಿಸಿದ್ದ ಹಾಜಿ ಮುಲ್ಲಾ ಅಚಕ್ಜಾಯ್ ಅವರನ್ನು ಟ್ವಿಟ್ಟರ್ನಲ್ಲಿ ಪ್ರಸಾರವಾದ ವಿಡಿಯೋ ತೋರಿಸುತ್ತದೆ. ಕ್ಲಿಪ್ನಲ್ಲಿರುವ ವ್ಯಕ್ತಿ ಕಣ್ಣುಮುಚ್ಚಿ ಮತ್ತು ಮಂಡಿಯೂರಿರುತ್ತಾರೆ. ನಂತರ ಅವರ ದೇಹಕ್ಕೆ ಹಲವಾರು ಗುಂಡುಗಳನ್ನು ಹೊಡೆಯಲಾಗಿದ್ದು, ನಿರ್ಜೀವ ದೇಹವು ನೆಲದ ಮೇಲೆ ಬೀಳುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇನ್ನು, ಈ ವಿಡಿಯೋ ಕ್ಲಿಪ್ ಅನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ ಯುಎಸ್ ಪತ್ರಕರ್ತ "ಇದು ಅವರ ಸಾರ್ವಜನಿಕ ಕ್ಷಮಾದಾನ" ಎಂದು ತಾಲಿಬಾನ್ ಅನ್ನು ಟೀಕಿಸಿ ಬರೆದಿದ್ದಾರೆ. ಅಫ್ಘಾನಿಸ್ತಾನದ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಕ್ಷಮಾದಾನ ನೀಡುವುದಾಗಿ ತಾಲಿಬಾನ್ ಕಳೆದ ವಾರ ಘೋಷಿಸಿದ್ದು, ಮಹಿಳೆಯರೂ ಸೇರಿ ಎಲ್ಲ ಅಧಿಕಾರಿಗಳೂ ಕೆಲಸಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದ್ದರು. ಕ್ಷಮಾದಾನದ ಘೋಷಣೆಯ ನಂತರ ಈ ವಿಡಿಯೋ ಬಿಡುಗಡೆಯಾಗಿದ್ದು ಭೀತಿ ಮೂಡಿಸುತ್ತದೆ.
ಭಯೋತ್ಪಾದಕ ಗುಂಪು ತಾಲಿಬಾನ್ ಸಂಬಂಧಿತ ನೆಟ್ವರ್ಕ್ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಚಾಕ್ಜೈ ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿದ್ದ ಅಫ್ಘಾನ್ ಭದ್ರತಾ ಸಲಹೆಗಾರ ನಾಸರ್ ವಾಜಿರಿ ಘಟನೆಯನ್ನು ದೃಢಪಡಿಸಿದ್ದಾರೆ. ಜತೆಗೆ, ಈ ವಿಡಿಯೋ ಕ್ಲಿಪ್ ಅನ್ನು ಇತರ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ನ್ಯೂಸ್ವೀಕ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಶ್ಚಿಮ ಅಫ್ಘಾನಿಸ್ತಾನದ ಫರಾಹ್ ಪ್ರಾಂತ್ಯದಲ್ಲಿ ತಾಲಿಬಾನ್ ಇತ್ತೀಚೆಗೆ 340 "ರಾಜಕೀಯ ಕೈದಿಗಳನ್ನು" ಬಿಡುಗಡೆ ಮಾಡಿದೆ.
ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿದ್ದು, ಈ ಹಿನ್ನೆಲೆ ಈ ದೇಶ ದಶಕಗಳಲ್ಲಿನ ಅತ್ಯಂತ ಕೆಟ್ಟ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ತಾಲಿಬಾನ್ ಅಡಿಯಲ್ಲಿ ಎದುರಿಸಬಹುದಾದ ದೌರ್ಜನ್ಯಗಳಿಗೆ ಹೆದರಿ ಜನರು ಸ್ಥಳಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಹಲವರು ಸ್ಥಳಾಂತರ ಮಾಡಿದ್ದಾರೆ. ದೇಶದಿಂದಲೇ ಪಲಾಯನ ಮಾಡುವ ಸಲುವಾಗಿ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ.
ಕಾಬೂಲ್ನ ಬೀದಿಗಳಲ್ಲಿರುವ ಭಯೋತ್ಪಾದಕರು ಜನರನ್ನು ಬಲವಂತದಿಂದ ವಿಮಾನ ನಿಲ್ದಾಣಕ್ಕೆ ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದೂ ವರದಿಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಮತ್ತು ತಾಲಿಬಾನ್ ನಿಯಂತ್ರಣದಲ್ಲಿರುವ ಪರಿಧಿಯ ಸುತ್ತಲೂ ಪರಿಸ್ಥಿತಿ ಹದಗೆಡುತ್ತಲೇ ಇದೆ.
ಭಯೋತ್ಪಾದಕರ ಗುಂಪು ಅಫ್ಘಾನ್ ರಾಜಧಾನಿಯ ನಿಯಂತ್ರಣ ಘೋಷಿಸಿದ ನಂತರ, ಹಲವಾರು ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಸ್ಥಳಾಂತರಿಸಿವೆ, ಮತ್ತು ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಫ್ಘಾನಿಸ್ತಾನವನ್ನು ತೊರೆಯುವ ಹತಾಶ ಪ್ರಯತ್ನ ಮಾಡಿದ್ದಾರೆ.
Viewer Discretion Advised
Disturbing footage has emerged of an Afghan police chief ‘Haji Mullah Achakzai’ being executed by the terror group Taliban and then the militants shared the horrific footage on Twitter #Afghanistan pic.twitter.com/UKEZWCE2Wo
— RKOT (@RKOTOfficial) August 20, 2021
.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ