Viral News: ಈ ಕೊಳದ ನೀರಲ್ಲಿ ಸ್ನಾನ ಮಾಡಿದ್ರೆ ಎಲ್ಲಾ ಆಸೆ ಈಡೇರುತ್ತಂತೆ!

ಪವಿತ್ರ ಕೊಳ

ಪವಿತ್ರ ಕೊಳ

ದೂರದ ಪಶ್ಚಿಮ ಬಂಗಾಳದಲ್ಲೂ ಸಹ ಇಂತಹದೇ ಒಂದು ಪವಾಡ ಕೊಳ ಇದೆಯಂತೆ ನೋಡಿ. 

  • Share this:

ಸಾಮಾನ್ಯವಾಗಿ ನಮ್ಮಲ್ಲಿ ತಿಂಗಳುಗಳವರೆಗೆ ಹುಷಾರಿಲ್ಲದೆ ಇದ್ದರೆ ಮನೆಯಲ್ಲಿ ಹಿರಿಯರು ಎಂದರೆ ಅಜ್ಜಿ ತಾತ ನಮಗೆ ‘ತುಂಬಾನೇ ನಂಬಿಕೆ ಇರುವಂತಹ ದೇವರ ಸನ್ನಿಧಿಯಲ್ಲಿ ಇರುವಂತಹ ಕೊಳದಲ್ಲಿ (Pond) ಹೋಗಿ ಅಲ್ಲಿನ ನೀರಿನಲ್ಲಿ ಸ್ನಾನ ಮಾಡಿ ಬಾ, ಎಲ್ಲವೂ ಒಳ್ಳೆಯದಾಗುತ್ತದೆ’ ಅಂತ ಹೇಳುವುದನ್ನು ನಾವು ಆಗಾಗ ಕೇಳಿರುತ್ತೇವೆ ಅಂತ ಹೇಳಬಹುದು.


ಹೌದು, ಕೆಲವೊಂದು ದೇವರ ಸನ್ನಿಧಿಯಲ್ಲಿರುವ ಕೊಳದಲ್ಲಿನ ನೀರಿಗೆ ಚಿಕ್ಕಮಕ್ಕಳಿಗೆ ಆದ ದೃಷ್ಟಿ, ದೊಡ್ಡವರಿಗೆ ಆದ ಅನಾರೋಗ್ಯವನ್ನು ನಿವಾರಿಸುವ ಶಕ್ತಿ ಇರುತ್ತದೆ ಅಂತ ಅನೇಕರು ನಂಬುತ್ತಾರೆ ಅಂತ ಹೇಳಬಹುದು. ಮತ್ತೆ ನಿಜವಾಗಿಯೂ ಅಂತಹ ಶಕ್ತಿ ಇರುವಂತಹ ದೇವರ ಸನ್ನಿಧಿಯಲ್ಲಿ ಇರುವ ಕೊಳಗಳು ನಮ್ಮ ನಿಮ್ಮ ಊರುಗಳ ಸುತ್ತಮುತ್ತಲೂ ಸಹ ಇರಬಹುದು.


ಅನಾರೋಗ್ಯ ಕಡಿಮೆಯಾಗುತ್ತಂತೆ
ಇದಷ್ಟೇ ಅಲ್ಲದೆ, ಎಷ್ಟೋ ಜನರು ದೇವರ ಸನ್ನಿಧಿಯಲ್ಲಿ ಇರುವ ನೀರನ್ನು ತೆಗೆದುಕೊಂಡು ಬಂದು ಕುಡಿಯುತ್ತಾರೆ. ಅವರಿಗೆ ಆ ದೇವರು ತಮ್ಮಲ್ಲಿ ಇರುವ ಅನಾರೋಗ್ಯವನ್ನು ನಿವಾರಿಸುತ್ತಾನೆ ಅನ್ನೋ ನಂಬಿಕೆ ತುಂಬಾನೇ ದೃಢವಾಗಿರುತ್ತದೆ ಅಂತ ಹೇಳಬಹುದು.


ಭಕ್ತರ ಪಾಲಿಗೆ ಆಸೆಯನ್ನು ಈಡೇರಿಸುವ ಕೊಳವಂತೆ!
ಈಗೇಕೆ ಇದರ ಬಗ್ಗೆ ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು ಅಲ್ಲವೇ? ದೂರದ ಪಶ್ಚಿಮ ಬಂಗಾಳದಲ್ಲೂ ಸಹ ಇಂತಹದೇ ಒಂದು ಪವಾಡ ಕೊಳ ಇದೆಯಂತೆ ನೋಡಿ. ಹೌದು, ಪಶ್ಚಿಮ ಬಂಗಾಳದಲ್ಲಿರುವಂತಹ ಉತ್ತರ 24 ಪರಗಣ ಜಿಲ್ಲೆಯ ಹಬ್ರಾದ ಬನಿಪುರದ ಇಟ್ನಾ ಕಾಲೋನಿಯಲ್ಲಿರುವ ಕಮೋನಾ ಕೊಳವನ್ನು ಆಸೆಗಳ ಕೊಳ ಎಂದೂ ಕರೆಯಲಾಗುತ್ತದೆ.


ಅತೀಂದ್ರಿಯ ಶಕ್ತಿ ಇದೆಯಂತೆ!
ಇದನ್ನು ಆಸೆಗಳ ಕೊಳ ಅಂತ ಕರೆಯುವುದಕ್ಕೆ ಇಲ್ಲೊಂದು ಬಲವಾದ ಕಾರಣವಿದೆ ನೋಡಿ. ಈ ಕೊಳದಲ್ಲಿ ಸ್ನಾನ ಮಾಡಿದರೆ ನಮಗೆ ಇರುವ ಆಸೆ ಮತ್ತು ಬಯಕೆಗಳೆಲ್ಲವೂ ಈಡೇರುತ್ತವೆ. ಅಂತಹದೊಂದು ಅತೀಂದ್ರಿಯ ಶಕ್ತಿಗಳನ್ನು ಈ ಕೊಳ ಹೊಂದಿದೆ ಎಂದು ನಂಬಲಾಗಿದೆ. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ತಮ್ಮ ಕೆಲಸ ಈಡೇರುವ, ಆರೋಗ್ಯವನ್ನು ಸುಧಾರಿಸಿಕೊಳ್ಳುವ ಅಥವಾ ಮಕ್ಕಳ ಆಸೆಗಳನ್ನು ಬೇಡಿಕೊಳ್ಳಲು ತಂದೆ ತಾಯಂದಿರು.. ಹೀಗೆ ಪ್ರತಿದಿನ ಈ ಕೊಳಕ್ಕೆ ಅನೇಕ ಭಕ್ತರು ಬಂದು ಸ್ನಾನ ಮಾಡಿಕೊಂಡು ಹೋಗುತ್ತಾರೆ ಅಂತ ಹೇಳಬಹುದು.


ಕಾಮೋನಾ ಕೊಳದಲ್ಲಿನ ನೀರಿಗೆ ವಿಶೇಷ ಶಕ್ತಿ ಇದೆಯಂತೆ!
ಕಮೋನಾ ಕೊಳದಲ್ಲಿನ ನೀರಿನ ವಿಶೇಷ ಮಹತ್ವವನ್ನು ಸ್ಥಳೀಯ ಜನರು ತುಂಬಾನೇ ಬಲವಾಗಿ ನಂಬುತ್ತಾರೆ ಎಂದು ಸ್ಥಳೀಯ ಮೂಲಗಳು ಹೇಳುತ್ತವೆ. ಇದು ಹರಿಚಂದ್ ಗುರುಚಂದ್ ಅವರ ದೇವಾಲಯವನ್ನು ಅದರ ದಡದಲ್ಲಿ ನಿರ್ಮಿಸಲು ಕಾರಣವಾಯಿತು.


ಇದನ್ನೂ ಓದಿ: Love: ಮುನಿಸಿಕೊಂಡ ಗೆಳತಿಯ ಮನವೊಲಿಸಲು ಯುವಕನ 21 ಗಂಟೆಯ ಹೋರಾಟ; ಅಯ್ಯೋ ಪಾಪ ಎಂದ ನೆಟ್ಟಿಗರು


ಅಂದಿನಿಂದ ಈ ಕೊಳದ ಖ್ಯಾತಿಯು ಎಲ್ಲೆಡೆ ಹರಡಿದೆ ಅಂತ ಹೇಳಲಾಗುತ್ತಿದೆ. ಭಕ್ತರಾದ ಮೋಂಟು ಬಾಲಾ ಅವರು ಈ ಪವಾಡ ಕೊಳದ ಪ್ರಸಿದ್ಧ ಗುಣಪಡಿಸುವ ಶಕ್ತಿಯನ್ನು ನಂಬುತ್ತಾರೆ, ವೈದ್ಯಕೀಯ ಚಿಕಿತ್ಸೆ ವಿಫಲವಾದಾಗಲೂ, ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ದೈಹಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಅಂತ ಅವರು ಹೇಳುತ್ತಾರೆ.
ಹಲವು ವರ್ಷಗಳಿಂದ ಗರ್ಭ ಧರಿಸಲು ಹೆಣಗಾಡುತ್ತಿದ್ದ ಮಹಿಳೆ, ಈ ಕೊಳದಲ್ಲಿ ಸ್ನಾನ ಮಾಡಿದ ಕೆಲವೇ ತಿಂಗಳುಗಳಲ್ಲಿ ಗರ್ಭಿಣಿಯಾದ್ರಂತೆ ಅನ್ನೋ ನಿಜವಾದ ಘಟನೆಗಳ ಉದಾಹರಣೆಯನ್ನು ಅವರು ಹೇಳುತ್ತಾರೆ.


ಇದನ್ನೂ ಓದಿ: Invention: ವಿಶೇಷ ವಾಕಿಂಗ್ ಸ್ಟಿಕ್ ಆವಿಷ್ಕರಿಸಿದ ವಿದ್ಯಾರ್ಥಿಗಳು, ಸೂಪರ್ ಸಾಧನೆಗೆ ಭಾರೀ ಶ್ಲಾಘನೆ


ಪ್ರತಿ ವರ್ಷ, ಅದ್ಭುತ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಈ ಕೊಳವು ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಜನರನ್ನು ಆಕರ್ಷಿಸುತ್ತಿದೆ. ಜನರು ಇಲ್ಲಿಗೆ ಬಂದು ಸ್ನಾನ ಮಾಡಿ ತಮ್ಮ ಆಸೆಗಳನ್ನು ದೇವರ ಬಳಿ ಹೇಳಿಕೊಂಡು ಹೋಗುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತಾದಿಗಳಿಂದ ಈ ಕೊಳ ಬೆಳಗ್ಗೆಯಿಂದ ರಾತ್ರಿಯವರೆಗೆ ಜನರಿಂದ ಕೂಡಿರುತ್ತದೆ ಅಂತ ಹೇಳಬಹುದು.


ಭಕ್ತರು ಈ ಸ್ಥಳಕ್ಕೆ ಬಂದು ಏನೆಲ್ಲಾ ಮಾಡುತ್ತಾರೆ ನೋಡಿ
ಭಕ್ತರು ಬೆಳಗ್ಗೆ ಈ ಕೊಳದ ಪಕ್ಕದಲ್ಲಿರುವ ದೇವಾಲಯದಲ್ಲಿ ಒಟ್ಟುಗೂಡುತ್ತಾರೆ. ಮಿಶ್ರ ತರಕಾರಿ ಖಾದ್ಯವನ್ನು ಪ್ರಸಾದವಾಗಿ ವಿತರಿಸುತ್ತಾರೆ. ಒಟ್ಟಾರೆಯಾಗಿ ಇಡೀ ಪ್ರದೇಶದಲ್ಲಿ ಜನರು ಸ್ನಾನ ಮಾಡಿದ ನಂತರ ದೇವರ ಆಶೀರ್ವಾದ ಪಡೆದುಕೊಂಡು ಹೋರಾಡುತ್ತಾರೆ ಅಂತ ಹೇಳಬಹುದು.

top videos
    First published: