• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ಕೆಲಸ ಮುಗಿಸಿ ಬಂದಾಗ ಮನೆಯೆಲ್ಲಾ ಕೆಟ್ಟ ವಾಸನೆ! ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಮಾಲೀಕರು

Viral News: ಕೆಲಸ ಮುಗಿಸಿ ಬಂದಾಗ ಮನೆಯೆಲ್ಲಾ ಕೆಟ್ಟ ವಾಸನೆ! ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಮಾಲೀಕರು

ವೈರಲ್ ವಿಡಿಯೋ

ವೈರಲ್ ವಿಡಿಯೋ

ಕುಟುಂಬ ಸದಸ್ಯರು ದಿನವಿಡೀ ಕೆಲಸಕ್ಕಾಗಿ ಹೊರಗೆ ಹೋಗುತ್ತಾರೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸಲು ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದರು. ಆದರೆ ಶುಚಿಗೊಳಿಸಿದ ನಂತರವೂ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ವಿಚಿತ್ರ ವಾಸನೆ ಬರುತ್ತಿದ್ದರಿಂದ ಏನೋ ಸಮಸ್ಯೆಯಾಗುತ್ತಿದೆ ಎಂದು ಶಂಕಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Noida, India
 • Share this:

ನೋಯ್ಡಾ: ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ಅಸಹ್ಯಕರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆ ಕೆಲಸದಾಕೆಯನ್ನು (Maid) ನೆಲವನ್ನು ಮೂತ್ರ ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಿದ್ದಾಳೆ ಎಂದು ಮನೆಯ ಮಾಲೀಕರು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು (CCTV video) ಸಹ ಪೊಲೀಸರಿಗೆ (Police) ಸಾಕ್ಷಿಯಾಗಿ ನೀಡಿದ್ದಾರೆ. ಮಾಲೀಕರ ದೂರಿದ ನಂತರ ಕೆಲದವಳು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಪೊಲೀಸರು ಮನೆ ಕೆಲಸದವಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


ನಡೆದಿದ್ದೇನು?


ಗ್ರೇಟರ್ ನೋಯ್ಡಾದ ಅಜ್ನಾರ ಹೋಮ್ಸ್ ಸೊಸೈಟಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಸಬೀನಾ ಖಾತುನ್ ಎಂಬಾಕೆ ವಿರುದ್ಧ ಮನೆ ಮಾಲೀಕರು ದೂರು ನೀಡಿದ್ದಾರೆ. ಆಕೆ ಮನೆಯಲ್ಲಿ ಸ್ವಚ್ಛ ಮಾಡುವಾಗ ಬಕೆಟ್​ಗೆ ಮೂತ್ರ ವಿಸರ್ಜನೆ ಮಾಡಿ ಅದೇ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿದ್ದಾಳೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ. ಅವರು ಸಿಸಿಟಿವಿ ವಿಡಿಯೋವನ್ನು ಸಾಕ್ಷಿಯಾಗಿ ನೀಡಿದ್ದಾರೆ.


ಇದನ್ನೂ ಓದಿ: Illicit Affair: ಗಂಡನಿಗೆ ಮೋಸ ಮಾಡಿದವಳನ್ನು ಕತ್ತರಿಸಿ ಫ್ರಿಜ್-ಸೂಟ್ ಕೇಸಿಗೆ ತುಂಬಿದ ಬಾಯ್ ಫ್ರೆಂಡ್!


ವಿಡಿಯೋ ವೈರಲ್


ಮಹಿಳೆ ಮೂತ್ರದಿಂದ ನೆಲ ಒರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ (Viral Video) ಗಳಲ್ಲಿ ವೈರಲ್ ಆಗಿದೆ. ಪ್ರಕರಣ ಸಂಬಂಧ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಬೀನಾ, ಮೊದಲು ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದಾಳೆ, ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ರೀತಿ ಮಾಡಿರುವುದು ಎಂಬುದರ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಾಕ್ಷಿಯಾಗಿ ವಿಡಿಯೋ ನೀಡಿದ ಮಾಲೀಕರು


ಕೆಲಸದಾಕೆಯ ಅಸಹ್ಯ ವರ್ತನೆಯ ಸಿಸಿಟಿವಿ ದೃಶ್ಯಾವಳಿಯನ್ನು ಮನೆಯ ಮಾಲೀಕರು ಪೊಲೀಸರಿಗೆ ನೀಡಿದ್ದಾರೆ. ಕುಟುಂಬ ಸದಸ್ಯರು ದಿನವಿಡೀ ಕೆಲಸಕ್ಕಾಗಿ ಹೊರಗೆ ಹೋಗುತ್ತಾರೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸಲು ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದರು. ಆದರೆ ಶುಚಿಗೊಳಿಸಿದ ನಂತರವೂ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ವಿಚಿತ್ರ ವಾಸನೆ ಬರುತ್ತಿದ್ದರಿಂದ ಏನೋ ಸಮಸ್ಯೆಯಾಗುತ್ತಿದೆ ಎಂದು ಶಂಕಿಸಿದ್ದಾರೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದ್ದಾರೆ. ಕೆಲಸದಾಕೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.


ಇದನ್ನೂ ಓದಿ: Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ


ವೈರಲ್ ವಿಡಿಯೋದಲ್ಲಿ ಏನಿದೆ?


ಈ ವೈರಲ್ ವಿಡಿಯೊದಲ್ಲಿ ಕೆಲಸದಾಕೆಯು ಮನೆಯನ್ನು ಸ್ವಚ್ಛಗೊಳಿಸುತ್ತಿರುವುದನ್ನು ನೋಡಬಹುದು. ಆಕೆಯ ಕೈಯಲ್ಲಿ ಒಂದು ಬಟ್ಟೆ ಇದೆ. ಅದರಲ್ಲಿ ನೆಲವನ್ನು ಒರೆಸುತ್ತಿರುವುದು ಕಂಡುಬರುತ್ತದೆ. ನಂತರ ಅವಳು ಬಕೆಟ್ ಇರುವಲ್ಲಿಗೆ ಹೋಗಿ ಬಕೆಟ್ ಮೇಲೆ ಕುಳಿತುಕೊಳ್ಳುತ್ತಾಳೆ. ಅದರ ನಂತರ ಅವಳು ಬಕೆಟ್ ಎತ್ತಿಕೊಂಡು ಮತ್ತೊಂದು ರೂಮಿಗೆ ಹೊರಡುತ್ತಾಳೆ.

First published: