• Home
  • »
  • News
  • »
  • national-international
  • »
  • Viral News: ಈಜಿಪ್ಟ್‌ನಲ್ಲಿ ಚಿನ್ನದ ನಾಲಿಗೆ ಇರುವ ಮಮ್ಮಿಗಳು ಪತ್ತೆ! ಇನ್ನೂ ಏನೆಲ್ಲಾ ಸಿಕ್ಕಿವೆ ಗೊತ್ತಾ?

Viral News: ಈಜಿಪ್ಟ್‌ನಲ್ಲಿ ಚಿನ್ನದ ನಾಲಿಗೆ ಇರುವ ಮಮ್ಮಿಗಳು ಪತ್ತೆ! ಇನ್ನೂ ಏನೆಲ್ಲಾ ಸಿಕ್ಕಿವೆ ಗೊತ್ತಾ?

ಮಮ್ಮಿ

ಮಮ್ಮಿ

ಈ ಪ್ರದೇಶದಲ್ಲಿ ಸಮಾಧಿಗಳನ್ನು ತನಿಖೆ ಮಾಡುವ ತಜ್ಞರು ಬಾಯಿಯಲ್ಲಿ ಮಾನವ ನಾಲಿಗೆಯ ಆಕಾರದಲ್ಲಿರುವ ಚಿನ್ನದ ಚಿಪ್‌ಗಳನ್ನು ಬಹುತೇಕ ಎಲ್ಲಾ ಮಮ್ಮಿಗಳಲ್ಲೂ ಕಂಡುಕೊಂಡಿದ್ದಾರೆ.

  • Share this:

    ಈಜಿಫ್ಟ್‌(Egypt), ಅನೇಕ ಪ್ರವಾಸಿಗರ ಮತ್ತು ಪುರಾತತ್ವಶಾಸ್ತ್ರಜ್ಞರ ನೆಚ್ಚಿನ ಸ್ಥಳ. ಇದು ಮಮ್ಮಿ(Mummy), ಪಿರಮಿಡ್‌(Pyramid)ನಂತಹ ದಂತಕಥೆಗಳಿಗೆ ಹೆಸರುವಾಸಿ. ಅದರಲ್ಲೂ ಈ ಮಮ್ಮಿಗಳ ಕಥೆಗೆ ಮತ್ತು ಅವುಗಳು ಇನ್ನೂ ಲಭಿಸುತ್ತಿರುವ ಬಗ್ಗೆ ಯಾವಾಗಲೂ ಈಜಿಫ್ಟ್(Egypt)‌ ಸುದ್ದಿಯಲ್ಲಿರುತ್ತದೆ.


    ಚಿನ್ನದ ನಾಲಿಗೆ ಇರುವ ಮಮ್ಮಿಗಳು ಪತ್ತೆ


    ಮಮ್ಮಿಗಳ ದೇಶ ಈಜಿಪ್ಟ್‌ನಲ್ಲಿ ಮಮ್ಮಿಗಳು ಪತ್ತೆಯಾಗುವುದು ಸರ್ವೇಸಾಮಾನ್ಯವಾದ ವಿಚಾರ. ಇಲ್ಲಿ ಅಗೆದಷ್ಟು, ಬಗೆದಷ್ಟು ಪ್ರಾಚೀನ ಮಮ್ಮಿಗಳು ಸಿಗುತ್ತಲೇ ಇರುತ್ತವೆ. ಇತ್ತೀಚಿನ ಅಧ್ಯಯನದಲ್ಲೂ ಮಮ್ಮಿಗಳು ಪತ್ತೆಯಾಗಿದ್ದು, ವಿಶೇಷ ಎಂದರೆ ದೊರೆತಿರುವ ಎಲ್ಲಾ ಮಮ್ಮಿಗಳು ಚಿನ್ನದ ನಾಲಿಗೆಯನ್ನು ಹೊಂದಿವೆ ಎಂದು ವರದಿಯಾಗಿದೆ.
    ಈಜಿಪ್ಟ್‌ನ ಪುರಾತತ್ತ್ವಜ್ಞರು ಬಾಯಿಯಲ್ಲಿ ಗಟ್ಟಿ ಚಿನ್ನದ ನಾಲಿಗೆ ಆಕಾರದ ಚಿಪ್‌ ರೀತಿಯ ವಸ್ತುವನ್ನು ಹೊಂದಿರುವ ಅನೇಕ ಪ್ರಾಚೀನ ಮಮ್ಮಿಗಳನ್ನು ಕಂಡುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್‌ ಬಹಿರಂಗಪಡಿಸಿದೆ. ಲಭ್ಯವಾಗಿರುವ ಮಮ್ಮಿಗಳು ಹದಗೆಟ್ಟಿದ್ದು, ಉತ್ತಮ ಸ್ಥಿತಿಯಲಿಲ್ಲ ಎಂಬುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ


    300 ರಿಂದ 640 BCE ಕಾಲದ ಮಮ್ಮಿಗಳು


    ಆವಿಷ್ಕಾರವನ್ನು ಕೈರೋದಿಂದ ಸುಮಾರು 40 ಮೈಲುಗಳಷ್ಟು ಉತ್ತರಕ್ಕೆ ಕೇಂದ್ರ ನೈಲ್ ಡೆಲ್ಟಾದಲ್ಲಿ ಕ್ವಿಸ್ನಾ ನೆಕ್ರೋಪೊಲಿಸ್ ನಲ್ಲಿ ಮಾಡಲಾಗಿದೆ. ಸಂರಕ್ಷಿಸಲ್ಪಟ್ಟ ಶವಗಳು 300 ರಿಂದ 640 BCE ವರೆಗಿನವು ಎಂದು ಹೇಳಲಾಗಿದೆ. ಇನ್ನೂ ಕ್ವಿಸ್ನಾ ನೆಕ್ರೋಪೊಲಿಸ್ ಅನ್ನು 1989 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಹಲವಾರು ಉತ್ಖನನಗಳಿಗೆ ಈ ಪ್ರದೇಶ ಸಾಕ್ಷಿಯಾಗಿದೆ. ಇದು ಪ್ರಾಚೀನ ನಾಗರಿಕತೆಗಳ ಬಗ್ಗೆ ವ್ಯಾಪಕವಾದ ಮಾಹಿತಿಯನ್ನು ಒಳಗೊಂಡಿದೆ ಎನ್ನುತ್ತಾರೆ ತಜ್ಞರು.


    ಇದನ್ನೂ ಓದಿ: Iran: ಭಾರತದ ಬಾಸ್ಮತಿ ಅಕ್ಕಿ, ಚಹಾ ಖರೀದಿಯನ್ನು ನಿಲ್ಲಿಸಿದ ಇರಾನ್- ಕಾರಣ ಏನು?


    ನಾಲಿಗೆಯ ಆಕಾರದಲ್ಲಿರುವ ಚಿನ್ನದ ಚಿಪ್‌


    ಈ ಪ್ರದೇಶದಲ್ಲಿ ಸಮಾಧಿಗಳನ್ನು ತನಿಖೆ ಮಾಡುವ ತಜ್ಞರು ಬಾಯಿಯಲ್ಲಿ ಮಾನವ ನಾಲಿಗೆಯ ಆಕಾರದಲ್ಲಿರುವ ಚಿನ್ನದ ಚಿಪ್‌ಗಳನ್ನು ಬಹುತೇಕ ಎಲ್ಲಾ ಮಮ್ಮಿಗಳಲ್ಲೂ ಕಂಡುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಉಲ್ಲೇಖಿಸಿದಂತೆ ಸುಪ್ರೀಂ ಕೌನ್ಸಿಲ್ ಫಾರ್ ಆರ್ಕಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ ಮುಸ್ತಫಾ ವಜಿರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    "ನಾಲಿಗೆ ತೆಗೆದು ಚಿನ್ನವನ್ನು ಹಾಕಲಾಗಿದೆ"


    ಈ ಬಗ್ಗೆ ಪ್ರತಿಕ್ರಿಯಿಸಿದ ತಜ್ಞರು "ಸತ್ತವರ ನಿಜವಾದ ನಾಲಿಗೆಯನ್ನು ತೆಗೆದುಹಾಕಲಾಗಿದೆ ಮತ್ತು ನಾಲಿಗೆಯನ್ನು ಅನುಕರಿಸುವ ಚಿನ್ನದ ತುಂಡನ್ನು ಅಲ್ಲಿ ಇರಿಸಲಾಗಿದೆ. ಇದರಿಂದಾಗಿ ಸತ್ತವರು ಪ್ರಾಚೀನ ಈಜಿಪ್ಟಿನ "ಲಾರ್ಡ್ ಆಫ್ ದಿ ಅಂಡರ್‌ವರ್ಲ್ಡ್" ಒಸಿರಿಸ್‌ನೊಂದಿಗೆ ಸಂವಹನ ನಡೆಸಬಹುದು ಎಂದು ತಜ್ಞರು ಹೇಳುತ್ತಾರೆ.


    ಇನ್ನೂ ಯಾವೆಲ್ಲಾ ವಸ್ತುಗಳು ಪತ್ತೆಯಾಗಿವೆ?


    ನಾಲಿಗೆ ಆಕಾರದಲ್ಲಿರುವ ಚಿನ್ನದ ಚಿಪ್‌ಗಳ ಜೊತೆಗೆ ಸ್ಮಶಾನದಲ್ಲಿ ಜೀರುಂಡೆಗಳು ಮತ್ತು ಕಮಲದ ಹೂವುಗಳಾಗಿ ವಿನ್ಯಾಸಗೊಳಿಸಲಾದ ಚಿನ್ನದ ಚಿಪ್‌ಗಳು ಸಹ ದೊರೆತಿವೆ. ಜೊತೆಗೆ ಅಂತ್ಯಕ್ರಿಯೆಯ ತಾಯತಗಳು, ಮಣ್ಣಿನ ಪಾತ್ರೆಗಳು, ಅಂಟುಗಳು ಮತ್ತು ಎಂಬಾಮಿಂಗ್ ಪ್ರಕ್ರಿಯೆಯಲ್ಲಿ ಬಳಸಿದ ಟಾರ್, ಮಾನವ ಆಕಾರದ ಮರದ ಶವಪೆಟ್ಟಿಗೆಯ ಅವಶೇಷಗಳು ಮತ್ತು ಹಲವಾರು ತಾಮ್ರದ ಉಗುರುಗಳು ಸಹ ಪತ್ತೆಯಾಗಿವೆ.
    ಈಜಿಪ್ಟಿನ ಪುರಾತತ್ವ ವಲಯದ ಅಧ್ಯಕ್ಷರಾದ ಡಾ ಐಮನ್ ಅಶ್ಮಾವಿ ಅವರು ಮಾತನಾಡಿ, ಪ್ರತಿ ಸಮಾಧಿಯ ಬಳಿಯೂ ವಿಭಿನ್ನ ವಿಧಿಗಳು ಮತ್ತು ವಿಧಾನಗಳ ಪುರಾವೆಗಳು ದೊರೆತಿವೆ ಎಂದಿದ್ದಾರೆ.


    ಈ ಹಿಂದೆಯೂ ಲಭಿಸಿದ್ದ ಲೋಹದ ಮಮ್ಮಿಗಳು


    ಈಜಿಪ್ಟ್‌ನಲ್ಲಿ ದುಬಾರಿ ಲೋಹದ ಮಮ್ಮಿಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2021 ರಲ್ಲೂ ಈ ಘಟನೆಗಳು ನಡೆದಿವೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 2021 ರಲ್ಲಿ, ಪುರಾತತ್ತ್ವ ಶಾಸ್ತ್ರಜ್ಞರು 2,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯನ್ನು ಅದರ ಬಾಯಿಯಲ್ಲಿ ನಾಲಿಗೆಯ ಆಕಾರದ ಚಿನ್ನದ ಚಿಪ್ ಇರುವ ಮಮ್ಮಿಗಳನ್ನು ಟಪೊಸಿರಿಸ್ ಮ್ಯಾಗ್ನಾದಲ್ಲಿ ಕಂಡುಹಿಡಿದರು, ಇದನ್ನು ಅಲೆಕ್ಸಾಂಡ್ರಿಯಾದ ಸಮೀಪವಿರುವ "ಗ್ರೇಟ್ ಗೋರಿ ಆಫ್ ಒಸಿರಿಸ್" ಎಂದು ಕರೆಯಲಾಗುತ್ತದೆ.

    Published by:Latha CG
    First published: