ತೂಕದ ಲೆಹೆಂಗ ಧರಿಸಿದ್ದ ವಧು ಮದುವೆ ಮನೆಯಲ್ಲಿ ಮಾಡಿದ ಕೆಲಸ ನೋಡಿದ್ರೆ ದಂಗಾಗ್ತೀರಾ..!

ಇತ್ತೀಚಿನ ಮದುವೆ ಮನೆಗಳಲ್ಲಿ ನಡೆದಿರುವಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಇಲ್ಲೊಬ್ಬಳು ವಧು ಭಾರವಾದ ಲೆಹೆಂಗ ತೊಟ್ಟು ಮಾಡಿರುವ ಕೆಲಸದಿಂದಾಗಿ ಈ ವಿಡಿಯೋ ವೈರಲ್​ ಆಗುತ್ತಿದೆ.

ವಧುವಿನ ವೈರಲ್​ ವಿಡಿಯೋ

ವಧುವಿನ ವೈರಲ್​ ವಿಡಿಯೋ

  • Share this:
ಇತ್ತೀಚಿನ ದಿನಗಳಲ್ಲಿ ಮದುವೆಗಳು ಕೇವಲ ಸಾಂಪ್ರದಾಯಿಕ ಮತ್ತು ಸಡಗರಕ್ಕೆ ನೆನಪಿನಲ್ಲಿ ಉಳಿಯದೆ ವಿಚಿತ್ರವಾದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಮದುವೆಗಳಲ್ಲಿ ಕೆಲವೊಮ್ಮೆ ವಧು ವರರು ಮಾಡುವಂತಹ ಹೊಸ ರೀತಿಯ ಕೆಲಸಗಳಿಗೆ ಮತ್ತು ಕೆಲವೊಮ್ಮೆ ಕೆಲ ಅನಿರೀಕ್ಷಿತ ಘಟನೆಗಳಿಂದಾಗಿ ಇತ್ತೀಚಿನ ಮದುವೆಗಳು ತುಂಬಾ ಸುದ್ದಿ ಆಗುತ್ತಿವೆ.ಈ ಕೋವಿಡ್ ಹಾವಳಿಯಿಂದಾಗಿ ಮದುವೆಗಳು ಸಾಧಾರಣವಾದ ರೀತಿಯಲ್ಲಿ ಆಗುತ್ತಿದ್ದು ಅಷ್ಟೊಂದು ವಿಜೃಂಭಣೆಯಿಂದ ನಡೆಯದಿದ್ದರೂ, ಮನೋರಂಜನೆಗೆ ಯಾವುದೇ ರೀತಿಯಲ್ಲಿ ಕೊರತೆ ಆಗುತ್ತಿಲ್ಲ. ಇತ್ತೀಚಿನ ಮದುವೆ ಮನೆಗಳಲ್ಲಿ ನಡೆದಿರುವಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ನೋಡಿದರೆ ಇದು ಸತ್ಯವೆನಿಸುತ್ತದೆ. 

ನಾವೆಲ್ಲ ಮನೆಯಲ್ಲಿ ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ವ್ಯಾಯಾಮ ಮಾಡುತ್ತೇವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ತೂಕದ ಲೆಹೆಂಗ ಧರಿಸಿದ್ದ ನವ ವಧು ತನ್ನ ಮದುವೆ ದಿನದಂದು ಪುಶ್ ಅಪ್ಸ್ ಮಾಡಿದ್ದಾರೆ. ಹೀಗೆ ಮಾಡುವ ಮೂಲಕ ಮದುವೆಗೆ ಬಂದಿದ್ದ ಅತಿಥಿಗಳಿಗೆ ತಾವು ಮನೆಗೆ ಹೋಗಿ ದಿನನಿತ್ಯ ವ್ಯಾಯಾಮ ಮಾಡುವ ಬಗ್ಗೆ ಒಂದು ಯೋಚನೆ ಹುಟ್ಟಿಹಾಕಿದ್ದಂತೂ ಸುಳ್ಳಲ್ಲ.ಈ ಎಂಟು ಸೆಕೆಂಡುಗಳ ಚಿಕ್ಕದಾದ ವಿಡಿಯೋ ತುಣುಕನ್ನು ಮಾಡೆಲ್ ಮತ್ತು ಡಯಟೀಷಿಯನ್ ಆನಾ ಅರೋರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನಾ ಅರೋರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಪುಟದಲ್ಲಿ ಹೊಸ ಹೊಸ ತರಹದ ವ್ಯಾಯಾಮಗಳನ್ನು ಮತ್ತು ಅವುಗಳನ್ನು ಮಾಡುವ ರೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಡಿಯೋಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಿರುತ್ತಾರೆ.ಇದನ್ನೂ ಓದಿ: BBK8 Elimination: ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಎಲಿಮಿನೇಟ್​ ಆಗಿದ್ದಾರಂತೆ ಈ ಸ್ಪರ್ಧಿ..!

 ಇದುವರೆಗೂ ವಧು ಪುಶ್ ಅಪ್ಸ್ ಮಾಡಿದಂತಹ ವಿಡಿಯೋ ತುಣುಕನ್ನು ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಇಷ್ಟ ಪಟ್ಟಿದ್ದು, ನೂರಾರು ಪ್ರತಿಕ್ರಿಯೆಗಳು ದಕ್ಕಿದ್ದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ವಧು ನಿಲ್ಲಿಸದೆ ಪುಶ್ ಅಪ್ಸ್ ಮಾಡಿದ್ದು ಆಕೆ ಫಿಟ್ನೆಸ್ ಫ್ರೀಕ್ ಎನ್ನುವುದನ್ನು ಸಾಬೀತು ಮಾಡಿರುವುದನ್ನು ಕಾಣಬಹುದಾಗಿದೆ.


 ವಧು ಮೈ ತುಂಬಾ ಆಭರಣಗಳನ್ನು ಮತ್ತು ಭಾರಿ ತೂಕದ ಲೆಹೆಂಗಾವನ್ನು ಧರಿಸಿದ್ದು ಆಕೆಯ ಮದುವೆ ದಿನದಂದು ಪುಶ್ ಅಪ್ಸ್ ಮಾಡಿ ತೋರಿಸಿದ ಪರಿಯನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಜೊತೆಗೆ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕಳೆದ ಕೆಲವು ವಾರಗಳಲ್ಲಿ ವೈರಲ್ ಆಗಿರುವ ಏಕೈಕ ಮದುವೆ ಕ್ಲಿಪ್ ಏನಲ್ಲ.
ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಮಗಳ ಮೊದಲ ಹುಟ್ಟುಹಬ್ಬ ಆಚರಿಸಿದ ರಾಧಾ ರಮಣ ಖ್ಯಾತಿಯ ಸ್ಕಂದ ಅಶೋಕ್​..!

ಮತ್ತೊಂದು ವೈರಲ್ ಆದ ವೀಡಿಯೋದಲ್ಲಿ ವಧು ತನ್ನ ವರನ ವಿಶೇಷ ದಿನವಾದ ಮದುವೆ ದಿನದಂದು ಆತನಿಗೆ ಮದುವೆಗೆ ಸಿದ್ಧವಾಗಲು ಸಹಾಯ ಮಾಡುತ್ತಿರುವುದನ್ನು ಕಾಣಬಹುದಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ಶೀರ್ಷಿಕೆಯಲ್ಲಿ "ನಿಮ್ಮನ್ನು ತುಂಬಾ ಪ್ರೀತಿ ಮತ್ತು ಉತ್ಸಾಹದಿಂದ ಅಲಂಕರಿಸುವ ವಧುವನ್ನು ನೀವೇ ಕಂಡುಕೊಳ್ಳಿ..! ಈ ಅದ್ಭುತ ಜೋಡಿ ಇಲ್ಲಿದೆ" ಎಂದು ಬರೆಯಲಾಗಿತ್ತು. ಈ ವಿಡಿಯೋಗೆ ನೆಟ್ಟಿಗರು ವಧುವಿನ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bellbottom Trailer: ಬೆಲ್​ ಬಾಟಮ್​ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ಈ ಖ್ಯಾತ ನಟಿ ಯಾರು ಗೊತ್ತಾ..?(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
First published: