ಜೆಎನ್​ಯು ಹಿಂಸಾಚಾರ; ಮಾಹಿತಿ ಸಂರಕ್ಷಿಸಲು ವಾಟ್ಸಾಪ್​, ಫೇಸ್​ಬುಕ್​ಗೆ ದೆಹಲಿ ಹೈ ಕೋರ್ಟ್​ ನೋಟಿಸ್​

ಯೂನಿಟಿ ಎಗೆನೆಸ್ಟ್​ ಲೆಫ್ಟ್​ ಮತ್ತು ಫ್ರೆಂಡ್ಸ್​ ಆಫ್​ ಆರ್​ಎಸ್​ಎಸ್​ ವಾಟ್ಸಾಪ್​ ಗ್ರೂಪ್​ನ ಮಾಹಿತಿಗಳನ್ನು ನೀಡುವಂತೆ ಪ್ರೊಫೆಸರ್​ಗಳು ಕೋರಿದ್ದರು. ಹಿಂಸಾಚಾರ ಸಂಬಂಧಿಸಿದಂತೆ ವಾಟ್ಸಾಪ್​ನಲ್ಲಿ ನಡೆದ ಮೆಸೇಜ್​, ದೃಶ್ಯ, ವಿಡಿಯೋ ಮತ್ತು ಸದಸ್ಯರ ಫೋನ್​ ನಂಬರ್​ಗಳನ್ನು ಸಂರಕ್ಷಿಸಿ ನೀಡುವಂತೆ ಕೋರಲಾಗಿದೆ.

Seema.R | news18-kannada
Updated:January 13, 2020, 1:31 PM IST
ಜೆಎನ್​ಯು ಹಿಂಸಾಚಾರ; ಮಾಹಿತಿ ಸಂರಕ್ಷಿಸಲು ವಾಟ್ಸಾಪ್​, ಫೇಸ್​ಬುಕ್​ಗೆ ದೆಹಲಿ ಹೈ ಕೋರ್ಟ್​ ನೋಟಿಸ್​
ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ
  • Share this:
ನವದೆಹಲಿ (ಜ.13): ಜೆಎನ್​ಯುನಲ್ಲಿ ನಡೆದ ಹಿಂಸಾಚಾರ ಕುರಿತು ದತ್ತಾಂಶಗಳು, ಸಿಸಿಟಿವಿ ದೃಶ್ಯ ಮತ್ತು ಇತರೆ ಮಾಹಿತಿಗಳನ್ನು ಸಂರಕ್ಷಿಸುವ ಕುರಿತು ಸಾಮಾಜಿಕ ಜಾಲತಾಣದ ಕಂಪನಿಗಳಾದ ವಾಟ್ಸಾಪ್​, ಫೇಸ್​ಬುಕ್​,ಗೂಗಲ್​ ಮತ್ತು ಆ್ಯಪಲ್​ ಕಂಪನಿಗಳಿಗೆ ದೆಹಲಿ ಹೈ ಕೋರ್ಟ್​ ನೋಟಿಸ್ ಜಾರಿ ಮಾಡಿದೆ.

ಜನವರಿ 5ರಂದು ಜವಾಹತ್​ ಲಾಲ್​ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕುರಿತು ಮಾಹಿತಿಗಳನ್ನು ಸಂರಕ್ಷಿಸುವಂತೆ ನಿರ್ದೇಶನ ಕೋರಿ ಮೂವರು ಫ್ರೊಫೆಸರ್​ಗಳು ಹೈ ಕೋರ್ಟ್​ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್​, ಘಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಈ ನಿರ್ದೇಶನ ನೀಡಿದೆ. ಜೊತೆಗೆ ಈ ಕುರಿತು ದೆಹಲಿ ಪೊಲೀಸರು ಮತ್ತು ಸರ್ಕಾರಕ್ಕೆ ಕೂಡ ಪ್ರತಿಕ್ರಿಯಿಸುವಂತೆ ಕೋರಿದೆ.

ಇನ್ನು 1000 ಎಕರೆ ಕ್ಯಾಂಪಸ್​ನಲ್ಲಿ 135 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅವುಗಳ ಎಲ್ಲಾ ಫೋಟೆಜ್​ ನೀಡುವಂತೆ ಕೇಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

'ಯೂನಿಟಿ ಎಗೆನೆಸ್ಟ್​ ಲೆಫ್ಟ್'​ ಮತ್ತು 'ಫ್ರೆಂಡ್ಸ್​ ಆಫ್​ ಆರ್​ಎಸ್​ಎಸ್'​ ವಾಟ್ಸಾಪ್​ ಗ್ರೂಪ್​ನ ಮಾಹಿತಿಗಳನ್ನು ನೀಡುವಂತೆ ಪ್ರೊಫೆಸರ್​ಗಳು ಕೋರಿದ್ದರು. ಹಿಂಸಾಚಾರ ಸಂಬಂಧಿಸಿದಂತೆ ವಾಟ್ಸಾಪ್​ನಲ್ಲಿ ನಡೆದ ಮೆಸೇಜ್​, ದೃಶ್ಯ, ವಿಡಿಯೋ ಮತ್ತು ಸದಸ್ಯರ ಫೋನ್​ ನಂಬರ್​ಗಳನ್ನು ಸಂರಕ್ಷಿಸಿ ನೀಡುವಂತೆ ಕೋರಲಾಗಿದೆ.

ಇನ್ನು ಈ ಎರಡು ಗುಂಪುಗಳ ವಾಟ್ಸಾಪ್​ ಮಾಹಿತಿ ಕೋರಲಾಗಿದ್ದು, ಅವರ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ಸಿಸಿಟಿವಿ ದೃಶ್ಯವಾಳಿಗಳ ಮಾಹಿತಿ ಕೋರಲಾಗಿದ್ದು, ಈ ಕುರಿತು ವಿಶ್ವವಿದ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.

ಇದನ್ನು ಓದಿ: ಜೆಎನ್​​​ಯು ಹಿಂಸಾಚಾರ ಕೇಸ್​: ಮುಸುಕುಧಾರಿ ಮಹಿಳೆ ಸೇರಿದಂತೆ 49 ಮಂದಿಗೆ ಪೊಲೀಸ್​​ ನೋಟಿಸ್‌ಜನವರಿ 5ರಂದು ಭಾನುವಾರ ರಾತ್ರಿ ಜೆಎನ್​ಯು ಆವರಣಕ್ಕೆ ನುಗ್ಗಿದ ಮುಸುಕುಧಾರಿಗಳು 40 ಜನ ವಿದ್ಯಾರ್ಥಿ ಹಾಗೂ ಪ್ರಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದರು. ಗಲಭೆಯಲ್ಲಿ ಜೆಎನ್​ಯು ವಿದ್ಯಾರ್ತಿ ಸಂಘದ ಅಧ್ಯಕ್ಷೆ ಐಶ್​ಘೋಷ್​ ಕೂಡ ಥಳಿತಕ್ಕೆ ಒಳಗಾಗಿದ್ದರು.
First published: January 13, 2020, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading