Photo Viral: 8 ಕಾಲು, 2 ಸೊಂಟ…ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಮೇಕೆಯ ಜನನ!

ಮೇಕೆ

ಮೇಕೆ

ಸರಸ್ವತಿ ಮೊಂಡಾಲ್ ತನ್ನ ಮನೆಯಲ್ಲಿ ಹಸುಗಳು ಮತ್ತು ಮೇಕೆಗಳನ್ನು ಸಾಕಿದ್ದಾರೆ. ಅದರಲ್ಲಿ ಒಂದು ಆಡು ಗುರುವಾರ ಎರಡು ಮಕ್ಕಳಿಗೆ ಜನ್ಮ ನೀಡಿದೆ. ಅವುಗಳಲ್ಲಿ ಒಂದು ಸಾಮಾನ್ಯ ರೀತಿ ಜನ್ಮ ಪಡೆದುಕೊಂಡಿದೆ, ಎರಡನೆಯದು ಎಂಟು ಕಾಲುಗಳು ಮತ್ತು ಎರಡು ಸೊಂಟಗಳೊಂದಿಗೆ ಜನ್ಮ ಪಡೆದುಕೊಂಡಿದೆ.

  • Share this:

    ನಮಗೆ ತಿಳಿದಿರುವಂತೆ ಮೇಕೆಗೆ 4 ಕಾಲು ಮತ್ತು 1 ಸೊಂಟ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಒಂದು ಅಚ್ಚರಿ ಘಟನೆ ನೆಡದಿದೆ ಅದುವೇ 8 ಕಾಲು ಮತ್ತು 2 ಸೊಂಟದೊಂದಿಗೆ ಮೇಕೆ ಜನನ ಪಡೆದುಕೊಂಡಿದೆ. ಇದು ಹಲವರಲ್ಲಿ ಆಚ್ಚರಿ ಮೂಡಿಸಿದೆ. ಜುಲೈ 16 ರಂದು ಪಶ್ಚಿಮ ಬಂಗಾಳದಲ್ಲಿ ಮೇಕೆ ಎಂಟು ಕಾಲುಗಳು ಮತ್ತು ಎರಡು ಸೊಂಟಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದೆ. ಈ ಮೇಕೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯ ಬಂಗಾಂವ್‌ನ ಕಲ್ಮೆಘಾ ಪ್ರದೇಶದಲ್ಲಿ ಜನಿಸಿದೆ ಎಮದು ವರದಿ ಮೂಲಕ ತಿಳಿದುಬಂದಿದೆ.


    ಸರಸ್ವತಿ ಮೊಂಡಾಲ್ ತನ್ನ ಮನೆಯಲ್ಲಿ ಹಸುಗಳು ಮತ್ತು ಮೇಕೆಗಳನ್ನು ಸಾಕಿದ್ದಾರೆ. ಅದರಲ್ಲಿ ಒಂದು ಆಡು ಗುರುವಾರ ಎರಡು ಮಕ್ಕಳಿಗೆ ಜನ್ಮ ನೀಡಿದೆ. ಅವುಗಳಲ್ಲಿ ಒಂದು ಸಾಮಾನ್ಯ ರೀತಿ ಜನ್ಮ ಪಡೆದುಕೊಂಡಿದೆ, ಎರಡನೆಯದು ಎಂಟು ಕಾಲುಗಳು ಮತ್ತು ಎರಡು ಸೊಂಟಗಳೊಂದಿಗೆ ಜನ್ಮ ಪಡೆದುಕೊಂಡಿದೆ. ದುರದೃಷ್ಟವಶಾತ್, ಎಂಟು ಕಾಲುಗಳು ಮತ್ತು ಎರಡು ಸೊಂಟಗಳನ್ನು ಹೊಂದಿರುವ ಮೇಕೆ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಸತ್ತುಹೋಗಿದೆ. ಈ ಅಸಾಮಾನ್ಯ ಪುಟ್ಟ ಮೇಕೆ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ, ಸ್ಥಳೀಯರು ಮೇಕೆ ನೋಡಲು ಮೊಂಡಾಲ್ ನಿವಾಸದ ಬಳಿ ಸೇರುತ್ತಾರೆ.


    "ನಾನು ಈ ರೀತಿಯ ಘಟನೆ ನೋಡಿದ್ದು ಇದೇ ಮೊದಲು. ನಾನು ಒಂದು ಕ್ಷಣ ಅಚ್ಚರಿಗೊಂಡೆ. ನಂತರ ಈ ಅಚ್ಚರಿ ತುಂಬ ಕಾಲ ಉಳಿಯಲ್ಲಿಲ್ಲ. ದುರದೃಷ್ಟವಶಾತ್ ಹುಟ್ಟಿದ ಸುಮಾರು ಐದು ನಿಮಿಷಗಳ ನಂತರ ಮರಿ ಮೇಕೆ ಸತ್ತುಹೋಯಿತು. ಆದರೆ, ಒಂದು ಸಮಾಧನದ ವಿಷಯವೆಂದರೆ ತಾಯಿ ಮತ್ತು ಮತ್ತೊಂದು ಮಗು ಚೆನ್ನಾಗಿಯೇ ಇದೆ" ಎಂದು ಮೊಂಡಾಲ್ ಇಂಡಿಯಾ ಟುಡೆಯೊಂದಿಗೆ ಹಂಚಿಕೊಂಡರು.



    China Viral Video: ಒಂದು ದಿನದ ಮಳೆಗೆ ಚೈನಾ ತತ್ತರ; ಮೆಟ್ರೋದೊಳಗೆ ನೀರು..ಪ್ರವಾಹದ ಭಯಾನಕ ದೃಶ್ಯ ನೋಡಿ !

    ಏಪ್ರಿಲ್‌ನಲ್ಲಿ, ಗುಜರಾತ್‌ನಲ್ಲಿ, ಮಾನವ ಮುಖದ ರೂಪಾಂತರೊಂದಿಗೆ ಮೇಕೆ ಜನಿಸಿತ್ತು. ಈ ರೀತಿಯ ರೂಪಾಂತರಿತ ಮೇಕೆಯನ್ನು ದೇವರಂತೆ ಅಲ್ಲಿನ ಜನರು ಪೂಜೆ ಮಾಡಿದರು. ಈ ಪುಟ್ಟ ಮೇಕೆ ಸಾಂಗ್‌ಗಾಟಾದ ಲುಕಾಟಪಿ ನದಿ ದಡದಲ್ಲಿರುವ ಸೆರ್ಟಿಪಾಡಾ ಗ್ರಾಮದಲ್ಲಿ ಜನ್ಮ ಪಡೆದುಕೊಂಡಿತ್ತು.


    ವಿಚಿತ್ರವಾಗಿ ಕಾಣುವ ಈ ಪ್ರಾಣಿಯು ಆಡಿನಂತೆಯೇ ನಾಲ್ಕು ಕಾಲುಗಳು ಮತ್ತು ನಾಲ್ಕು ಕಿವಿಗಳನ್ನು ಹೊಂದಿದೆ. ಆದರೆ ದೇಹದ ಉಳಿದ ಭಾಗವು ಮನುಷ್ಯರಿಗೆ ಹೋಲುತ್ತದೆ. ಅದರ ಹಣೆಯ, ಕಣ್ಣು, ಬಾಯಿ ಮತ್ತು ಗಡ್ಡದ ಭಾಗಗಳು ಮನುಷ್ಯರಿಗೆ ಹೋಲುತ್ತವೆ ಹಾಗೂ ಬಾಲವಿಲ್ಲ. ಈ ಘಟನೆ ಕೂಡ ಜನರಲ್ಲಿ ಅಚ್ಚರಿ ಮೂಡಿಸಿತ್ತು.




    ಅಸಾಮಾನ್ಯವಾಗಿ ಕಾಣುವ ಈ ಪ್ರಾಣಿ ಕೇವಲ 10 ನಿಮಿಷಗಳ ಕಾಲ ಉಳಿದುಕೊಂಡಿತು. ಈ ಮೇಕೆ ಪೂರ್ವಜರ ಪುನರ್ಜನ್ಮ ಎಂದು ಅಲ್ಲಿನ ಜನರು ಭಾವಿಸಿ, ಆ ಮೇಕೆಯನ್ನು ಹೂತುಹಾಕುವ ಮೊದಲು ದೇವರಂತೆ ಪೂಜಿಸಿದರು ಎಂದು ವರದಿ ಮೂಲಕ ತಿಳಿದುಬಂದಿದೆ. ಈ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿತ್ತು.

    First published: