ಹಿಂದೂ ದೇವಿಯಾಗಿ ಸಿಂಗಾರಗೊಂಡ ಮುಸ್ಲಿಂ ಬಾಲಕಿ; ಕೊಲ್ಕತ್ತಾದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಭಾರೀ ಮೆಚ್ಚುಗೆ

ದಿನಸಿ ಅಂಗಡಿ ಮಾಲೀಕ ಫತೇಪುರ್ ಸಿಕ್ರಿ ಅವರನ್ನು ತಮ್ಮ ಮನೆಗೆ ದಸರಾ ಹಬ್ಬ ಆಚರಣೆಗೆ ತಮಲ್ ದತ್ತ ಆಹ್ವಾನಿಸಿದ್ದರು. ತಮ್ಮ ಮನೆಗೆ ಬಂದ ಫತೇಪುರ್ ಸಿಕ್ರಿ ಅವರ 4 ವರ್ಷದ ಮಗಳು ಫಾತಿಮಾಳನ್ನು ಕೆಂಪು ಉಡುಗೆ, ದೊಡ್ಡದಾದ ಬಿಂದಿ, ಆಭರಣಗಳೊಂದಿಗೆ ಸಿಂಗರಿಸಿ, ಹೂವಿನ ಮಾಲೆ ಹಾಕಿ ದತ್ತ ಕುಟುಂಬಸ್ಥರು ಪೂಜೆ ಮಾಡಿದ್ದಾರೆ.

news18india
Updated:October 7, 2019, 4:26 PM IST
ಹಿಂದೂ ದೇವಿಯಾಗಿ ಸಿಂಗಾರಗೊಂಡ ಮುಸ್ಲಿಂ ಬಾಲಕಿ; ಕೊಲ್ಕತ್ತಾದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಭಾರೀ ಮೆಚ್ಚುಗೆ
ಕುಮಾರಿ ಪೂಜೆಗೆ ಅಲಂಕೃತಗೊಂಡ ಮುಸ್ಲಿಂ ಬಾಲಕಿ ಫಾತಿಮಾ
  • Share this:
ಕೊಲ್ಕತ್ತಾ (ಅ. 7): ಶುಭ ಸಮಾರಂಭಗಳಲ್ಲಿ ಮತ್ತು ವಿಶೇಷ ಪೂಜೆಗಳಲ್ಲಿ ಬಾಲ ಮುತ್ತೈದೆಯರನ್ನು ಕರೆದು ಪೂಜಿಸುವ ಸಂಪ್ರದಾಯ ಹಲವೆಡೆ ಇದೆ. ಇದೇ ರೀತಿ ನವರಾತ್ರಿಯಲ್ಲೂ ಪಶ್ಚಿಮ ಬಂಗಾಳ, ಮಹಾರಾತ್ರಿ ಮುಂತಾದೆಡೆ 10 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಪೂಜಿಸಲಾಗುತ್ತದೆ. ಕೊಲ್ಕತ್ತಾದ ದತ್ತ ಕುಟುಂಬ ಈ ಬಾರಿ ಹೊಸ ಪ್ರಯೋಗ ಮಾಡಿದ್ದು, ಹಿಂದು ಹೆಣ್ಣುಮಕ್ಕಳ ಬದಲಾಗಿ ಮುಸ್ಲಿಂ ಬಾಲಕಿಗೆ ದೇವಿಯ ಪೋಷಾಕು ಹಾಕಿ ಪೂಜಿಸುವ ಮೂಲಕ ಧಾರ್ಮಿಕ ಸಾಮರಸ್ಯ ಸಾರಿದ್ದಾರೆ.

4 ವರ್ಷದ ಮುಸ್ಲಿಂ ಬಾಲಕಿ ಫಾತಿಮಾಳನ್ನು ಕುಮಾರಿ ಪೂಜೆಗೆ ಸಿದ್ಧಪಡಿಸಿದ ದತ್ತ ಕುಟುಂಬದವರು ಆಕೆಗೆ ಪೂಜೆ ಸಲ್ಲಿಸಿದ್ದಾರೆ. ದಿನಸಿ ಅಂಗಡಿ ಮಾಲೀಕ ಫತೇಪುರ್ ಸಿಕ್ರಿ ಅವರನ್ನು ತಮ್ಮ ಮನೆಗೆ ದಸರಾ ಹಬ್ಬ ಆಚರಣೆಗೆ ತಮಲ್ ದತ್ತ ಆಹ್ವಾನಿಸಿದ್ದರು. 2013ರಿಂದಲೂ ದಸರಾ ಆಚರಿಸುತ್ತಿರುವ ತಮಲ್ ದತ್ತ ಕುಮಾರಿ ಪೂಜೆಯನ್ನೂ ಮಾಡುತ್ತಾರೆ. ತಮ್ಮ ಮನೆಗೆ ಬಂದ ಫತೇಪುರ್ ಸಿಕ್ರಿ ಅವರ 4 ವರ್ಷದ ಮಗಳು ಫಾತಿಮಾಳನ್ನು ಕೆಂಪು ಉಡುಗೆ, ದೊಡ್ಡದಾದ ಬಿಂದಿ, ಆಭರಣಗಳೊಂದಿಗೆ ಸಿಂಗರಿಸಿ, ಹೂವಿನ ಮಾಲೆ ಹಾಕಿ ದತ್ತ ಕುಟುಂಬಸ್ಥರು ಪೂಜೆ ಮಾಡಿದ್ದಾರೆ.

ಬಾಲಕಿ ಫಾತಿಮಾ ಜೊತೆ ಆಗಮಿಸಿದ್ದ ಆಕೆಯ ಅಪ್ಪ, ಚಿಕ್ಕಪ್ಪ, ಅಮ್ಮ ಕೂಡ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಟ್ಟಿಗೇ ದಸರಾ ಹಬ್ಬ ಆಚರಿಸುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ. 1901ರಲ್ಲಿ ಸ್ವಾಮಿ ವಿವೇಕಾನಂದರಿಂದ ಬೇಲೂರು ಮಠದಲ್ಲಿ ಕುಮಾರಿ ಪೂಜೆಯನ್ನು ಆರಂಭಿಸಲಾಯಿತು. ಮಹಿಳೆಯರ ಪ್ರಾಮುಖ್ಯತೆಯನ್ನು ಸಾರುವ ಸಲುವಾಗಿ ಈ ಪೂಜೆಯನ್ನು ಆರಂಭಿಸಲಾಯಿತು.

ದೇವಿಯಾಗಿ ಪೂಜಿಸಲ್ಪಡುತ್ತಿರುವ ಬಾಲಕಿ ಫಾತಿಮಾ


ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್​ ಜೊತೆ ಮಾತನಾಡಿರುವ ತಮಲ್ ದತ್ತ, 'ನಾವು ಮೊದಲು ಬ್ರಾಹ್ಮಣ ಸಮುದಾಯದ ಬಾಲಕಿಯರನ್ನು ಕರೆದು ಕುಮಾರಿ ಪೂಜೆ ಮಾಡುತ್ತಿದ್ದೆವು. ನಂತರ ಬೇರೆ ಜಾತಿಯ ಬಾಲಕಿಯರನ್ನೂ ಪೂಜಿಸತೊಡಗಿದೆವು. ಕಳೆದ ವರ್ಷ ದಲಿತ ಸಮುದಾಯದ ಹೆಣ್ಣುಮಗಳನ್ನು ಕುಮಾರಿ ಪೂಜೆಗೆ ಆಹ್ವಾನಿಸಿದ್ದೆವು. ಈ ಬಾರಿಯೇಕೆ ಮುಸ್ಲಿಂ ಬಾಲಕಿಯನ್ನು ಕರೆಯಬಾರದು ಎಂದುಕೊಂಡು ಈ ನಿರ್ಧಾರ ತೆಗೆದುಕೊಂಡೆವು. ಆಕೆಗೆ ದೇವಿಯಂತೆ ಅಲಂಕಾರ ಮಾಡಿದ ನಂತರ ಯಾರಾದರೂ ಮುಸ್ಲಿಂ ಹುಡುಗಿ ಎಂದು ಗುರುತಿಸಲು ಸಾಧ್ಯವೇ? ಮಕ್ಕಳೆದಂ ಮೇಲೆ ಎಲ್ಲರೂ ಒಂದೇ. ನಾವು ಅವರನ್ನು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ' ಎಂದು ಹೇಳಿದ್ದಾರೆ.

ಕುಮಾರಿ ಪೂಜೆಗೆ ಸಿಂಗಾರಗೊಂಡಿರುವ ಫಾತಿಮಾ


ಈ ದೇಶದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಹಕ್ಕುಗಳಿವೆ. ಹಿಂದು, ಕ್ರೈಸ್ತ, ಮುಸ್ಲಿ, ಸಿಖ್ ಎಲ್ಲರಲ್ಲೂ ದೇವರನ್ನು ಕಾಣಲು ಸಾಧ್ಯವಿದೆ. ಈ ಕಾರ್ಯ ಹಲವು ಜನರಿಗೆ ಮಾದರಿಯಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ನಿರ್ಮಾಣವಾಗಬಲ್ಲದು ಎಂಬ ನಂಬಿಕೆ ನಮ್ಮದು ಎಂದು ತಮಲ್ ದತ್ತ ಹೇಳಿದ್ದಾರೆ.
First published:October 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ