ಗಾಂಧಿ ನಾಡಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ: ರಾಮನಾಥ್ ಕೋವಿಂದ್


Updated:August 14, 2018, 9:22 PM IST
ಗಾಂಧಿ ನಾಡಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ: ರಾಮನಾಥ್ ಕೋವಿಂದ್

Updated: August 14, 2018, 9:22 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.14): ಮಹಾತ್ಮ ಗಾಂಧೀ ಹುಟ್ಟಿದ ನಾಡಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಬಾಪು ಮಂತ್ರ ಜಪಿಸಿದ್ಧಾರೆ. ನಾಳೆ ದೇಶಾದ್ಯಂತ ನಾಳೆ 72ನೇ ಸ್ವಾತಂತ್ರ ದಿನಾಚರಣೆ ಹಿನ್ನಲ್ಲೆಯಲ್ಲಿ ಮಾತಾಡಿದ ರಾಷ್ಟ್ರಪತಿ ಅವರು, ಭಾರತ ಗಾಂಧೀಜಿ ಹುಟ್ಟಿ ಬೆಳೆದ ದೇಶ, ಇಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದಿದ್ದಾರೆ.

ನಮ್ಮ ದೇಶಕ್ಕಾಗಿ ಸಾವಿರಾರು ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ಬ್ರಿಟೀಷರ ದಾಸ್ಯತ್ವದಿಂದ ಭಾರತ ಮುಕ್ತಿಗೊಂಡ ಮಹತ್ವದ ದಿನ. ಸ್ವಾತಂತ್ರ ದಿನಾಚರಣೆಯೂ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರ ದಿನವಾಗಿದ್ದು, ದೇಶಕ್ಕಾಗಿ ಪ್ರಾಣತೆತ್ತ ಪೂರ್ವಜರನ್ನು ನೆನೆಯಬೇಕು ಎಂದರು.

ಇನ್ನು ದೇಶದಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಇಲ್ಲವಾದಲ್ಲಿ ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯೋತ್ಸವ ಅಪೂರ್ಣವಾಗಲಿದೆ. ಪುರುಷರಿಗೆ ಸಮಾನಾಗಿ ದೇಶದ ಮಹಿಳೆಯರು ಬಳೆಯಲು ಬಿಡಬೇಕು. ಅದು ಹಿರಿಯರ ಆಶಯಗಳಿ ಮನ್ನಣೆ ಸಿಕ್ಕಾಂತಾಗುತ್ತದೆ ಎಂದುರಾಮನಾಥ್ ಕೋವಿಂದ್​ ತಿಳಿಸಿದರು.

ನಮ್ಮ ದೇಶದ ತ್ರಿವರ್ಣ ಧ್ವಜವೇ ಭಾರತದ ಅಸ್ಮಿತೆ. ನಾಳೆ ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಪೂರ್ವಜರು ನಡೆದ ಮಾರ್ಗದಲ್ಲಿ ನಾವು ಸಾಗಬೇಕಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಪಣ ತೊಡಬೇಕಿದೆ ಎಂದು ಹೇಳಿದರು.

ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ ಸಂಕಷ್ಟದಲ್ಲಿದ್ದಾನೆ. ನಮ್ಮೆಲ್ಲರಿಗೂ ಅನ್ನ ನೀಡುವ ಲಕ್ಷಾಂತರ ರೈತರ ಆಧಾಯ ಹೆಚ್ಚಾಗಬೇಕಿದೆ. ಉದ್ಯೋಗ ಸೃಷ್ಟಿಸುವ ಮೂಲಕ ಬಡತನ ನಿರ್ಮೂಲಣೆ ಮಾಡಬೇಕು. ದೇಶದ ಬಡ ಜನತೆಗಾಗಿ ಶ್ರಮಿಸೋಣ, ಸ್ವಾತಂತ್ರ ಹೋರಾಟಗಾರರ ಆಶಯಗಳನ್ನು ಈಡೇರಿಸೋಣ ಎಂದು ರಾಮನಾಥ್ ಕೋವಿಂದ್​ ಪೂರ್ವಜರನ್ನು ನೆನೆದರು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...