Video: ಅಮ್ಮನ ಜೊತೆ ಮಲಗಿದ್ದ 8 ತಿಂಗಳ ಹಸುಗೂಸು ಬೆಳಗಾಗುವಾಗ ನಾಪತ್ತೆ!

8 ತಿಂಗಳ ಮಗುವಿನೊಂದಿಗೆ ಮಲಗಿದ್ದ ತಾಯಿ ಎದ್ದು ನೋಡಿದಾಗ ಪಕ್ಕದಲ್ಲಿ ಮಗು ಇರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬಸ್​ಸ್ಟಾಂಡ್​ನಲ್ಲಿರುವ ಸಿಸಿಟಿವಿ ಪರಿಶೀಲಿಸಿದಾಗ ಆ ಮಹಿಳೆಯ ಪಕ್ಕ ಮಲಗಿದ್ದ ಮಗುವನ್ನು ಕಳ್ಳರಿಬ್ಬರು ಎತ್ತಿಕೊಂಡು ಹೋಗಿರುವುದು ತಿಳಿದುಬಂದಿತ್ತು.

Sushma Chakre | news18-kannada
Updated:October 9, 2019, 11:30 AM IST
Video: ಅಮ್ಮನ ಜೊತೆ ಮಲಗಿದ್ದ 8 ತಿಂಗಳ ಹಸುಗೂಸು ಬೆಳಗಾಗುವಾಗ ನಾಪತ್ತೆ!
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: October 9, 2019, 11:30 AM IST
ಮೊರಾದಾಬಾದ್​ (ಅ.9): ಬಸ್​ನಲ್ಲಿ ಹೋಗುವಾಗಲೋ, ರೈಲಿನಲ್ಲಿ ಹೋಗುವಾಗಲೋ ಯಾರಾದರೂ ಅಪರಿಚಿತರು ಸಿಕ್ಕರೆ ಟೈಂಪಾಸ್​ ಮಾಡಲೆಂದು ನಾವು ನಮ್ಮ ಬಗ್ಗೆ ಎಲ್ಲ ವಿಷಯವನ್ನೂ ಅವರ ಬಳಿ ಹೇಳಿಕೊಂಡು ಹರಟುತ್ತಾ ಕುಳಿತುಕೊಳ್ಳುತ್ತೇವೆ. ಆದರೆ, ನಾವು ನೀಡಿದ ವಿವರಗಳನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅಮ್ಮನ ಜೊತೆ ಬಸ್​ಸ್ಟಾಂಡ್​​ನಲ್ಲಿ ಮಲಗಿದ್ದ 8 ತಿಂಗಳ ಮಗುವನ್ನು ಕಳ್ಳರು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ಈ ಘಟನೆ ನಡೆದಿದೆ.

8 ತಿಂಗಳ ಮಗುವಿನೊಂದಿಗೆ ಮಲಗಿದ್ದ ತಾಯಿ ಎದ್ದು ನೋಡಿದಾಗ ಪಕ್ಕದಲ್ಲಿ ಮಗು ಇರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಸ್​ಸ್ಟಾಂಡ್​ನಲ್ಲಿರುವ ಸಿಸಿಟಿವಿ ಪರಿಶೀಲಿಸಿದಾಗ ಆ ಮಹಿಳೆಯ ಪಕ್ಕ ಮಲಗಿದ್ದ ಮಗುವನ್ನು ಕಳ್ಳರಿಬ್ಬರು ಎತ್ತಿಕೊಂಡು ಹೋಗಿರುವುದು ತಿಳಿದುಬಂದಿತ್ತು. ಯುವಕ ಮತ್ತು ಯುವತಿ ಮೊದಲು ಬಂದು ಆ ಮಹಿಳೆಯೊಂದಿಗೆ ಏನೋ ಮಾತುಕತೆ ನಡೆಸಿದ್ದರು. ಆಕೆ ಮಲಗಿದ ನಂತರ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.



ಡೆಲಿವರಿಗೆ ಬಂದ ಜೊಮ್ಯಾಟೋ ಬಾಯ್ ಮನೆಯಿಂದ ನಾಯಿಯನ್ನೇ ಕದ್ದೊಯ್ದ!
Loading...

ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ತಾಯಿ ರಾಣಿ 'ಓರ್ವ ಯುವತಿ ಮತ್ತು ಯುವಕ ನನ್ನ ಬಳಿ ಬಂದು ಮಾಮೂಲಾಗಿ ಮಾತುಕತೆ ನಡೆಸಿದರು. ಬಳಿಕ ನನ್ನ ಮಗನನ್ನು ಮಾತನಾಡಿಸಿ ಆಕೆಗೆ ಬ್ಲಾಂಕೆಟ್ ಕೊಟ್ಟುಹೋದರು. ಆಮೇಲೆ ಆ ಯುವಕ ನಾವು ಬ್ಲಾಂಕೆಟ್ ಹಾಸಿಕೊಂಡು ಕುಳಿತಿದ್ದಕ್ಕಿಂತ ಸ್ವಲ್ಪ ದೂರದಲ್ಲಿದ್ದ ಬೆಂಚ್​ನಲ್ಲಿ ಮಲಗಿದ. ನಾನು ಕೂಡ 12 ಗಂಟೆ ಸುಮಾರಿಗೆ ನಿದ್ರೆ ಮಾಡಿದೆ. ಆಗ ನನ್ನ ಪಕ್ಕ ಮಲಗಿದ್ದ ಮಗನನ್ನು ಅವರು ಕಿಡ್ನಾಪ್ ಮಾಡಿದ್ದಾರೆ. ನಾನು ಬೆಳಗಿನ ಜಾವ ಎದ್ದು ನೋಡಿದಾಗ ಪಕ್ಕದಲ್ಲಿ ಮಗುವೂ ಇರಲಿಲ್ಲ, ಬೆಂಚ್​ ಮೇಲೆ ಆ ಯುವಕನೂ ಇರಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದೆ' ಎಂದು ತಿಳಿಸಿದ್ದಾರೆ.

First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...