ಅರೆ ಬೆಂದ ಹೆಣ ತಂದು ಅಡುಗೆ ಮಾಡಿದ ಗಂಡ; ಭೀಕರ ದೃಶ್ಯ ಕಂಡು ಮನೆ ಬಿಟ್ಟು ಓಡಿದ ಹೆಂಡತಿ!

 ಅಡುಗೆಮನೆಗೆ ಬಂದು ನೋಡಿದ ಸಂಜಯ್​ನ ಹೆಂಡತಿಗೆ ಬಾಣಲೆಯಲ್ಲಿ ಮನುಷ್ಯನ ಕೈ ಮತ್ತು ಬೆರಳುಗಳಿರುವುದು ಕಂಡಿದ್ದೇ ತಡ ಆಕೆ ಜೋರಾಗಿ ಕಿರುಚಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸದಾ ಕುಡಿದುಕೊಂಡು ರಸ್ತೆ ಬದಿ ಬಿದ್ದಿರುತ್ತಿದ್ದ ಆತ ಮನೆಗೆ ಬಂದ ಕೂಡಲೆ ಹೆಂಡತಿಗೆ ಹೊಡೆಯುತ್ತಿದ್ದ. ಆದರೂ ಆತನ ಹೆಂಡತಿಗೆ ಗಂಡನ ಮೇಲೆ ಪ್ರೀತಿಯೇನೂ ಕಡಿಮೆಯಾಗಿರಲಿಲ್ಲ. ಕೆಲಸ ಮಾಡಿ, ಸುಸ್ತಾಗಿ, ಒಂದೆರಡು ಪೆಗ್ ಏರಿಸಿಕೊಂಡು ಮನೆಗೆ ಬರುವ ಗಂಡನಿಗೆ ರುಚಿಯಾಗಿ ಅಡುಗೆ ಮಾಡಬೇಕೆಂದು ಅಡುಗೆಮನೆ ಹೊಕ್ಕ ಆಕೆಗೆ ತರಕಾರಿ ಖಾಲಿಯಾಗಿರುವುದು ನೆನಪಾಯಿತು. ಗಂಡ ಮನೆಗೆ ಬರುವುದರೊಳಗೆ ಅಂಗಡಿಗೆ ಹೋಗಿ ತರಕಾರಿ ತಂದುಬಿಡಬೇಕು ಎಂದು ಬ್ಯಾಗ್ ತೆಗೆದುಕೊಂಡು ಹೋದವಳು ವಾಪಾಸ್ ಮನೆಗೆ ಬಂದಾಗ ಆಕೆಗೆ ದೊಡ್ಡ ಶಾಕ್ ಕಾದಿತ್ತು!

ಏನಪ್ಪಾ ಅದು ಶಾಕ್ ಎಂದು ಅಚ್ಚರಿಯಾಯ್ತಾ?. ಕುಡಿದ ಅಮಲಿನಲ್ಲಿ ಕೆಲವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಆ ಮನೆಯಲ್ಲಿ ಆಗಿದ್ದೂ ಅದೇ. ಕುಡಿತದ ಮತ್ತಿನಲ್ಲಿ ನದಿ ದಡದಲ್ಲಿ ಬಿದ್ದಿದ್ದ ಅರೆಬರೆ ಬೆಂದ ಮೃತದೇಹದ ಕೈಗಳನ್ನು ಬ್ಯಾಗ್​ಗೆ ತುಂಬಿಸಿಕೊಂಡು ಬಂದಿದ್ದ ಆ ಪತಿರಾಯ. ಮನೆಗೆ ಬಂದವನೇ ಹೆಂಡತಿ ಇಲ್ಲದ್ದನ್ನು ನೋಡಿ, ತಾನೇ ಅಡುಗೆ ಮಾಡುತ್ತೇನೆಂದು ಒಲೆ ಮೇಲೆ ಬಾಣಲಿಯಿಟ್ಟಿದ್ದ. ಆ ಬಾಣಲಿಗೆ ಬ್ಯಾಗ್​ನಲ್ಲಿದ್ದ ಮನುಷ್ಯನ ಕೈಗಳನ್ನು ಹಾಕಿ ಫ್ರೈ ಮಾಡುತ್ತಿರುವಾಗ ಹೆಂಡತಿ ಅಂಗಡಿಯಿಂದ ವಾಪಾಸ್ ಬಂದಿದ್ದಳು.

ಇದನ್ನೂ ಓದಿ: ಪ್ರಿಯಕರನೊಂದಿಗೆ ಬೆಡ್​ರೂಮಿನಲ್ಲಿದ್ದ ಮಗಳಿಗೆ ಶಾಕ್ ಕೊಟ್ಟ ಅಮ್ಮ; ಗಾಬರಿಯಾದ ಯುವತಿ ಮಾಡಿದ್ದೇನು?

ಈ ಶಾಕಿಂಗ್ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿನ ಬಿಜನೂರ್​ನಲ್ಲಿರುವ ಟಿಕ್ಕಾಪುರ್​ ಗ್ರಾಮದ 32 ವರ್ಷದ ಸಂಜಯ್ ಎಂಬ ವ್ಯಕ್ತಿಯೇ ಕಂಠಪೂರ್ತಿ ಕುಡಿದು, ಮನುಷ್ಯರ ಮಾಂಸವನ್ನು ಮನೆಗೆ ತಂದು ಅಡುಗೆ ಮಾಡಿದ ಪುಣ್ಯಾತ್ಮ. ಅಡುಗೆಮನೆಯಿಂದ ಏನೋ ಕೆಟ್ಟ ವಾಸನೆ ಬರುತ್ತಿದೆಯಲ್ಲ ಎಂದು ಒಳಗೆ ಬಂದು ನೋಡಿದ ಹೆಂಡತಿ ಮೂರ್ಛೆ ಹೋಗುವುದೊಂದೇ ಬಾಕಿ. ಮನುಷ್ಯನ ದೇಹದ ಮಾಂಸವನ್ನು ಬಾಣಲಿಯಲ್ಲಿ ಹಾಕಿ ಫ್ರೈ ಮಾಡುತ್ತಿದ್ದ ಗಂಡನನ್ನು ನೋಡಿ ಹೆದರಿದ ಹೆಂಡತಿ ಜೋರಾಗಿ ಕಿರುಚಿಕೊಳ್ಳುತ್ತಾ ಓಡಿಹೋದಳು.

ಇದನ್ನೂ ಓದಿ: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

ಅಡುಗೆಮನೆಗೆ ಬಂದು ನೋಡಿದ ಸಂಜಯ್​ನ ಹೆಂಡತಿಗೆ ಬಾಣಲೆಯಲ್ಲಿ ಮನುಷ್ಯನ ಕೈ ಮತ್ತು ಬೆರಳುಗಳಿರುವುದು ಕಂಡಿದ್ದೇ ತಡ ಆಕೆ ಜೋರಾಗಿ ಕಿರುಚಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದಳು. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಆತನನ್ನು ಮನೆಯೊಳಗೇ ಕೂಡಿಹಾಕಿ, ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದರು. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಂಜಯ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಂಗಾನದಿ ದಡದ ಬಳಿಯಿಂದ ಆ ಮಾಂಸವನ್ನು ತಂದಿದ್ದಾಗಿ ಆತ ಹೇಳಿದ್ದಾನೆ.

 
First published: