Viral Photo: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮತ್ತವರ ಪತ್ನಿ ದೈತ್ಯರಾ? ಭಾರೀ ಚರ್ಚೆಯಲ್ಲಿದೆ Viral ಚಿತ್ರ !

ಈ ಚಿತ್ರದಲ್ಲಿ ರೊಸಾಲಿನ್ ಕಾರ್ಟರ್ ಅವರು ಸೋಫಾ ಮೇಲೆ ಕುಳಿತಿದ್ದು, ಜೋ ಬೈಡೆನ್‌ ಅವರು ಮಂಡಿಯೂರಿ ಅವರ ಪಕ್ಕದಲ್ಲಿ ಕುಳಿತಿರುವಂತೆಯೂ, ಇನ್ನೊಂದು ಕಡೆ ಸೋಫಾದಲ್ಲಿ ಜಿಮ್ಮಿ ಕಾರ್ಟರ್ ಅವರು ಕುಳಿತಿದ್ದು, ಅವರ ಪಕ್ಕದಲ್ಲಿ ಜಿಲ್ ಬೈಡೆನ್‌ ಅವರು ಕಾಣಿಸಿಕೊಂಡಿದ್ದಾರೆ. ಹಸನ್ಮುಖರಾಗಿ ಈ ಫೋಟೋಗೆ ಪೋಸ್ ನೀಡಿರುವ ಗಣ್ಯರ ಫೋಟೋದಲ್ಲಿ ಅಚ್ಚರಿ ಅಂಶವೊಂದು ಕಾಣಿಸಿದ್ದು, ಸದ್ಯ ಇದೇ ಎಲ್ಲರ ತಲೆಗೂ ಹುಳ ಬಿಟ್ಟಿದೆ.

ಬಿಡೆನ್ ದಂಪತಿಯ ವೈರಲ್ ಚಿತ್ರ

ಬಿಡೆನ್ ದಂಪತಿಯ ವೈರಲ್ ಚಿತ್ರ

  • Share this:
Trending: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್‌ ಅವರು ಯುನೈಟೆಡ್ ಸ್ಟೇಟ್ಸ್‌ನ ಜಾರ್ಜಿಯಾದ ಪ್ಲೈನ್ಸ್‌ನಲ್ಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮತ್ತು ಮಾಜಿ ಪ್ರಥಮ ಮಹಿಳೆ ರೊಸಾಲಿನ್ ಕಾರ್ಟರ್ ಅವರನ್ನು ಭೇಟಿ ಮಾಡಿದ್ದರು. ಐದು ದಿನಗಳ ನಂತರ, ದಿ ಕಾರ್ಟರ್ ಸೆಂಟರ್‌ನ ಕಾರ್ಟರ್ಸ್ ಸಂಸ್ಥೆಯು ಈ ಅಪರೂಪದ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಉಂಟಾಗಿದೆ. ಅಲ್ಲದೇ ಈ ಫೋಟೋ ವೈರಲ್ ಆಗಿದೆ. ಹಾಗಿದ್ದರೆ ಈ ಫೋಟೋದಲ್ಲಿ ಅಂತಹ ವಿಶೇಷತೆ ಏನಿದೆ ಅಂತಿರಾ?

ಈ ಚಿತ್ರದಲ್ಲಿ ರೊಸಾಲಿನ್ ಕಾರ್ಟರ್ ಅವರು ಸೋಫಾ ಮೇಲೆ ಕುಳಿತಿದ್ದು, ಜೋ ಬೈಡೆನ್‌ ಅವರು ಮಂಡಿಯೂರಿ ಅವರ ಪಕ್ಕದಲ್ಲಿ ಕುಳಿತಿರುವಂತೆಯೂ, ಇನ್ನೊಂದು ಕಡೆ ಸೋಫಾದಲ್ಲಿ ಜಿಮ್ಮಿ ಕಾರ್ಟರ್ ಅವರು ಕುಳಿತಿದ್ದು, ಅವರ ಪಕ್ಕದಲ್ಲಿ ಜಿಲ್ ಬೈಡೆನ್‌ ಅವರು ಕಾಣಿಸಿಕೊಂಡಿದ್ದಾರೆ. ಹಸನ್ಮುಖರಾಗಿ ಈ ಫೋಟೋಗೆ ಪೋಸ್ ನೀಡಿರುವ ಗಣ್ಯರ ಫೋಟೋದಲ್ಲಿ ಅಚ್ಚರಿ ಅಂಶವೊಂದು ಕಾಣಿಸಿದ್ದು, ಸದ್ಯ ಇದೇ ಎಲ್ಲರ ತಲೆಗೂ ಹುಳ ಬಿಟ್ಟಿದೆ.

ಹೌದು! ಈ ಚಿತ್ರದಲ್ಲಿ ಜೋ ಬೈಡೆನ್‌ ಅವರು ರೊಸಾಲಿನ್ ಅವರಿಗಿಂತ ಮೂರು ಪಟ್ಟು ದೊಡ್ಡದಾಗಿ ಕಾಣುತ್ತಿದ್ದು, ರೊಸಾಲಿನ್ ಅವರು ಬಹಳ ಕುಬ್ಜವಾಗಿ ಕಾಣುತ್ತಿದ್ದಾರೆ. ಅಲ್ಲದೇ ಜಿಮ್ಮಿ ಕಾರ್ಟರ್ ಅವರು ಬಹಳ ಚಿಕ್ಕದಾಗಿ ಕಾಣುತ್ತಿದ್ದು, ಜಿಲ್ ಬೈಡೆನ್‌ ಅವರು ದೊಡ್ಡದಾಗಿ ಕಾಣುತ್ತಿದ್ದಾರೆ. ಅಂದರೆ 5 ಅಡಿ ಮತ್ತು 6 ಇಂಚುಗಳಷ್ಟು ಎತ್ತರವಿರುವ ಪ್ರಥಮ ಮಹಿಳೆ, 5 ಅಡಿ 9 ಇಂಚುಗಳಷ್ಟು ಎತ್ತರವನ್ನು ಹೊಂದಿರುವ ಮಾಜಿ ಅಧ್ಯಕ್ಷರಿಗಿಂತಲೂ ಎತ್ತರವಾಗಿ ಕಂಡು ಬರುತ್ತಿರುವುದು ಹೇಗೆ ? ಇದೇ ಕಾರಣದಿಂದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಕಾಣುತ್ತಿರುವುದು ನಿಜವಲ್ಲ, ಇದು ಛಾಯಾಗ್ರಹಣದಲ್ಲಿನ ಬದಲಾವಣೆಯನ್ನು ತೋರುತ್ತಿದೆ. ಈ ಚಿತ್ರವನ್ನು ವೈಡ್ ಲೆನ್ಸ್ ಬಳಸಿ ತೆಗೆಯಲಾಗಿದೆ. ಫೋಟೋ ತೆಗೆದ ಸ್ಥಳದಲ್ಲಿ ಫೋಟೋಗ್ರಾಫರ್ ಪೋಸ್ ನೀಡುವವರ ಹತ್ತಿರದಲ್ಲಿ ನಿಲ್ಲಬೇಕಿತ್ತು. ಈ ಕಾರಣದಿಂದ ಲೆನ್ಸ್ ಬದಲಾವಣೆ ಮಾಡಲಾಯಿತು. ಹೀಗೆ ಮಾಡಿದಾಗ ಕಡಿಮೆ ಅಂತರದಿಂದ ದೊಡ್ಡ ಅಳತೆಯ ಚಿತ್ರವನ್ನು ಸೆರೆಹಿಡಿಯಲಾಗಿದೆ. ಈ ಕಾರಣದಿಂದ ಫೋಟೋದಲ್ಲಿನ ವ್ಯಕ್ತಿಗಳು ವಿಭಿನ್ನ ಅಳತೆಯಲ್ಲಿ ಕಾಣುತ್ತಿದ್ದಾರೆ. ಈ ಕಾರಣಕ್ಕೆ ಫ್ರೇಮ್‌ನ ಅಂಚು ವಿಸ್ತಾರವಾಗಿದೆ. ಹೆಚ್ಚುವರಿ-ವೈಡ್ ಲೆನ್ಸ್ ಕ್ಯಾಮರಾವನ್ನು ಹೊಂದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮರಾದಲ್ಲಿ ನೀವು ಇದನ್ನು ಪರೀಕ್ಷಿಸಬಹುದು.

ಸಾಮಾನ್ಯವಾಗಿ ಗ್ರೂಪ್ ಸೆಲ್ಫಿಗಳಲ್ಲಿ ಈ ರೀತಿಯ ವ್ಯತ್ಯಾಸಗಳನ್ನು ಗುರುತಿಸಬಹುದು. ಬಿಡೆನ್ಸ್ ಮತ್ತು ಕಾರ್ಟರ್ಸ್ ಅವರ ಚಿತ್ರದ ಎಡಭಾಗದ ಗೋಡೆಯ ಕಡೆಯಲ್ಲಿ ಸ್ವಲ್ಪ ಓರೆಯಾಗಿ ಕಾಣಿಸುತ್ತಿದ್ದು, ಈ ಫೋಟೋವಿನ ಅಸಲಿಯತ್ತನ್ನು ಸಾಕ್ಷೀಕರಿಸಿದೆ. ಈ ಆಪ್ಟಿಕಲ್ ತಂತ್ರವನ್ನು ರಚಿಸಲು ನಿಮಗೆ ವಿಶೇಷವಾದುದೇನೂ ಅಗತ್ಯವಿಲ್ಲ.

ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಚಿತ್ರವನ್ನು ಸರಿಪಡಿಸಲು ಪ್ರಯತ್ನಿಸಿದ ಅನೇಕ ಟ್ವಿಟ್ಟರ್ ಬಳಕೆದಾರರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪೆನ್ನಿ ಲೇನ್ ಎನ್ನುವ ಬಳಕೆದಾರರು 'ಕಾರ್ಟರ್ ಅವರು ಬಹಳ ಪುಟ್ಟದಾಗಿ ಕಾಣುತ್ತಿದ್ದಾರೆ ಏಕೆ? ಅವರು ಅದ್ಭುತ ವ್ಯಕ್ತಿತ್ವದವರು, ಈ ಚಿತ್ರದಲ್ಲಿ ವ್ಯತ್ಯಾಸವಿದೆ ಎಷ್ಟು ಜನ ಒಪ್ಪುತ್ತೀರಿ? ' ಎಂದಿದ್ದಾರೆ.

ಸಿಸ್ಟರ್ ಸೆಲ್ಯೂಲಾಯ್ಡ್ ಎನ್ನುವ ಬಳಕೆದಾರರು ಅನಿಸಿಕೆ ಹಂಚಿಕೊಂಡಿದ್ದು, 'ಬೈಡೆನ್‌ ಅವರು ಒಳ್ಳೆಯ ವ್ಯಕ್ತಿ ಎನ್ನುವ ಕಾರಣಕ್ಕೆ ಅವರಿಗೆ ಮತ ಹಾಕಿದೆ, ಅವರು ಮತ್ತು ಜಿಲ್ ಗುಣವಂತರು' ಎಂದಿದ್ದಾರೆ.

ಡಾ. ಗ್ರ್ಯಾನೀಸ್ ಇನ್ನರ್ ಚೈಲ್ಡ್ ಎನ್ನುವ 'ಬಳಕೆದಾರರು ಹೆಲೋ ಕಾರ್ಟರ್ ಸೆಂಟರ್, ಈ ಫೋಟೋ ಚೆನ್ನಾಗಿದೆ . ಆದರೆ ವಿಚಿತ್ರವಾಗಿದೆ' ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು 'ಅರೆ! ಇದೇನಿದು ಈ ಇಬ್ಬರ ನಡುವೆ ಈ ರೀತಿ ವ್ಯತ್ಯಾಸ ಏಕೆ?' ಎಂದಿದ್ದಾರೆ.

ಹಿರಿಯ, ಮಾಜಿ ಜಾರ್ಜಿಯಾ ಸೆನೆಟರ್ ಮತ್ತು ಗವರ್ನರ್, ಜಿಮ್ಮಿ ಕಾರ್ಟರ್ ಅಮೆರಿಕದ 39 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ 1977 ರಿಂದ 1981 ರವರೆಗೆ ಅಧಿಕಾರದಲ್ಲಿದ್ದರು.
Published by:Soumya KN
First published: