HOME » NEWS » National-international » VIOLENCE DURING THE TRACTOR RALLY IS UNFORTUNATE BUT THE FARMERS PROTEST DOES NOT STOP SAYS ARVIND KEJRIWAL MAK

Farmers Protest: ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ನಡೆದ ಹಿಂಸಾಚಾರ ದುರದೃಷ್ಟಕರ, ಆದರೆ ರೈತ ಹೋರಾಟ ನಿಲ್ಲುವುದಿಲ್ಲ; ಅರವಿಂದ ಕೇಜ್ರಿವಾಲ್

ದೆಹಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿನ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಯೋಗೇಂದ್ರ ಯಾದವ್ ಸೇರಿದಂತೆ ಸುಮಾರು 20 ರೈತ ಮುಖಂಡರಿಗೆ ದೆಹಲಿ ಪೊಲೀಸ್ ನೋಟಿಸ್ ನೀಡಿದೆ.

news18-kannada
Updated:January 28, 2021, 3:26 PM IST
Farmers Protest: ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ನಡೆದ ಹಿಂಸಾಚಾರ ದುರದೃಷ್ಟಕರ, ಆದರೆ ರೈತ ಹೋರಾಟ ನಿಲ್ಲುವುದಿಲ್ಲ; ಅರವಿಂದ ಕೇಜ್ರಿವಾಲ್
ಜನವರಿ 26 ರಂದು ಕೆಂಪುಕೋಟೆ ಬಳಿ ರೈತ ಹೋರಾಟದ ವೇಳೆ ನಡೆದ ಗಲಭೆ.
  • Share this:
ನವ ದೆಹಲಿ (ಜನವರಿ 28); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿದೆ. ಇದು ನಿಜಕ್ಕೂ ದುರದೃಷ್ಟಕರ. ಆದರೆ, ಯಾವುದೇ ಕಾರಣಕ್ಕೂ ರೈತ ವಿರೋಧಿ ಕರಾಳ ಕೃಷಿ ಕಾನೂನಿನ ವಿರುದ್ಧದ ರೈತ ಹೋರಾಟ ಮಾತ್ರ ಕೊನೆಗೊಳ್ಳುವುದಿಲ್ಲ. ಮುಂದಿನ ದಿನಗಳಲ್ಲೂ ಈ ಪ್ರತಿಭಟನೆ ಶಾಂತಿಯುತವಾಗಿಯೇ ನಡೆಯಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಜನವರಿ.26 ರಂದು ರೈತ ಹೋರಾಟಗಾರರ ಒಂದು ಗುಂಪು ತಮಗೆ ಅನುಮತಿ ನೀಡದ ರಸ್ತೆಯಲ್ಲಿ ಟ್ರ್ಯಾಕ್ಟರ್​ ರ್‍ಯಾಲಿ ನಡೆಸಿತ್ತು. ಪರಿಣಾಮ ಪೊಲೀಸರು ಲಾಠಿ ಚಾರ್ಚ್​ ನಡೆಸುವ ಮೂಲಕ ದೊಡ್ಡ ಗಲಭೆಗೆ ಈ ಘಟನೆ ಸಾಕ್ಷಿಯಾಗಿತ್ತು. ಈ ಹಿಂಸಾಚಾರಕ್ಕೆ ಓರ್ವ ಬಲಿಯಾಗಿದ್ದರೆ, 20 ಜನ ಗಾಯಾಳುಗಳಾಗಿದ್ದರು. ಈ ಘಟನೆ ಸಂಬಂಧ 200 ಜನರನ್ನು ಬಂಧಿಸಿರುವ ದೆಹಲಿ ಪೊಲೀಸರು 22 ಎಫ್​ಐಆರ್​ ದಾಖಲಿಸಿದ್ದಾರೆ.

ಈ ಘಟನೆ ಇದೀಗ ರಾಷ್ಟ್ರಾಧ್ಯಂತ ಪರ-ವಿರೋಧ ಚರ್ಚೆಗೆ ಗುರಿಯಾಗಿದೆ. ಇದರ ಬೆನ್ನಿಗೆ ಘಟನೆ ಕುರಿತು ಇಂದು ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ಪೆರೇಡ್ ಸಂದರ್ಭ ದೆಹಲಿಯಲ್ಲಿ ನಡೆದ ಅಹಿತಕರ ಘಟನೆ ದುರದೃಷ್ಟರ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಆ ಘಟನೆಯಿಂದ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಆತಂಕಗಳು ಇನ್ನೂ ಅಸ್ತಿತ್ವದಲ್ಲಿವೆ, ಆದ್ದರಿಂದ ನಾವೆಲ್ಲರೂ ರೈತರನ್ನು ಶಾಂತಿಯುತವಾಗಿ ಬೆಂಬಲಿಸಬೇಕು" ಎಂದು ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕರೆ ನೀಡಿದ್ದಾರೆ.

ದೆಹಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿನ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಯೋಗೇಂದ್ರ ಯಾದವ್ ಸೇರಿದಂತೆ ಸುಮಾರು 20 ರೈತ ಮುಖಂಡರಿಗೆ ದೆಹಲಿ ಪೊಲೀಸ್ ನೋಟಿಸ್ ನೀಡಿದೆ.

ಇದನ್ನೂ ಓದಿ: Farmers Protest: ರೈತ ಮಸೂದೆಯನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೋರ್ವ ನಾಯಕ

ಈ ಕುರಿತು ಎಎನ್‌ಐ ಟ್ವೀಟ್ ಮಾಡಿದ್ದು, "ಯೋಗೇಂದ್ರ ಯಾದವ್, ಬಲ್‌ದೇವ್ ಸಂಗ್ ಸಿರ್ಸಾ, ಬಲ್‌ಬೀರ್ ಎಸ್ ರಾಜೇವಾಲ್ ಸೇರಿದಂತೆ 20 ರೈತ ಮುಖಂಡರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ 3 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಲಾಗಿದೆ" ಎಂದು ವರದಿಯಾಗಿದೆ.

ಇನ್ನೂ ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ರೈತ ಮುಖಂಡರು ಸಭೆ ನಡೆಸಿದ್ದರು. ಈ ವೇಳೆ ಪ್ರಮುಖ ಎರಡು ರೈತ ಸಂಘಟನೆಗಳು ಹಿಂಸಾಚಾರದ ಹೋರಾಟದಲ್ಲಿ ನಮಗೆ ಸಮ್ಮತಿ ಇಲ್ಲ ಎಂದು ತಿಳಿಸಿ ಹೋರಾಟದ ಕಣದಿಂದಲೇ ಹಿಂದೆ ಸರಿದಿದ್ದಾರೆ. ಆದರೂ 400ಕ್ಕೂ ಹೆಚ್ಚು ರೈತ ಸಂಘಗಳು ದೆಹಲಿಯ ರೈತ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿವೆ ಎಂಬುದು ಉಲ್ಲೇಖಾರ್ಹ.
Published by: MAshok Kumar
First published: January 28, 2021, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories