HOME » NEWS » National-international » VIRAL NEWS TSNPDCL ORDERS TO PAY 90 THOUSAND TO FARMERS WHOSE COW DIED AFTER ELECTROCUTED IN TELANGANA STG SCT

Telangana: ವಿದ್ಯುತ್‌ ತಂತಿ ತಗುಲಿ ಹಸು ಸಾವು; ರೈತನಿಗೆ 90 ಸಾವಿರ ರೂ. ಪರಿಹಾರ ನೀಡಲು ಆದೇಶ!

ಮೂರು ಹಸು, ಐದು ಎಮ್ಮೆಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದೆ. ಆ ವೇಳೆ ಒಂದು ಹಸು ಸಜೀವ ವೈರ್‌ಗೆ ತಗುಲಿ ಮೃತಪಟ್ಟಿದೆ ಎಂದು ರೈತ ಗ್ರಾಹಕರ ವಿವಾದ ಪರಿಹಾರ ಆಯೋಗದ ಮೊರೆ ಹೋಗಿದ್ದರು.

Trending Desk
Updated:June 21, 2021, 11:57 AM IST
Telangana: ವಿದ್ಯುತ್‌ ತಂತಿ ತಗುಲಿ ಹಸು ಸಾವು; ರೈತನಿಗೆ 90 ಸಾವಿರ ರೂ. ಪರಿಹಾರ ನೀಡಲು ಆದೇಶ!
ಪ್ರಾತಿನಿಧಿಕ ಚಿತ್ರ.
  • Share this:

ಹೈದರಾಬಾದ್ (ಜೂನ್ 21): ವಿದ್ಯುತ್‌ ಸಜೀವ ವೈರ್‌ಗೆ ತಗುಲಿ ಹಸು ಮೃತಪಟ್ಟ ಹಿನ್ನೆಲೆ ತೆಲಂಗಾಣ ವಿದ್ಯುತ್ ನಿಗಮ ನಿಯಮಿತ (TSNPDCL) ಆ ರೈತನಿಗೆ 90 ಸಾವಿರ ರೂ. ಪರಿಹಾರ ನೀಡಲು ಗ್ರಾಹಕರ ವಿವಾದ ಪರಿಹಾರ ಆಯೋಗ ಆದೇಶ ನೀಡಿದ್ದಾರೆ. ತೆಲಂಗಾಣದ ಖಮ್ಮಮ್‌ ಜಿಲ್ಲೆಯ ಚಿಂತಾಕಣಿ ಮಂಡಲದ ರೇಪಲ್ಲಿ ವಡ್ಡಾ ಗ್ರಾಮದ ರೈತ ಮಡಿಪಲ್ಲಿ ಪೆಡ್ಡ ವೆಂಕಟೇಶ್ವರಲು ಈ ಸಂಬಂಧ ಗ್ರಾಹಕರ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಪರಿಹಾರ ನೀಡುವ ವಿರುದ್ಧ ವಿದ್ಯುತ್ ನಿಗಮ ನಿಯಮಿತ ವಾದ ಮಾಡಿದರೂ, ಗ್ರಾಹಕರ ವಿವಾದ ಪರಿಹಾರ ಆಯೋಗ ಪರಿಹಾರ ನೀಡಲು ಆದೇಶ ನೀಡಿದ್ದಾರೆ.


ಮೇ 19, 2020ರಂದು ರೈತ ಮೂರು ಹಸು, ಐದು ಎಮ್ಮೆಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದೆ. ಆ ವೇಳೆ ಒಂದು ಹಸು ಸಜೀವ ವೈರ್‌ಗೆ ತಗುಲಿ ಮೃತಪಟ್ಟಿದೆ ಎಂದು ರೈತ ಗ್ರಾಹಕರ ವಿವಾದ ಪರಿಹಾರ ಆಯೋಗದ ಮೊರೆ ಹೋಗಿದ್ದರು.ದೂರಿನಲ್ಲಿ ಏನಿದೆ?
ಹಸು ವಿದ್ಯುತ್‌ ವೈರ್‌ಗೆ ತಗುಲಿದಾಗ ತಾನು TSNPDCLಗೆ ವಿದ್ಯುತ್ ಕಡಿತಗೊಳಿಸಲು ಹೇಳಿದ್ದೆ. ಅಲ್ಲದೆ, ಎಲೆಕ್ಟ್ರಿಕ್‌ ವೈರಗಳು ಕೇವಲ ಒಂದು ಅಡಿ ಎತ್ತರದಲ್ಲಿದ್ದವು. ನಂತರ, ಚಿಂತಾಕಣಿ ಪೊಲೀಸ್‌ ಠಾಣೆಯಲ್ಲಿ ಹಸು ಮೃತಪಟ್ಟ ಬಗ್ಗೆ ದೂರು ನೀಡಿದ್ದೆ. ಕೇಸ್‌ ದಾಖಲಾದ ಬಳಿಕ ಪಶು ವೈದ್ಯರು ಪರೀಕ್ಷೆ ನಡೆಸಿ ವಿದ್ಯುತ್ ಅವಘಡದಿಂದ ಹಸು ಮೃತಪಟ್ಟಿದೆ ಎಂದು ಹೇಳಿದ್ದರು. ನಾನು ಈ ಹಸುವಿಗೆ 50 ಸಾವಿರ ರೂ. ನೀಡಿದ್ದೆ. ಪ್ರತಿದಿನ ಅದು 8 ಲೀಟರ್ ಹಾಲು ನೀಡುತ್ತಿತ್ತು. ಅದಿಂದ ಹಾಲು ಮಾರಿ ಪ್ರತಿದಿನ 320 ರೂ. ಗಳಿಸುತ್ತಿದ್ದೆ ಎಂದು ರೈತ ಹೇಳಿದ್ದರು.


ಇದನ್ನೂ ಓದಿ: Free Vaccine: 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಇಂದಿನಿಂದ ಉಚಿತ ಕೊರೋನಾ ಲಸಿಕೆ; ಯೋಗ ದಿನಕ್ಕೆ ಮೋದಿ ಕೊಡುಗೆ

ಗಾಳಿಗೆ ವಿದ್ಯುತ್‌ ವೈರ್‌ ನೆಲಕ್ಕೆ ವಾಲುತ್ತಿತ್ತು. ಹಸು ಆ ವೈರ್‌ ಅನ್ನು ತುಳಿದು ಮೃತಪಟ್ಟಿದೆ ಎಂದು TSNPDCL ಹೇಳಿತ್ತು.


ಎರಡೂ ಕಡೆಯ ವಾದ ಕೇಳಿದ್ದ ಗ್ರಾಹಕರ ವಿವಾದ ಪರಿಹಾರ ಆಯೋಗ, ''ಗಾಳಿಗೆ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದು, ವೈರ್‌ಗಳು ವಾಲುವಂತಿದ್ದರೆ ಹಾಗೂ ರಸ್ತೆಗಳಲ್ಲಿ, ಜಮೀನಿನಲ್ಲಿ ಬಿದ್ದಿದ್ದರೆ, ಎಲೆಕ್ಟ್ರಿಕ್‌ ವೈರ್‌ಗಳನ್ನು ಹಾಗೂ ಕಂಬಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ವಿದ್ಯುತ್ ಇಲಾಖೆಯ ಕರ್ತವ್ಯ. ಜನರು ಹಾಗೂ ಪ್ರಾಣಿಗಳ ಪ್ರಾಣ ಕಾಪಾಡಬೇಕು ಹಾಗೂ ದೂರುಗಳು ಬಂದಾಗ ಪರಿಹರಿಸಬೇಕು ಎಂದೂ ಆಯೋಗ ಹೇಳಿತ್ತು.

ಆದರೆ, ಹಸು, ಎಮ್ಮೆಗಳನ್ನು ಮೇಯಿಸುವ ಜಾಗದಲ್ಲಿ ರೈತ ಇರಲಿಲ್ಲ. ಅವುಗಳನ್ನು ಹಾಗೇ ಬಿಟ್ಟಿದ್ದರು. ರೈತ ಆ ವೇಳೆ ಆ ಸ್ಥಳದಲ್ಲಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎಂದು ವಿದ್ಯುತ್ ಇಲಾಖೆ ವಾದ ಮಾಡಿತ್ತು. ಆದರೆ, ಇದನ್ನೊಪ್ಪದ ಗ್ರಾಹಕರ ವಿವಾದ ಪರಿಹಾರ ಆಯೋಗ, ರೈತ ಆ ಸ್ಥಳದಲ್ಲಿರಲಿಲ್ಲ ಎನ್ನುವುದಕ್ಕೆ ವಿದ್ಯುತ್ ಇಲಾಖೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂದು ಹೇಳಿದ್ದಾರೆ.Youtube Video

ಅಲ್ಲದೆ, ರೈತ ತನ್ನ ಆದಾಯ ಹಾಗೂ ಜಾನುವಾರನ್ನು ಕಳೆದುಕೊಂಡಿದ್ದಾನೆ. ವಿದ್ಯುತ್ ಲೈನ್‌ಗಳನ್ನು ವಿದ್ಯುತ್ ಇಲಾಖೆ ಸರಿಯಾಗಿ ನಿರ್ವಹಿಸದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಘಟನೆ ಸಂಭವಿಸಿದೆ. ಈ ಹಿನ್ನೆಲೆ 50 ಸಾವಿರ ರೂ. ಪರಿಹಾರದ ಜತೆಗೆ 40 ಸಾವಿರ ರೂ. ಎಕ್ಸ್‌ಗ್ರೇಷಿಯಾ ಹಣವನ್ನು ರೈತನಿಗೆ ನೀಡಲು ವಿದ್ಯುತ್‌ ಇಲಾಖೆಗೆ ಗ್ರಾಹಕರ ಪರಿಹಾರ ಆಯೋಗ ಆದೇಶ ನೀಡಿದೆ.


Published by: Sushma Chakre
First published: June 21, 2021, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories