HOME » NEWS » National-international » VIRAL NEWS WOMAN CONSTABLE NAMES LOVER AS HUSBAND TO GET QUARANTINED WITH HIM IN NAGPUR SCT

ಗಂಡನೆಂದು ಸುಳ್ಳು ಹೇಳಿ ಪ್ರೇಮಿಯ ಜೊತೆ ಕ್ವಾರಂಟೈನ್​ ಆದ ಲೇಡಿ ಕಾನ್ಸ್​ಟೇಬಲ್!

Viral News: ಕುತೂಹಲಕಾರಿ ಸಂಗತಿಯೆಂದರೆ ಆ ವ್ಯಕ್ತಿಯ ನಿಜವಾದ ಹೆಂಡತಿಗೆ ತನ್ನ ಗಂಡ ಹೀಗೆ ಬೇರೊಬ್ಬಳೊಂದಿಗೆ ಒಂದೇ ರೂಮಿನಲ್ಲಿ ಕ್ವಾರಂಟೈನ್ ಆಗಿರುವ ವಿಚಾರ ತಿಳಿದಿರಲಿಲ್ಲ. ನಂತರ ಆಕೆಗೆ ತನ್ನ ಗಂಡನ ಅಕ್ರಮ ಸಂಬಂಧದ ವಿಷಯ ತಿಳಿದಿದೆ.

Sushma Chakre | news18-kannada
Updated:July 18, 2020, 7:16 AM IST
ಗಂಡನೆಂದು ಸುಳ್ಳು ಹೇಳಿ ಪ್ರೇಮಿಯ ಜೊತೆ ಕ್ವಾರಂಟೈನ್​ ಆದ ಲೇಡಿ ಕಾನ್ಸ್​ಟೇಬಲ್!
ಸಾಂದರ್ಭಿಕ ಚಿತ್ರ
  • Share this:
ನಾಗ್ಪುರ (ಜು. 17): ಕೊರೋನಾ ಸೋಂಕು ಯಾರೊಬ್ಬರನ್ನೂ ಬಿಟ್ಟಿಲ್ಲ. ಕೊರೋನಾ ಸೋಂಕು ತಗುಲಿರಬಹುದು ಎಂಬ ಅನುಮಾನದಿಂದ ನಾಗ್ಪುರದ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿತ್ತು. ಈ ವೇಳೆ ಅಲ್ಲಿನ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ತನ್ನ ಗಂಡನೊಂದಿಗೆ ಕ್ವಾರಂಟೈನ್ ಆಗುವುದಾಗಿ ಅನುಮತಿ ಪಡೆದಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ!

ನಾಗ್ಪುರದ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಆ ಠಾಣೆಯ ಎಲ್ಲ ಸಿಬ್ಬಂದಿಗಳನ್ನೂ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿತ್ತು. ಆದರೆ, ಆ ಠಾಣೆ ಅವಿವಾಹಿತ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ತನ್ನ ಗಂಡನ ಜೊತೆ ಕ್ವಾರಂಟೈನ್​ನಲ್ಲಿರುತ್ತೇನೆ ಎಂದು ಸುಳ್ಳು ಹೇಳಿ ಪ್ರಿಯಕರನ ಜೊತೆ ಕ್ವಾರಂಟೈನ್ ಆಗಿದ್ದಾರೆ.

ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿರುವ ಆಕೆ ಆತ ಮೊದಲು ನನ್ನ ಗಂಡನಾಗಿದ್ದ. ನಾವಿಬ್ಬರೂ ಡೈವೋರ್ಸ್​ ಪಡೆದು ದೂರವಾದ ಬಳಿಕ ಆತನೇ ನನಗೆ ಬಾಯ್​ಫ್ರೆಂಡ್ ಆಗಿದ್ದ. ಆತ ಪೋಸ್ಟಲ್ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನೂ ನನ್ನನ್ನೊಂದಿಗೆ ಕ್ವಾರಂಟೈನ್​ನಲ್ಲಿ ಇರಲಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಅವರಿಬ್ಬರನ್ನೂ ಪೊಲೀಸ್ ಟ್ರೈನಿಂಗ್ ಸೆಂಟರ್​ನಲ್ಲಿ ಒಟ್ಟಿಗೇ ಕ್ವಾರಂಟೈನ್​ನಲ್ಲಿರಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿದ್ದ ಪ್ರೇಯಸಿಯನ್ನು ನೋಡಲು ಗಡಿ ದಾಟುವ ಯತ್ನ; ಮಹಾರಾಷ್ಟ್ರದ ಯುವಕ ಬಂಧನ 

ಅದಕ್ಕೂ ವಿಚಿತ್ರವಾದ ಸಂಗತಿಯೆಂದರೆ ಆ ವ್ಯಕ್ತಿಯ ನಿಜವಾದ ಹೆಂಡತಿಗೆ ತನ್ನ ಗಂಡ ಹೀಗೆ ಬೇರೊಬ್ಬಳೊಂದಿಗೆ ಒಂದೇ ರೂಮಿನಲ್ಲಿ ಕ್ವಾರಂಟೈನ್ ಆಗಿರುವ ವಿಚಾರ ತಿಳಿದಿರಲಿಲ್ಲ. ಆತ ಮೂರು ದಿನಗಳಾದರೂ ಮನೆಗೆ ಬಾರದ ಕಾರಣ ಆತನನ್ನು ಆಕೆ ಹುಡುಕಾಡುತ್ತಿದ್ದಳು. ನಂತರ ಆಕೆಗೆ ತನ್ನ ಗಂಡನ ಅಕ್ರಮ ಸಂಬಂಧದ ವಿಷಯ ತಿಳಿದಿದೆ. ತಕ್ಷಣ ಕ್ವಾರಂಟೈನ್ ಸೆಂಟರ್ ಬಳಿ ಬಂದ ಆಕೆ ಗಲಾಟೆ ಶುರು ಮಾಡಿದ್ದಾಳೆ. ನಂತರ ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನೂ ನೀಡಿದ್ದಾಳೆ.
Youtube Video

ಮೂಲಗಳ ಪ್ರಕಾರ ಪೊಲೀಸ್ ಕಾನ್ಸ್​ಟೇಬಲ್ ಮತ್ತು ಆಕೆಯ ಪ್ರಿಯಕರ ಕಳೆದ ವರ್ಷ ಸರ್ಕಾರಿ ಪ್ರಾಜೆಕ್ಟ್​ವೊಂದರಲ್ಲಿ ಭೇಟಿಯಾಗಿದ್ದರು. ಆಗ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಆದರೆ ಆಕೆ ತಾವಿಬ್ಬರೂ ಮದುವೆಯಾಗಿದ್ದೆವು ಎಂದು ಸುಳ್ಳು ಮಾಹಿತಿ ನೀಡಿದ್ದಳು. ಇಷ್ಟೆಲ್ಲ ಗಲಾಟೆಯಾದ ಬಳಿಕ ಆಕೆಯ ಪ್ರಿಯಕರನನ್ನು ಬೇರೊಂದು ಕ್ವಾರಂಟೈನ್ ಸೆಂಟರ್​ಗೆ ಶಿಫ್ಟ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by: Sushma Chakre
First published: July 18, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories