• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಟೀ ಬ್ಯಾಗ್, ಟೀ ಕಪ್ ಮೇಲೆ ಸೆಕ್ಸಿಯೆಸ್ಟ್​ ಬರಹ ಬರೆದು ಕ್ಷಮೆ ಕೇಳಿದ ಚೀನಾದ ಪ್ರಸಿದ್ಧ ಚಹಾ ಅಂಗಡಿ..!

ಟೀ ಬ್ಯಾಗ್, ಟೀ ಕಪ್ ಮೇಲೆ ಸೆಕ್ಸಿಯೆಸ್ಟ್​ ಬರಹ ಬರೆದು ಕ್ಷಮೆ ಕೇಳಿದ ಚೀನಾದ ಪ್ರಸಿದ್ಧ ಚಹಾ ಅಂಗಡಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಕ್ಷಿಣ ಚೀನಾದ ಹುನಾನ್ ಪ್ರದೇಶದಲ್ಲಿನ ಮಾಡರ್ನ್ ಟೀ ಸ್ಟೋರ್​ನಲ್ಲಿ ‘ಟೀ ಬ್ಯಾಗ್​ಗಳ ಮೇಲೆ ಬಾಯಿ ಬೇಡ ಎಂದು ಹೇಳುತ್ತೆ, ಆದರೆ ದೇಹ ಬೇಕು ಎನ್ನುತ್ತದೆ’. ‘ಮೈ ಡಿಯರ್, ನೀನು ನನಗೆ ಬೇಕು’ ಎಂಬ ಬರಹ ಬರೆಯಲಾಗಿತ್ತು.

  • Share this:

ಚೀನಾ ವ್ಯಾಪಾರದಲ್ಲಿ ವಿವಿಧ ರೀತಿಯ ಹೊಸ ಪ್ರಯತ್ನವನ್ನು ಮಾಡುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಸದಾ ಮುಂದೆ ಇರುವ ಚೀನಾ ಕೆಲವೊಮ್ಮೆ ಗ್ರಾಹಕರಿಂದ ತರಾಟೆಗೆ ಒಳಗಾಗಿರುವ ಪ್ರಸಂಗಗಳು ಆಗಾಗ ನಡೆಯುತ್ತವೆ. ಇದೇ ರೀತಿಯ ಘಟನೆ ಇದೀಗ ಚೀನಾದಲ್ಲಿ ನಡೆದಿದೆ. ಚೀನಾದ ಪ್ರಸಿದ್ಧ ಚಹಾ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಟೀ ಕಪ್ ಮತ್ತು ಟೀ ಬ್ಯಾಗ್ಗಳ ಮೇಲೆ ಸೆಕ್ಸಿಯೆಸ್ಟ್ ಬರಹಗಳನ್ನು ಬರೆದು ಕ್ಷಮೆ ಕೇಳುವ ಮೂಲಕ ಪೇಚಿಗೆ ಸಿಲುಕಿದೆ.


ದಕ್ಷಿಣ ಚೀನಾದ ಹುನಾನ್ ಪ್ರದೇಶದಲ್ಲಿನ ಮಾಡರ್ನ್ ಟೀ ಸ್ಟೋರ್​ನಲ್ಲಿ ‘ಟೀ ಬ್ಯಾಗ್​ಗಳ ಮೇಲೆ ಬಾಯಿ ಬೇಡ ಎಂದು ಹೇಳುತ್ತೆ, ಆದರೆ ದೇಹ ಬೇಕು ಎನ್ನುತ್ತದೆ’. ‘ಮೈ ಡಿಯರ್, ನೀನು ನನಗೆ ಬೇಕು’ ಎಂಬ ಬರಹ ಬರೆಯಲಾಗಿತ್ತು. ಅಷ್ಟೇ ಅಲ್ಲದೇ ಮಾಡರ್ನ್ ಟೀ ಸ್ಟೋರ್​ನಲ್ಲಿ ಸಿಗುವ ಒಂದು ಟೀ ಮಗ್ (Tea Mug) ಮೇಲೆ ಮಹಿಳೆಯರನ್ನು ದೊಡ್ಡ ಚೌಕಾಸಿ (big bargain) ಎಂದು ಬಿಂಬಿಸಲಾಗಿದೆ ಎಂದು ಚೀನಾದ ಶಾಂಘೈ ಡೈಲಿ ಸೋಮವಾರದಂದು ವರದಿ ಮಾಡಿದೆ. ಇನ್ನು, ಇದು ಟೀ ಬ್ಯಾಗ್ ಮೇಲೆ ಇರುವ ಬರಹ ಇಂಟರ್ನೆಟ್​ನಲ್ಲಿ ಹರಿದಾಡಲು ಶುರುವಾದ ತಕ್ಷಣವೇ ಚಹಾ ಅಂಗಡಿ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ.


ಕ್ಷಮೆ ಕೇಳಿದ ಚಹಾ ಅಂಗಡಿ ಮಾಲೀಕರು !:
ಇದೀಗ ಟೀ ಶಾಪ್ ಮಾಲೀಕರು ಕ್ಷಮೆ ಕೇಳಿದ್ದಾರೆ. ಇದು ಮಹಿಳೆಯರಿಗೆ ಅಗೌರವ ಸೂಚಿಸಿದಂತೆ ಆಗುತ್ತದೆ. ಇದರಿಂದ ಈ ರೀತಿಯ ಬರಹಗಳನ್ನು ನಿಲ್ಲಿಸುತ್ತೇವೆ. ಸೆಕ್ಸಿಯೆಸ್ಟ್ ಬರಹಗಳನ್ನು ಇನ್ಮುಂದೆ ಬರೆಯುವುದಿಲ್ಲ. ಸೃಜನಶೀಲ ವಿಚಾರಗಳನ್ನು ಮುದ್ರಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಶಾಂಘೈ ಡೈಲಿ ವರದಿ ಮಾಡಿದೆ.


ಅಷ್ಟೇ ಅಲ್ಲದೇ, ಆಕ್ಷೇಪಾರ್ಹ ವಸ್ತುಗಳನ್ನು ಇನ್ಮುಂದೆ ಟೀ ಶಾಪ್ ನಲ್ಲಿ ಮಾರಾಟ ಮಾಡುವುದಿಲ್ಲ ಎಂದು ಟೀ ಸ್ಟೋರ್ ಮಾಲೀಕರು ಪತ್ರಿಕೆಗೆ ತಿಳಿಸಿದ್ದಾರೆ.

First published: