• Home
  • »
  • News
  • »
  • national-international
  • »
  • Parle-G Biscuit: ವೈರಲ್ ಆಯ್ತು ಪಾರ್ಲೆ-ಜಿ ಹೊಸ ಫ್ಲೇವರ್‌! ನೀವೂ ಒಮ್ಮೆ ಟ್ರೈ ಮಾಡಿ

Parle-G Biscuit: ವೈರಲ್ ಆಯ್ತು ಪಾರ್ಲೆ-ಜಿ ಹೊಸ ಫ್ಲೇವರ್‌! ನೀವೂ ಒಮ್ಮೆ ಟ್ರೈ ಮಾಡಿ

ವೈರಲ್ ಫೋಟೋ

ವೈರಲ್ ಫೋಟೋ

ಟ್ವಿಟರ್‌ನಲ್ಲಿ ಪಾರ್ಲೆಜಿಯ ಹೊಸ ಫ್ಲೇವರ್‌ನ ಪ್ಯಾಕ್ ಅನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಬಾಲ್ಯ ಕಾಲದ ಸುಂದರ ನೆನಪುಗಳಲ್ಲಿ ಪಾರ್ಲೆ-ಜಿ ಬಿಸ್ಕತ್ತು ಕೂಡ ಒಂದು. ಮನೆಗೆ ಬರುವ ನೆಂಟರು ಮಕ್ಕಳಿಗಾಗಿ ಹೆಚ್ಚಾಗಿ ಈ ಬಿಸ್ಕತ್ತನೇ ತರುತ್ತಿದ್ದರು ಹಾಗೂ ನೀರು, ಚಹಾ, ಹಾಲು ಎರಡರಲ್ಲೂ ಅದ್ದಿಕೊಂಡು ಬಿಸ್ಕತ್ತನ್ನು ಸವಿಯುವ ಗಮ್ಮತ್ತೇ ಬೇರೆಯಾಗಿತ್ತು. ಆ ದಿನಗಳಲ್ಲಿ ಹೆಚ್ಚಿನ ಮಳಿಗೆಗಳಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಈ ಬಿಸ್ಕತ್ತಿನದ್ದೇ ರಾಜ್ಯಭಾರವಾಗಿತ್ತು. ಪಾರ್ಲೆಜಿಯ (Parle-G Biscuit) ಹಳದಿ ಬಣ್ಣದ ಪ್ಯಾಕೆಟ್ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಪಾರ್ಲೆ-ಜಿ ಯ ಹೊಸ ಫ್ಲೇವರ್‌ನ ಫೋಟೋ ಇದೀಗ ವೈರಲ್ ಆಗಿದ್ದು  (Viral Photo) ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.


ಹೊಸ ಪಾರ್ಲೆ-ಜಿ ಫ್ಲೇವರ್
ಟ್ವಿಟರ್‌ನಲ್ಲಿ ಪಾರ್ಲೆಜಿಯ ಹೊಸ ಫ್ಲೇವರ್‌ನ ಪ್ಯಾಕ್ ಅನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದು ಹಿಂದಿನ ಪಾರ್ಲೆಜಿಯಂತಿರದೇ ಹೊಸ ಮಾದರಿಯ ಪ್ಯಾಕೆಟ್ ಹಾಗೂ ವಿನ್ಯಾಸದ ಜೊತೆಗೆ ಓಟ್ಸ್ ಹಾಗೂ ಬೆರಿ ಫ್ಲೇವರ್‌ನಲ್ಲಿತ್ತು. ಪಾರ್ಲೆ-ಜಿ ಪ್ರಿಯರಿಗೆ ಈ ಹೊಸ ವಿನ್ಯಾಸ ಮತ್ತು ಫ್ಲೇವರ್ ಆಶ್ವರ್ಯವನ್ನುಂಟು ಮಾಡಿದ್ದು ಸುಳ್ಳಲ್ಲ.


ವಿವಿಧ ಫ್ಲೇವರ್​ಗಳಲ್ಲಿ ಸಿಗುತ್ತೆ
ಪ್ಯಾಕೆಟ್‌ನ ಮೇಲೆ ಓಟ್ಸ್ ಹಾಗೂ ಬೆರಿ ಎಂದು ಲೇಬಲ್ ಹೊಂದಿರುವ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೆಟ್ ಅನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು ತಮ್ಮ ಅಧಿಕೃತ ಬಳಕೆದಾರ ಹೆಸರು @hojevlo ನಲ್ಲಿ ಪ್ಯಾಕೆಟ್‌ನ ಹೊಸ ವಿನ್ಯಾಸವನ್ನು ಬಹಿರಂಗಗೊಳಿಸಿದ್ದಾರೆ. ಪ್ರಸ್ತುತ ಸಂಸ್ಥೆಯು ವಿವಿಧ ಫ್ಲೇವರ್‌ಗಳಲ್ಲಿ ಬಿಸ್ಕತ್ತನ್ನು ಬಿಡುಗಡೆ ಮಾಡಿದ್ದು ದೇಶದ ಮಾರುಕಟ್ಟೆಗಳಲ್ಲಿ ಕೂಡ ದೊರೆಯುತ್ತಿದೆ.


ಬಳಕೆದಾರರು ಮೆಚ್ಚಿಕೊಂಡ ಫೋಟೋ
ಟ್ವಿಟರ್‌ನಲ್ಲಿ ಹಂಚಿಕೊಂಡ ಫೋಟೋವನ್ನು 185.9k ಬಳಕೆದಾರರು ವೀಕ್ಷಿಸಿದ್ದಾರೆ. ಈ ಚಿತ್ರ 3,000 ಕ್ಕೂ ಲೈಕ್‌ಗಳನ್ನು ಪಡೆದುಕೊಂಡಿದೆ. ಹೊಸ ಪಾರ್ಲೆ-ಜಿ ಫ್ಲೇವರ್‌ಗೆ ಬಳಕೆದಾರರು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು ಕೆಲವರಿಗೆ ಹೊಸ ಮಾದರಿಯ ಪಾರ್ಲೆ-ಜಿ ಇಷ್ಟವಾಗಿದ್ದರೆ ಇನ್ನು ಕೆಲವರು ಹಳೆಯ ಮಾದರಿಯ ಪಾರ್ಲೆ-ಜಿಯೇ ಇರಲಿ ಎಂದು ತಿಳಿಸಿದ್ದಾರೆ.


ಬಾಲ್ಯದ ನೆನಪುಗಳನ್ನು ಜ್ಞಾಪಿಸಿದ ಟ್ವಿಟರ್ ಬಳಕೆದಾರರು
ಬಾಲ್ಯದ ಸವಿನೆನಪುಗಳೊಂದಿಗೆ ಮಿಳಿತಗೊಂಡಿರುವ ಅದೇ ಪಾರ್ಲೆ-ಜಿಯ ಫ್ಲೇವರ್ ನಮಗೆ ಬೇಕು ಎಂದು ಕೆಲವು ಬಳಕೆದಾರರು ತಮ್ಮ ಗತಕಾಲದ ಸ್ಮರಣೆಗಳನ್ನು ಸ್ಮರಿಸಿದ್ದಾರೆ. ಇನ್ನು ಕೆಲವರು ಹೊಸ ಹೊಸ ಟ್ರೆಂಡ್ ಹಾಗೂ ಬದಲಾವಣೆಗಳಿಗೆ ಅನುಸಾರವಾಗಿ ಪಾರ್ಲೆ-ಜಿ ಕೂಡ ಬದಲಾಗಬೇಕು. ಹಾಗಾಗಿ ಹೊಸ ಫ್ಲೇವರ್ ಅನ್ನು ಆನಂದಿಸಲು ಉತ್ಸುಕರಾಗಿದ್ದೇವೆ ಎಂದು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ.


ಹಳೆಯ ಪಾರ್ಲೆ-ಜಿಯೇ ಇರಲಿ
ಅನೇಕ ನೆಟ್ಟಿಗರು, ಬಾಲ್ಯದಲ್ಲಿ ತಾವು ಸವಿಯುತ್ತಿದ್ದ ಪಾರ್ಲೆ-ಜಿ ಬಿಸ್ಕತ್ತು, ಬಿಸ್ಕತ್ತು ಬರಿದಾದ ನಂತರ ಅದರ ಖಾಲಿ ಪ್ಯಾಕೆಟ್‌ಗಳಿಂದ ಆಡುತ್ತಿದ್ದ ಆಟಗಳು, ಬಿಸ್ಕತ್ತಿನ ಸುವಾಸನೆ ಹೀಗೆ ತಮ್ಮ ಬಾಲ್ಯಕಾಲದ ಸುಂದರ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.


ಆ ಸುಂದರ ಬಾಲ್ಯ ಮರಳಿ ಬರಬಾರದೇ ಎಂದು ಬೇಸರ ತೋಡಿಕೊಂಡಿದ್ದಾರೆ, ಹಳೆಯ ಪಾರ್ಲೆ-ಜಿ ಮರಳಿ ಬರಬಹುದು ಎಂಬ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.


ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆ
ಟ್ವಿಟರ್ ಬಳಕೆದಾರರ ಕಾಮೆಂಟ್‌ಗಳು ಬಾಲ್ಯದ ಆ ಸುಂದರ ನೆನಪುಗಳನ್ನು ಪುನಃ ಮರುಕಳಿಸುವಂತೆ ಮಾಡಿದ್ದು ಮಾತ್ರವಲ್ಲದೆ ಪಾರ್ಲೆ-ಜಿ ಬಿಸ್ಕತ್ತಿನಿಂದ ಮಾಡುತ್ತಿದ್ದ ಅನೇಕ ತುಂಟಾಟಗಳನ್ನು ನೆನಪಿಸುವಂತಿವೆ.


ಇದನ್ನೂ ಓದಿ: Sabarimala Temple: ಶಬರಿಮಲೆ ದೇವಸ್ಥಾನದ ಬಳಿ ವಿಮಾನ ನಿಲ್ದಾಣ ನಿರ್ಮಿಸಲು 2,570 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ


ಹಾಲಿಗೆ ಅದ್ದಿ ಪಾರ್ಲೆ-ಜಿ ಬಿಸ್ಕತ್ತನ್ನು ತಿನ್ನುವ ಸಮಯದಲ್ಲಿ ಬಿಸ್ಕತ್ತಿನ ಅರ್ಧಭಾಗ ಹಾಗೆಯೇ ಲೋಟದಲ್ಲಿ ಕರಗಿ ಹೋಗುತ್ತಿತ್ತು ಮತ್ತು ಅದನ್ನು ಚಮಚ ಬಳಸಿ ಸೇವಿಸುತ್ತಿದ್ದೆವು ಎಂದು ಒಬ್ಬರು ಬಳಕೆದಾರರು ತಿಳಿಸಿದ್ದಾರೆ.


ಹೊಸ ಫ್ಲೇವರ್‌ಗೆ ಬಳಕೆದಾರರು ಫನ್ನಿ ಕಾಮೆಂಟ್‌ಗಳು
ಟ್ವಿಟರ್ ಬಳಕೆದಾರರು ಹೊಸ ಪ್ಯಾಕ್‌ನ ಫೋಟೋವನ್ನು ಹಂಚಿಕೊಂಡು ಆತ್ಮೀಯರೇ ಹೊಸ ಪಾರ್ಲೆ-ಜಿಯ ಪ್ಯಾಕ್ ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಬಂದು ಅದಾಗಲೇ 4-5 ತಿಂಗಳುಗಳೇ ಕಳೆದಿವೆ ಎಂದು ತಿಳಿಸಿದ್ದಾರೆ.


ನಂತರ ಪಾರ್ಲೆ-ಜಿಯ ಎಲ್ಲಾ ಫ್ಲೇವರ್ ಬಿಸ್ಕತ್ತುಗಳನ್ನು ಫೋಟೋ ಸಮೇತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ಫನ್ನಿಯಾಗಿರುವ ಕಾಮೆಂಟ್‌ಗಳಿಂದ ನಗೆಚಟಾಕಿಗಳನ್ನು ಹಾರಿಸಿದ್ದಾರೆ.


ಇದನ್ನೂ ಓದಿ: Sonia Gandhi Health: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಗಂಗಾ ರಾಮ್​ ಆಸ್ಪತ್ರೆಗೆ ದಾಖಲು!


ಇನ್ನು ಕೆಲವರು ಹೊಸ ಪಾರ್ಲೆ-ಜಿ ಪ್ಯಾಕ್‌ಗೆ 90 ರ ದಶಕದ ಮಕ್ಕಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಚಿತ್ರವೊಂದರ ಹಾಸ್ಯ ತುಣುಕನ್ನು ಜೋಡಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: