ಬಿಹಾರ: ಮ್ಯಾನ್ ಹೋಲ್ (Manhole) ಅಂದರೆ ಪ್ರಾಣ ತೆಗೆಯುವ ಸ್ಥಳ ಅಂತಾನೇ ಕುಖ್ಯಾತಿ ಪಡೆದಿದೆ. ಅದೆಷ್ಟೋ ಅದೆಷ್ಟೋ ಕಾರ್ಮಿಕರು (Workers) ಮ್ಯಾನ್ಹೋಲ್ ಸ್ವಚ್ಛಗೊಳಿಸುವಾಗ (Clean) ಉಸಿರು ಕಟ್ಟಿ ಸಾವನ್ನಪ್ಪಿದ ಉದಾಹರಣೆಯೂ ಇದೆ. ಅದೆಷ್ಟೋ ತೆರೆದ ಮ್ಯಾನ್ಹೋಲ್ನಲ್ಲಿ ಜನರು ಬಿದ್ದು ಗಾಯಗೊಂಡ (Injury), ಪ್ರಾಣ ತೆಗೆದುಕೊಂಡ ಉದಾಹರಣೆಯೂ ಇದೆ. ಹೀಗಿರುವಾಗ ಇಲ್ಲಿ ರಸ್ತೆ (Road) ಮಧ್ಯದಲ್ಲೇ ಮ್ಯಾನ್ಹೋಲ್ ಒಂದು ತೆರೆದುಕೊಂಡಿತ್ತು. ಅದನ್ನು ಗಮನಿಸದೇ ಮೊಬೈಲ್ನಲ್ಲಿ (Mobile) ಮಾತನಾಡುತ್ತಾ ಬಂದ ಮಹಿಳೆ (Lady) ಅದರಲ್ಲಿ ಬಿದ್ದೇ ಬಿಟ್ಟಿದ್ದಾಳೆ. ನೋಡ ನೋಡುತ್ತಿದ್ದಂತೆಯೇ ಬಿದ್ದ ಮಹಿಳೆ ಅದರಲ್ಲಿ ಮುಳುಗೇ ಹೋಗಿದ್ದಾಳೆ. ಮುಂದೇನಾಯ್ತು ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ…
ಪಾಟ್ನಾದಲ್ಲಿ ಮ್ಯಾನ್ ಹೋಲ್ನಲ್ಲಿ ಬಿದ್ದ ಮಹಿಳೆ
ಬಿಹಾರ ಪಾಟ್ನಾ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ರಸ್ತೆ ಯೊಂದರಲ್ಲಿ ಮ್ಯಾನ್ ಹೋಲ್ನಲ್ಲಿ ಮಹಿಳೆ ಬಿದ್ದ ಘಟನೆ ನಡೆದಿದೆ. ಅಲಂಗಂಜ್ ಎಂಬ ಪ್ರದೇಶದ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮ್ಯಾನ್ಹೋಲ್ನೊಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ಕರ್ಷ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆ ಮ್ಯಾನ್ ಹೋಲ್ ಒಳಗೆ ಬೀಳುತ್ತಿರುವ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ
ಮ್ಯಾನ್ಹೋಲ್ನಲ್ಲಿ ಮಹಿಳೆ ಬಿದ್ದಿದ್ದು ಹೇಗೆ?
ವಾರ್ಡ್ ನಂಬರ್ 56ರ ವ್ಯಾಪ್ತಿಯ ಮಳಿಯ ಮಹಾದೇವ ಜಲ್ಲಾ ರಸ್ತೆಯಲ್ಲಿ ಏಳೆಂಟು ಅಡಿ ಆಳದ ಚರಂಡಿಯ ತೂಬು ತೆರೆದುಕೊಂಡಿದೆ. ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ಆ ರಸ್ತೆಯಲ್ಲಿ ಬರುತ್ತಾರೆ. ಆಕೆಯ ಮುಂದೆ ರಸ್ತೆ ಮೇಲೆ ವಾಹನ ನಿಂತಿರುತ್ತದೆ. ಆ ವಾಹನ ನಿಂತಿದ್ದ ಸ್ಥಳದಲ್ಲಿ ತೆರೆದ ಮ್ಯಾನ್ ಹೋಲ್ ಇರುತ್ತದೆ.
ಆಕೆ ಬರುತ್ತಿದ್ದಂತೆ ವಾಹನ ಮುಂದಕ್ಕೆ ಸಾಗುತ್ತದೆ. ಆಗ ಮ್ಯಾನ್ಹೋಲ್ ಗಮನಿಸದ ಮಹಿಳೆ ಅಲ್ಲಿ ಕಾಲಿಡುತ್ತಾಳೆ. ನೋಡ ನೋಡುತ್ತಿದ್ದಂತೆಯೇ ಕ್ಷಣ ಮಾತ್ರದಲ್ಲೇ ದಿಡೀರ್ ಅಂತ ಮ್ಯಾನ್ ಹೋಲ್ ಒಳಗೆ ಆಕೆ ಬೀಳುತ್ತಾಳೆ.
ಇದನ್ನೂ ಓದಿ: Illegal Relationship: ಗಂಡ ಮನೆ ಹೊರಗೆ, 'ಅವನು' ಬೆಡ್ ರೂಂ ಒಳಗೆ! ಬೆಂಗಳೂರಲ್ಲೇ ಹೆಚ್ಚಂತೆ ಇಂತ ಕೇಸ್!
ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು
ಮ್ಯಾನ್ ವೋಲ್ ನಲ್ಲಿ ಮಹಿಳೆ ಬಿದ್ದ ಕೂಡಲೇ, ಮಹಿಳೆ ಬಿದ್ದಿದ್ದನ್ನು ಗಮನಿಸಿದಂತ ಸ್ಥಳೀಯರು ಕೂಡಲೇ ಆಕೆಯನ್ನು ಎತ್ತಿ ರಕ್ಷಣೆ ಮಾಡಿದ್ದಾರೆ. ಸಣ್ಣ-ಪುಟ್ಟ ಗಾಯವಾಗಿರೋದು ಬಿಟ್ಟರೇ ಪ್ರಾಣಾಪಾಯದಿಂದ ಮಹಿಳೆ ಪಾರಾಗಿರೋದಾಗಿ ತಿಳಿದು ಬಂದಿದೆ. ಅನೇಕ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ಮ್ಯಾನ್ ಹೋಲ್ನಿಂದ ಹೊರಕ್ಕೆ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಮಹಿಳೆಯನ್ನು ರಕ್ಷಿಸಿದ್ದಾಗಿ ತಿಳಿಸಿದ ಮಾಜಿ ಕೌನ್ಸಿಲರ್
“ಚೇಂಬರ್ ಏಳರಿಂದ ಎಂಟು ಅಡಿ ಆಳವಿರಬೇಕು. ಆದಾಗ್ಯೂ, ಸಮಯಕ್ಕೆ ಸರಿಯಾಗಿ ಮಹಿಳೆಯನ್ನು ರಕ್ಷಿಸಲಾಯಿತು, ”ಎಂದು ಪಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕೌನ್ಸಿಲರ್ ಶಿವ ಮೆಹ್ತಾ ರಾಷ್ಟ್ರೀಯ ಪ್ರಕಟಣೆಯ ಪ್ರಕಾರ ಹೇಳಿದ್ದಾರೆ.
ಮುನ್ಸಿಪಲ್ ಕಾರ್ಪೋರೇಷನ್ ವಿರುದ್ಧ ಜನರ ಆಕ್ರೋಶ
ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮ್ಯಾನ್ಹೋಲ್ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇಂತಹ ದುರಂತ ನಡೆಯಲು ಕಾರಣವಾಗುತ್ತಿದೆ. ಇದು ಮುನ್ಸಿಪಲ್ ಕಾರ್ಪೋರೇಷನ್ ನಿರ್ಲಕ್ಷ್ಯ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Shocking Video: ಪ್ರೇಮಿ ಜೊತೆ ತಂಗಿ ಜಾಲಿ ರೈಡ್! ಕೋಪಗೊಂಡ ಅಣ್ಣ ಮಾಡಿದ್ದೇನು ಅಂತ ಈ ಭಯಾನಕ ವಿಡಿಯೋ ನೋಡಿ
ಮ್ಯಾನ್ ಹೋಲ್ನೊಳಗೆ ಬಿದ್ದಿದ್ದ ಮಗು
ಹರಿಯಾಣದ ಕೈಗಾರಿಕಾ ನಗರ ಎಂದು ಕರೆಯಲ್ಪಡುವ ಫರಿದಾಬಾದ್ನಲ್ಲಿ ತೆರೆದ ಒಳಚರಂಡಿ ಮ್ಯಾನ್ಹೋಲ್ಗಳು ಜನರಿಗೆ ಸಮಸ್ಯೆಯಾಗುತ್ತಿರುವುದು ಸಾಮಾನ್ಯ ವಿಷಯ. ಇತ್ತೀಚೆಗೆ ಇಂತಹದೇ ಒಂದು ಒಳಚರಂಡಿ ಮ್ಯಾನ್ಹೋಲ್ಗೆ ಐದು ವರ್ಷದ ಮಗು ಆಟವಾಡುತ್ತಿದ್ದಾಗ ಬಿದ್ದಿದೆ. ಅದೃಷ್ಟವಶಾತ್ ಆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ಮಗು ಮ್ಯಾನ್ಹೋಲ್ಗೆ ಬಿದ್ದಿರುವುದನ್ನು ಗಮನಿಸಿ ಕಾಪಾಡಿದ್ದಾನೆ. ಮಾರ್ಚ್ 20ರಂದು ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ