ಛತ್ತೀಸ್​ಗಢ; ಮಗ ಸತ್ತ ಬಳಿಕ ಸೊಸೆಯನ್ನೇ ಮದುವೆಯಾದ ಮಾವ!

ಛತ್ತೀಸ್​ಗಢದಲ್ಲಿ ಗಂಡ ಸಾವನ್ನಪ್ಪಿದ ಬಳಿಕ 2 ವರ್ಷಗಳಿಂದ ಏಕಾಂತದ ಜೀವನ ನಡೆಸುತ್ತಿದ್ದ ಆರತಿ ಸಿಂಗ್​ಗೆ ಆಕೆಯ ಗಂಡನ ಅಪ್ಪನ ಜೊತೆಯೇ ಮದುವೆ ಮಾಡಿಸಲಾಗಿದೆ.

Sushma Chakre | news18-kannada
Updated:July 5, 2020, 3:08 PM IST
ಛತ್ತೀಸ್​ಗಢ; ಮಗ ಸತ್ತ ಬಳಿಕ ಸೊಸೆಯನ್ನೇ ಮದುವೆಯಾದ ಮಾವ!
ಸಾಂದರ್ಭಿಕ ಚಿತ್ರ
  • Share this:
ರಾಯ್ಪುರ (ಜು. 5): ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಎಲ್ಲೋ ಹುಟ್ಟಿ, ಬೆಳೆದವರನ್ನು ಒಂದಾಗಿಸುವ ಮದುವೆ ಕೆಲವರ ಜೀವನವನ್ನು ಹಸನಾಗಿಸಿದರೆ, ಇನ್ನು ಕೆಲವರು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ಜೀವನವನ್ನೇ ನರಕವಾಗಿಸುತ್ತದೆ. ಛತ್ತೀಸ್​ಗಢದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು, ಮಾವನೇ ತನ್ನ ಸೊಸೆಗೆ ತಾಳಿ ಕಟ್ಟಿ ವಿವಾಹವಾಗಿದ್ದಾರೆ!

ಛತ್ತೀಸ್​ಗಢದ ಬಿಲಾಸ್​ಪುರದ ನಿವಾಸಿಯಾಗಿರುವ ಕೃಷ್ಣ ರಜಪೂತ್ ಸಿಂಗ್ ತನ್ನ 22 ವರ್ಷದ ಸೊಸೆಯನ್ನು ಮದುವೆಯಾಗಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಆ ವ್ಯಕ್ತಿಯ ಮಗ ಸಾವನ್ನಪ್ಪಿದ್ದ. ಹೀಗಾಗಿ, ಆತನ 22 ವರ್ಷದ ಸೊಸೆ ಒಂಟಿಜೀವನ ನಡೆಸುತ್ತಿದ್ದಳು. ಹೀಗಾಗಿ, ಆ ಕೃಷ್ಣ ರಜಪೂತ್ ಸಿಂಗ್ ತನ್ನ ವಿಧವೆ ಸೊಸೆಯನ್ನು ಮದುವೆಯಾಗಿದ್ದಾನೆ. ಅವರ ಕುಟುಂಬದ ಹಿರಿಯರೇ ನಿಂತು ಈ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: Hyderabad Coronavirus: ನೂರಾರು ಗಣ್ಯರೊಂದಿಗೆ ಪಾರ್ಟಿ ಮಾಡಿದ್ದ ಹೈದರಾಬಾದ್ ಖ್ಯಾತ​ ಜ್ಯುವೆಲರಿ ಮಳಿಗೆ ಮಾಲೀಕ ಕೊರೋನಾಗೆ ಬಲಿ!

2 ವರ್ಷಗಳಿಂದ ಏಕಾಂತದ ಜೀವನ ನಡೆಸುತ್ತಿದ್ದ ಆರತಿ ಸಿಂಗ್​ಗೆ ಆಕೆಯ ಗಂಡನ ಅಪ್ಪನ ಜೊತೆಯೇ ಮದುವೆ ಮಾಡಿಸಲಾಗಿದೆ. ಆಕೆಯ ಮಾವನೇ ಆಕೆಯನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಈ ಮದುವೆ ಮಾಡಿಸಲಾಗಿದೆ. ಗಂಡ ಸತ್ತ ಬಳಿಕ ಕಳೆದ 2 ವರ್ಷಗಳಿಂದ ಮಾವ ತನ್ನ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ನೋಡಿ ಆಕೆಯೂ ಮದುವೆಗೆ ಒಪ್ಪಿದ್ದಾಳೆ. ಕೊರೋನಾ ಭೀತಿಯಿಂದ ಸರಳವಾಗಿ ಮದುವೆ ನೆರವೇರಿಸಲಾಗಿದೆ.
Published by: Sushma Chakre
First published: July 5, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading