Lakhimpur Kheri ಹಿಂಸಾಚಾರದಲ್ಲಿ ಐವರು ರೈತರ ಸಾವು; ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದ ರಾಹುಲ್ ಗಾಂಧಿ

ಈ ಅಮಾನವೀಯ ಹಿಂಸಾಚಾರ ಕಂಡರೂ  ದೊಡ್ಡವರು ಮೌನವಾಗಿಯೇ ಇದ್ದಾರೆ. ಅವರು ಮೊದಲೇ ಇಲ್ಲವಾಗಿದ್ದಾರೆ. ಆದ್ರೆ ಈ ಬಲಿದಾನವನ್ನು ವ್ಯರ್ಥವಾಗಲು ಬಿಡಲಾರೆವು. ಕಿಸಾನ್ ಜಿಂದಾಬಾದ್ ಎಂದು  ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಲಖಿಮಪುರ ಖೇರಿಯ ಹಿಂಸಾಚಾರ

ಲಖಿಮಪುರ ಖೇರಿಯ ಹಿಂಸಾಚಾರ

 • Share this:
  ನವದೆಹಲಿ: ಉತ್ತರ ಪ್ರದೇಶದ ಲಖಿಮಪುರ ಖೇರಿಯ ಹಿಂಸಾಚಾರ(Violence In Lakhimpur Kheri)ದಲ್ಲಿ ಐವರು ರೈತರು (Farmers) ಸಾವನ್ನಪ್ಪಿದ್ದು, ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav ), ಇದೊಂದು ಅಮಾನವೀಯ ಘಟನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ರೈತರ ಬಲಿದಾನವನ್ನು ವ್ಯರ್ಥವಾಗಲು ಬಿಡಲ್ಲ ಎಂದು ಗುಡುಗಿದ್ದಾರೆ. ಲಖಿಮಪುರದ ಖೇರಿ ಬಳಿಯಲ್ಲಿ ರೈತರು ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾಗೆ ಕಪ್ಪು ಧ್ವಜ ಪ್ರದರ್ಶಿಸಿ ದಿಕ್ಕಾರ ಕೂಗಿದ್ದರು. ಈ ವೇಳೆ ಸಚಿವರ ಪುತ್ರ ಅಭಿಷೇಕ್ ಮಿಶ್ರಾ ( Union Minister of State (MoS) for Home Ajay Mishra's son), ರೈತರ ಮೇಲೆಯೇ ವಾಹನ ಚಲಾಯಿಸಿದ್ದರು. ವಾಹನಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ರೆ, ಪಲ್ಟಿಯಾಗುವಾಗ ಮೂವರು ಸಾವನ್ನಪ್ಪಿದ್ದರು. ಪೊಲೀಸರು ಸೇರಿದಂತೆ ಒಟ್ಟು 10 ಜನ ಗಾಯಗೊಂಡಿದ್ದಾರೆ. ಆದರೆ ಪೊಲೀಸರು ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದನ್ನು ಖಚಿತ ಪಡಿಸುತ್ತಿಲ್ಲ.

  "ಬಿಜೆಪಿ ದೌರ್ಜನ್ಯವನ್ನ ಯುಪಿ ಸಹಿಸಲ್ಲ"

  ಉತ್ತರ ಪ್ರದೇಶದ ವಿಪಕ್ಷ ನಾಯಕ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲಖಿಮಪುರ ಖೇರಿ ಹಿಂಸಾಚಾರದ ಕುರಿತು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರದ ನೂತನ ಮೂರು ಕೃಷಿ ಕಾನೂನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ರಾಜ್ಯ ಸಚಿವರ ಪುತ್ರ ಕಾರ್ ಚಲಾಯಿಸಿರೋದು ಅಮಾನವೀಯ ಕ್ರೂರ ಕೃತ್ಯ. ಇನ್ಮುಂದೆ ಉತ್ತರ ಪ್ರದೇಶ ಬಿಜೆಪಿ(BJP)ಯ ದೌರ್ಜನ್ಯವನ್ನು ಸಹಿಸಿಕೊಂಡು ಕುಳಿತುಕೊಳ್ಳಲ್ಲ. ಇದೇ ರೀತಿ ಮುಂದುವರಿದ್ರೆ ಬಿಜೆಪಿ ನಡೆದುಕೊಂಡು  ಯಾಕೆ ವಾಹನದಲ್ಲಿಯೂ ಹೋಗಲು ಆಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

  "ಬಲಿದಾನ ವ್ಯರ್ಥವಾಗಲು ಬಿಡಲ್ಲ"

  ಈ ಅಮಾನವೀಯ ಹಿಂಸಾಚಾರ ಕಂಡರೂ  ದೊಡ್ಡವರು ಮೌನವಾಗಿಯೇ ಇದ್ದಾರೆ. ಅವರು ಮೊದಲೇ ಇಲ್ಲವಾಗಿದ್ದಾರೆ. ಆದ್ರೆ ಈ ಬಲಿದಾನವನ್ನು ವ್ಯರ್ಥವಾಗಲು ಬಿಡಲಾರೆವು. ಕಿಸಾನ್ ಜಿಂದಾಬಾದ್ ಎಂದು  ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ಬಿಜೆಪಿ ಸರ್ಕಾರ ರೈತರನ್ನು ಎಷ್ಟು ಮಾಡುತ್ತಿದೆ? ಅವರಿಗೂ ಬದುಕುವ ಹಕ್ಕು ಸಹ ಇಲ್ಲವೇ? ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರೆ ಗುಂಡು ಹೊಡಿತೀರಾ? ವಾಹನ ಹತ್ತಿಸಿ ಅವರನ್ನ ತುಳಿಯುತ್ತೀರಾ? ಇದು ರೈತರ ದೇಶ. ಬಿಜೆಪಿಯ ಕ್ರೂರ ಸಿದ್ಧಾಂತ ನಕಲಿಯಲ್ಲ. ರೈತರ ಧ್ವನಿಗೆ ತಾಕತ್ತು ನೀಡುವ ಮೂಲಕ ಕಿಸಾನ್ ಸತ್ಯಾಗ್ರಹ(Farmers Protest)ವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

  ಇದನ್ನೂ ಓದಿ: Terror funding: ಭಯೋತ್ಪಾದಕರಿಗೆ ಹಣ ನೀಡ್ತಿದ್ದ ವ್ಯಾಪಾರಿಗಳ ನಿವಾಸದ ಮೇಲೆ NIA ದಾಳಿ

  ಮೋದಿಜಿಗೆ ರೈತರ ಬಲಿ ಇನ್ನೆಷ್ಟು ಬೇಕು?

  ಉತ್ತರ ಪ್ರದೇಶದ ಎಎಪಿ (AAP) ಉಸ್ತುವಾರಿ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (Sanjay Singh), ಇಂತಹ ಅಧಿಕಾರದ ನಶೆ ನೀವು ಎಂದು ನೋಡಿರಲ್ಲ ಮತ್ತು ಕೇಳಿರಲ್ಲ. ಮೂರು ಆಂದೋಲನಕಾರಿ ರೈತರ ಮೇಲೆ ಸಚಿವರ ಪುತ್ರ ವಾಹನ ಚಲಾಯಿಸಿದ್ದಾನೆ. ಮೋದಿಜೀ (PM Narendra Modi) ನಿಮಗೆ ರೈತರ ಬಲಿ ಇನ್ನೆಷ್ಟು ಬೇಕು? ಕೊಲೆಗಾರನನ್ನು ಶೀಘ್ರವೇ ಬಂಧಿಸಿ, ಮೃತದ ಕುಟುಂಬಸ್ಥರಿಗೆ ಪರಿಹಾರ ನೀಡಿ. ಪ್ರಕರಣದ ತನಿಖೆಯನ್ನು ಸಿಬಿಐ(CBI)ಗೆ ನೀಡಿ ಎಂದು ಆಗ್ರಹಿಸಿದ್ದಾರೆ.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: