ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಐಪಿ ದರ್ಶನ ರದ್ದು ಮಾಡಲು ಟಿಟಿಡಿ ಚಿಂತನೆ!

ಟಿಡಿಪಿ ಸರ್ಕಾರ ಆಡಳಿತದಲ್ಲಿದ್ದಾಗ ತಿರುಪತಿ ದೇವಾಲಯ ದರ್ಶನ ಕುರಿತು ನೀಡಿರುವ ಪದ್ಧತಿಗಳನ್ನು ಈಗಿನ ಆಡಳಿತ ಮಂಡಳಿ ರದ್ದು ಮಾಡಲು ಮುಂದಾಗಿದೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

Seema.R | news18
Updated:July 13, 2019, 5:53 PM IST
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಐಪಿ ದರ್ಶನ ರದ್ದು ಮಾಡಲು ಟಿಟಿಡಿ ಚಿಂತನೆ!
ತಿರುಪತಿ ತಿಮ್ಮಪ್ಪ
  • News18
  • Last Updated: July 13, 2019, 5:53 PM IST
  • Share this:
ಹೈದ್ರಾಬಾದ್​ (ಜು.13):  ತಿರುಪತಿ ತಿಮ್ಮಪ್ಪನ ದರ್ಶನ ಮಾಡುವುದು ಎಂದರೇ  ಜನಸಾಮಾನ್ಯರಿಗೆ ಅದು ದೊಡ್ಡ ಯಾಗ ಮಾಡಿದಂತೆ. ಕಾರಣ ತಿಮ್ಮಪ್ಪನ ದರ್ಶನ ಮಾಡಲು ಯಾವಾಗಲು ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತಿರುತ್ತಿದ್ದಾರೆ. ಏಳು ಬೆಟ್ಟಗಳನ್ನು ಸಾಗಿ ಗಂಟೆ ಮಾತ್ರವಲ್ಲದೇ ದಿನಗಳವರೆಗೂ ಕಾದು ತಿಮ್ಮಪ್ಪನ ದರ್ಶನ ಪಡೆದವರು ಇದ್ದಾರೆ. ಆದರೆ, ಈ ಕಷ್ಟ ವಿಐಪಿಗಳಿಗಿಲ್ಲ. ನೇರವಾಗಿ ದರ್ಶನ ಮಾಡುವ ವಿಐಪಿಗಳಿಂದಾಗಿ ಜನಸಾಮಾನ್ಯರು ತೊಂದರೆ ಪಡುವುದು ಸುಳ್ಳಲ್ಲ. ಇದೇ ಕಾರಣಕ್ಕೆ ತಿರುಪತಿ ತಿರುಮಲ ದೇವಾಲಯ ಮಂಡಳಿ ಈ ವಿಐಪಿ ದರ್ಶನ ರದ್ದು ಮಾಡುವ ಕುರಿತು ಯೋಚಿಸಿದೆ.

ಟಿಡಿಪಿ ಸರ್ಕಾರ ಆಡಳಿತದಲ್ಲಿದ್ದಾಗ ತಿರುಪತಿ ದೇವಾಲಯ ದರ್ಶನ ಕುರಿತು ನೀಡಿರುವ ಪದ್ಧತಿಗಳನ್ನು ಈಗಿನ ಆಡಳಿತ ಮಂಡಳಿ ರದ್ದು ಮಾಡಲು ಮುಂದಾಗಿದೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

tirupati
ತಿರುಪತಿ ದೇವಸ್ಥಾನ


ತಿರುಪತಿ ದೇವಾಲಯಕ್ಕೆ ವಿಐಪಿ ಪ್ರವೇಶ ಪದ್ದತಿಯನ್ನು ರದ್ದು ಮಾಡಬೇಕು ಎಂದು ಉಮೇಶ್​ ಚಂದ್ರ ಎನ್ನುವವರು ಈ ಹಿಂದೆ ಹೈದ್ರಾಬಾದ್​ ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ಕೋರ್ಟ್​ ವಿಚಾರಣೆ ನಡೆಸಲಿದ್ದು, ಅದಕ್ಕೆ ಮುನ್ನವೇ  ಈ ಪದ್ದತಿಯನ್ನು ಕೈ ಬಿಡಲು ಟಿಟಿಡಿ ಮಂಡಳಿಯೇ ಮುಂದಾಗಿದೆ.

ಈ ಪದ್ಧತಿಯ ಪ್ರಕಾರ ತಿಮ್ಮಪ್ಪನ ದರ್ಶನ ಪಡೆಯಲು ಎಲ್​1,ಎಲ್​2, ಎಲ್​3, ಎಲ್​4 ಎಂದು ನಾಲ್ಕು ವಿಧ ಅನುಸರಿಸಲಾಗುತ್ತಿದೆ. ಇದರಲ್ಲಿ ಎಲ್​1 ಪದ್ಧತಿಗೆ ಮೊದಲ ಆದ್ಯತೆ ಇದರಡಿ ವಿಐಪಿಗಳು ಒಬ್ಬರಿಗೆ 500 ರೂ ಟಿಕೆಟ್​ ಕೊಂಡು ಶೀಘ್ರದಲ್ಲಿ ದೇವರ ದರ್ಶನ ಪಡೆಯಬಹುದು. ಇದರಲ್ಲಿ ವಿವಿಐಪಿಗಳು ದರ್ಶನವೂ ಬರಲಿದ್ದು, ಇದರಡಿ ನ್ಯಾಯಾಧೀಶರು, ಸರ್ಕಾರದ ಉನ್ನತಾಧಿಕಾರಿ ಹಾಗೂ ರಾಜಕಾರಣಿಗಳು ವಿಶೇಷ ದರ್ಶನ ಪಡೆಯಬಹುದು.

ಎಲ್​ 2ನಲ್ಲಿ ಟಿಟಿಡಿ ಸಿಬ್ಬಂದಿ ಹಾಗೂ ಕುಟುಂಬಸ್ಥರು, ಮಧ್ಯಮ ಮಟ್ಟದ ಸರ್ಕಾರಿ ಅಧಿಕಾರಿಗಳು ಬರುತ್ತಾರೆ. ಎಲ್​3 ಅಡಿ ವಿಐಪಿಗಳಿಂದ ಶಿಫಾರಸ್ಸು ಪಡೆದಿರುವವರು ದರ್ಶನ ಪಡೆಯಬಹುದು.

ಇದನ್ನು ಓದಿ: 4.5 ಕೆಜಿ ತೂಕದ ಮಗು ಹೆರಿಗೆ ಮಾಡಿಸಲಾಗದೆ, ಯಾಕಿಷ್ಟು ತಿನ್ನಿಸಿದ್ರಿ ಎಂದು ಗರ್ಭಿಣಿ ಅಜ್ಜಿಗೆ ಹೊಡೆದ ನರ್ಸ್ಇನ್ನು ಈ ಕುರಿತು ಮಾತನಾಡಿರುವ ಟಿಟಿಡಿ ಮಂಡಳಿ, ಗಣ್ಯರಿಗೆ ವಿಶೇಷ ದರ್ಶನ ಇನ್ನು ಅವಕಾಶವಿದೆ. ಆದರೆ ಪಟ್ಟಿಗಳ ಆಧಾರದ ಮೇಲೆ ಭಕ್ತರನ್ನು ಬೇರ್ಪಡಿಸುವುದನ್ನು ನಿಲ್ಲಿಸಲಾಗುವುದು. ಇದು ತಾರತಮ್ಯ ಹಾಗೂ ಎಲ್ಲರೂ ಸಮಾನರು ಎಂಬ ನಿಯಮದ ಉಲ್ಲಂಘನೆಯಾಗಿದೆ ಎಂದರು.

ಟಿಟಿಡಿ ಶೀಘ್ರದಲ್ಲಿಯೇ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲಿದ್ದು, ದೇವಾಲಯದ ಸಂಪ್ರದಾಯವನ್ನು ಗೌರವಿಸಲಾಗುವುದು. ನ್ಯಾಯಾಲಯ ಪದ್ಧತಿಯಲ್ಲಿ ಬದಲಾವಣೆ ಮಾಡಬಹುದು ಹೊರತು ಸಂಪ್ರದಾಯದಲ್ಲಿ ಅಲ್ಲ ಎಂದರು.

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading