Lady Police: ತನ್ನ ಭಾವಿ ಪತಿಯನ್ನೇ ಅರೆಸ್ಟ್ ಮಾಡಿದ ಲೇಡಿ ಪೊಲೀಸ್! ಕಾರಣ ಕೇಳಿ ಸೆಲ್ಯೂಟ್ ಹೊಡೆದ ಜನ

ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಭಾವಿ ಪತಿಯನ್ನೇ ಅರೆಸ್ಟ್ ಮಾಡಿ, ಜೈಲಿಗೆ ತಳ್ಳಿದ್ದಾರೆ! ಆಕೆಯ ಪ್ರಾಮಾಣಿಕತೆ ಕಂಡು ಸಾರ್ವಜನಿಕರೆಲ್ಲ ಸೆಲ್ಯೂಟ್ ಹೊಡೆದಿದ್ದಾರೆ. ಹಾಗಿದ್ರೆ ಆ ದಕ್ಷ ಮಹಿಳಾ ಅಧಿಕಾರಿ ಯಾರು? ಅವರ ಭಾವಿ ಪತಿ ಮಾಡಿದ ತಪ್ಪಾದರೂ ಏನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಲೇಡಿ ಪೊಲೀಸ್ ಜೋನ್ಮನಿ ರಾಭಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಂಚಕ ರಾಣಾ

ಲೇಡಿ ಪೊಲೀಸ್ ಜೋನ್ಮನಿ ರಾಭಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಂಚಕ ರಾಣಾ

  • Share this:
ಅಸ್ಸಾಂ: ಆಕೆ ಮಹಿಳಾ ಪೊಲೀಸ್ ಅಧಿಕಾರಿ (Lady Police Officer). ಪೊಲೀಸ್ ಇಲಾಖೆಯಲ್ಲಿ (Police Department) ಏನಾದರೂ ಮಾಡಬೇಕು, ಅಪರಾಧಿಗಳನ್ನು ಮಟ್ಟಹಾಕಿ, ಸಮಾಜದ ಶಾಂತಿ ಕಾಪಾಡಬೇಕು ಅಂತೆಲ್ಲ ಕನಸು ಕಟ್ಟಿಕೊಂಡಿದ್ದರು ಆಕೆ. ಅದಕ್ಕಾಗಿಯೇ ಪೊಲೀಸ್ ಇಲಾಖೆ ಸೇರಿ, ದಕ್ಷ ಅಧಿಕಾರಿ ಅಂತ ಹೆಸರನ್ನೂ ಪಡೆದಿದ್ದರು. ಇತ್ತ ಪೊಲೀಸ್ ಅಧಿಕಾರಿಯೇ ಆಗಿರಲಿ, ಬೇರೆ ಹುದ್ದೆಯಲ್ಲೇ ಇರಲಿ, ಮಕ್ಕಳಿಗೆ ಮದುವೆ (Marriage) ಮಾಡಿಬಿಡಬೇಕು ಎನ್ನುವುದು ಹೆತ್ತವರ (Parents) ಬಯಕೆ. ಇಲ್ಲೂ ಅಷ್ಟೇ ಆಕೆಗೆ ಸೂಕ್ತ ವರನೊಬ್ಬನನ್ನು (Groom) ಗೊತ್ತು ಮಾಡಿ, ಎಂಗೇಜ್‌ಮೆಂಟ್ (Engagement) ಮಾಡಿದ್ದ ತಂದೆ (Father), ತಾಯಿ (Mother) ಆಕೆಯ ಮದುವೆಯ ದಿನಾಂಕವನ್ನೂ (Wedding Date) ಗೊತ್ತು ಮಾಡಿದ್ದರು. ಇದೀಗ ಆ ಮಹಿಳಾ ಪೊಲೀಸ್ ಅಧಿಕಾರಿ, ಭಾವಿ ವರನನ್ನೇ (Fiance) ಅರೆಸ್ಟ್ (Arrest) ಮಾಡಿ, ಜೈಲಿಗೆ (Jail) ತಳ್ಳಿದ್ದಾರೆ! ಆಕೆಯ ಪ್ರಾಮಾಣಿಕತೆ ಕಂಡು ಸಾರ್ವಜನಿಕರೆಲ್ಲ ಸೆಲ್ಯೂಟ್ (Salute) ಹೊಡೆದಿದ್ದಾರೆ. ಹಾಗಿದ್ರೆ ಆ ದಕ್ಷ ಮಹಿಳಾ ಅಧಿಕಾರಿ ಯಾರು? ಅವರ ಭಾವಿ ಪತಿ ಮಾಡಿದ ತಪ್ಪಾದರೂ ಏನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಅಸ್ಸಾಂನಲ್ಲಿದ್ದಾರೆ ಒಬ್ಬರು ದಕ್ಷ ಮಹಿಳಾ ಪೊಲೀಸ್ ಅಧಿಕಾರಿ

ಅಸ್ಸಾಂನ ನಾಗೋನ್ ಸದರ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಜೋನ್ಮಣಿ ರಾಭಾ ಎಂಬುವರು ಈಗ ದೇಶಾದ್ಯಂತ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇವರು ತಮ್ಮ ಭಾವಿ ಪತಿ ರಾಣಾ ಪೊಗಾಗ್ ಎಂಬಾತನನ್ನು ತಾವೇ ಖುದ್ದಾಗಿ ಅರೆಸ್ಟ್ ಮಾಡಿ, ಜೈಲಿಗೆ ತಳ್ಳಿದ್ದಾರೆ. ಭಾವಿ ಪತಿಯನ್ನು ಅರೆಸ್ಟ್ ಮಾಡಿದ್ದು ಯಾವ ಸಾಧನೆ ಅಂತ ಕೇಳ ಬಹುದು. ಆದರೆ ಇಲ್ಲಿ ಜೋನ್ಮಣಿ ರಾಭಾ ಅವರ ಭಾವಿ ಪತಿ ರಾಣಾ ಪೊಗಾಗ್ ಎಂಬಾತ ಸಾಮಾನ್ಯನಲ್ಲ, ಈತ ಹೈಪ್ರೊಫೈಲ್ ವಂಚಕ.

ಭಾವಿ ಪತಿ ರಾಣಾ ಮಾಡಿದ ಅಪರಾಧವೇನು?

ಈ ರಾಣಾ ಪೊಗಾಗ್ ಎಂಬಾತ ಸಾಮಾನ್ಯನಲ್ಲ, ಈತ ಒಬ್ಬ ಹೈಪ್ರೊಫೈಲ್ ವಂಚಕ. ಈತ ಹಲವರನ್ನು ವಂಚಿಸಿದ್ದ. ಉನ್ನತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ, ಅವರಿಂದ ಹಣ ಪಡೆಯುತ್ತಿದ್ದ. ಬಳಿಕ ಅವರಿಗೆ ಕೆಲಸ ಕೊಡಿಸದೇ ವಂಚಿಸುತ್ತಿದ್ದ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಒಡ್ಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: High-Tech Prostitution: ಹೊರಗಿನಿಂದ ಟಾಯ್ಲೆಟ್, ಒಳಗೆ ನೋಡಿದ್ರೆ ಬೆಡ್‌ ರೂಂ! ಕೋಟೆನಾಡಲ್ಲಿ ಹೈಟೆಕ್ ವೇಶ್ಯಾವಾಟಿಕೆ

ಮಹಿಳಾ ಪೊಲೀಸ್ ಅಧಿಕಾರಿಗೂ ವಂಚನೆ

ಇಷ್ಟಕ್ಕೆ ಸುಮ್ಮನಾಗದ ವಂಚಕ ರಾಣಾ ಪೊಗಾಗ್ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಜೋನ್ಮಣಿ ರಾಭಾ ಅವರಿಗೂ ವಂಚಿಸಿದ್ದ. ಜೋನ್ಮಣಿ ರಾಭಾ ಅವರಿಗೆ ತಾನು ತೈಲ ಮತ್ತು ಅನಿಲ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಕೊನೆಗೆ ಸಲಿಗೆ ಬೆಳೆಸಿ, ಆಕೆಯನ್ನು ವಿವಾಹವಾಗುವ ಪ್ರಸ್ತಾಪ ಇಟ್ಟಿದ್ದ. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಅವರು, ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಎಂಗೇಜ್‌ಮೆಂಟ್ ಸಹ ಮಾಡಿಕೊಂಡಿದ್ದರು.

ಮಹಿಳಾ ಪೊಲೀಸ್ ಎದುರು ವಂಚಕನ ಬಣ್ಣ ಬಯಲು

ಇನ್ನೇನು ಮದುವೆ ದಿನಗಳು ಹತ್ತಿರ ಬರುತ್ತಿವೆ ಎನ್ನುವಾಗಲೇ ವಂಚಕ ರಾಣಾ ಪೊಗಾನ್‌ನ ವಂಚನೆ ಬಯಲಾಯ್ತು. ಈ ಕೇಸ್‌ನ ಹಿಂದೆ ಬಿದ್ದ ಲೇಡಿ ಪೊಲೀಸ್ ಜೋನ್ಮಣಿ ರಾಭಾಗೆ ತನ್ನ ಭಾವಿ ಪತಿ ವಂಚಕ ಎನ್ನುವುದು ಗೊತ್ತಾಯಿತು. ಹೀಗಾಗಿ ಈತನಿಗೆ ಬುದ್ಧಿ ಕಲಿಸಬೇಕು ಅಂತ ಆಕೆ ಶಪಥ ಮಾಡಿದರು.

ಹನಿ ಟ್ರ್ಯಾಪ್‌ನಲ್ಲೂ ಶಾಮೀಲಾಗಿದ್ದ ವಂಚಕ

ಅಷ್ಟೇ ಅಲ್ಲ, ಈ ರಾಣಾ ಪೊಗಾಗ್ ಹನಿ ಟ್ರ್ಯಾಪ್‌ ಕೇಸ್‌ನಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ. ಮೇ 4 ರಂದು ಶಿವಸಾಗರ ಪೊಲೀಸರು ಕುಖ್ಯಾತ ಹನಿ ಟ್ರ್ಯಾಪ್ ದಂಧೆಯನ್ನು ಭೇದಿಸಿದ್ದರು ಮತ್ತು ಘಟನೆಯೊಂದಿಗೆ ಸಂಬಂಧ ಹೊಂದಿರುವ ಇಬ್ಬರನ್ನು ಬಂಧಿಸಿದ್ದರು. ಇವರ ವಿಚಾರಣೆ ವೇಳೆ ರಾಣಾ ಪೊಗಾಗ್ ಜೊತೆ ಇವರಿಗೆ ಲಿಂಕ್ ಇರುವುದು ಗೊತ್ತಾಗಿದೆ.

ಇದನ್ನೂ ಓದಿ: Indore Fire Accident: ಯುವಕನ ಲವ್​ ಫೈಲ್ಯೂರ್, ಜೀವಂತ ಸುಟ್ಟು ಕರಕಲಾಗಿದ್ದು 7 ಮಂದಿ

ಭಾವಿ ಪತಿಯನ್ನು ಒದ್ದು, ಜೈಲಿಗಟ್ಟಿದ ಲೇಡಿ ಪೊಲೀಸ್

ಭಾವಿ ಪತಿ ರಾಣಾ ಪೊಗಾನ್ ವಂಚನೆ ಬಗ್ಗೆ ಕೇಸ್ ದಾಖಲಿಸಿ ಕೊಂಡ ಲೇಡಿ ಪೊಲೀಸ್ ಜೋನ್ಮಣಿ ರಾಭಾ, ಆತನನ್ನು ಒದ್ದು ಜೈಲಿಗಟ್ಟಿದ್ದಾರೆ. ವಂಚಕನಿಂದ ಒಎನ್‌ಜಿಸಿಗೆ ಸೇರಿದ ಹಲವಾರು ನಕಲಿ ಸೀಲ್‌ ಸೇರಿದಂತೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆತನ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.
Published by:Annappa Achari
First published: