• Home
  • »
  • News
  • »
  • national-international
  • »
  • Ravana Pooja: ಈ ಗ್ರಾಮಸ್ಥರಿಗೆ ರಾವಣನೇ ಜ್ಞಾನಿ! ವಿಶೇಷ ಪೂಜೆ ಸಲ್ಲಿಸಿ, ಮೌನ ಪ್ರಾರ್ಥನೆ

Ravana Pooja: ಈ ಗ್ರಾಮಸ್ಥರಿಗೆ ರಾವಣನೇ ಜ್ಞಾನಿ! ವಿಶೇಷ ಪೂಜೆ ಸಲ್ಲಿಸಿ, ಮೌನ ಪ್ರಾರ್ಥನೆ

ರಾವಣನಿಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು

ರಾವಣನಿಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು

ವದೆಹಲಿಯ ಪೂರ್ವಕ್ಕೆ ಸುಮಾರು 33 ಕಿಮೀ ದೂರದಲ್ಲಿ ಬಿಸ್ರಾಖ್ ಎಂಬ ಗ್ರಾಮವಿದ್ದು, ಈ ಗ್ರಾಮದವರು ರಾವಣನನ್ನು ತಮ್ಮ ಪೂರ್ವಜ ಎಂದು ಪೂಜಿಸುತ್ತಿದ್ದಾರೆ. ಬಿಳಿ ಬಣ್ಣದ ಅಮೃತಶಿಲೆಯಲ್ಲಿ 7 ಅಡಿ ರಾವಣನ ವಿಗ್ರಹವನ್ನು ಗ್ರಾಮಸ್ಥರು ಸೇರಿ ನಿರ್ಮಿಸಿದ್ದು ಇದರ ಪ್ರತಿಷ್ಟಾಪನೆಯನ್ನು ಮುಂದಿನ ದಸರಾ ಸಮಯದಲ್ಲಿ ನೆರವೇರಿಸುವುದಾಗಿ ಹಳ್ಳಿಗರು ತಿಳಿಸಿದ್ದಾರೆ. ಇಲ್ಲಿನ ನಿವಾಸಿಗಳು ರಾವಣನ ಮೂರ್ತಿಗೆ ಪೂಜೆಗೈದು ಆತ್ಮದ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ದಸರಾ ಸಮಯದಲ್ಲಿ ರಾವಣನ ಪ್ರತಿಕೃತಿ ಅಗ್ನಿಗೆ ಆಹುತಿಯಾಗುತ್ತಿದ್ದರೆ ಬಿಸ್ರಾಖ್ ಹಳ್ಳಿಗರು (Bisrakh Villagers) ರಾವಣನ ಸದ್ಗತಿಗಾಗಿ ಶೋಕಾಚರಣೆಯನ್ನು ಮಾಡುತ್ತಾರೆ, ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ನವದೆಹಲಿಯ ಪೂರ್ವಕ್ಕೆ ಸುಮಾರು 33 ಕಿಮೀ ದೂರದಲ್ಲಿ ಬಿಸ್ರಾಖ್ ಎಂಬ ಗ್ರಾಮವಿದ್ದು, ಈ ಗ್ರಾಮದವರು ರಾವಣನನ್ನು ತಮ್ಮ ಪೂರ್ವಜ ಎಂದು ಪೂಜಿಸುತ್ತಿದ್ದಾರೆ. ಬಿಳಿ ಬಣ್ಣದ ಅಮೃತಶಿಲೆಯಲ್ಲಿ 7 ಅಡಿ ರಾವಣನ (Ravana) ವಿಗ್ರಹವನ್ನು ಗ್ರಾಮಸ್ಥರು ಸೇರಿ ನಿರ್ಮಿಸಿದ್ದು ಇದರ ಪ್ರತಿಷ್ಟಾಪನೆಯನ್ನು ಮುಂದಿನ ದಸರಾ ಸಮಯದಲ್ಲಿ ನೆರವೇರಿಸುವುದಾಗಿ ಹಳ್ಳಿಗರು ತಿಳಿಸಿದ್ದಾರೆ. ಇಲ್ಲಿನ ನಿವಾಸಿಗಳು ರಾವಣನ ಮೂರ್ತಿಗೆ ಪೂಜೆಗೈದು (Pooja) ಆತ್ಮದ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಗ್ರಾಮವು ರಾವಣನ ಕುರಿತು ಅಪಾರ ಗೌರವವನ್ನು ಹೊಂದಿದೆ. ಹತ್ತಾರು ಅಂಗಡಿಗಳಲ್ಲಿ ರಾವಣನ ಹೆಸರು ಕಾಣಸಿಗುತ್ತದೆ.


7 ಅಡಿಯ ಅಮೃತಶಿಲೆಯ ರಾವಣನ ವಿಗ್ರಹ
ರಾವಣನಿಗೆ ನಡೆಸುವ ಡಿಜೆಯಲ್ಲಿ ಹಬ್ಬಗಳು ಮತ್ತು ಆಚರಣೆಗಳಿಗಾಗಿ ಸಂಗೀತ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದು. ಗದ್ದೆಗಳಲ್ಲಿ ಕೆಲಸ ಮಾಡುವವರು ಅಂಗಡಿಗಳಲ್ಲಿ ಇರುವವರು ರಾವಣನ ಚಿತ್ರವಿರುವ ಟಿಶರ್ಟ್‌ಗಳನ್ನು ಧರಿಸುತ್ತಾರೆ. ಹೀಗೆ ಇಲ್ಲಿನ ಹಳ್ಳಿಗರು ಒಂದಿಲ್ಲೊಂದು ಕಾರಣಗಳಿಂದ ರಾವಣನನ್ನು ನೆನೆಸುತ್ತಾರೆ.


ಗ್ರಾಮದಲ್ಲಿರುವ ಶಿವಮಂದಿರ
ಗ್ರಾಮದ ನಡುಭಾಗದಲ್ಲಿ ಶಿವನ ದೇವಾಲಯವಿದೆ. ಇದನ್ನು ಬಿಸ್ರಖ್ ರಾವಣ ಮಂದಿರ ಎಂದು ಕರೆಯಲಾಗುತ್ತದೆ. ರಾವಣ ಮತ್ತು ಅವನ ಪೂರ್ವಜರು ಇಲ್ಲಿ ಪೂಜೆ ಸಲ್ಲಿಸಿದ್ದರು ಎಂದು ಗ್ರಾಮಸ್ಥರು ನಂಬುತ್ತಾರೆ. ಶಿವಲಿಂಗವನ್ನು ಹೊರತುಪಡಿಸಿ, ಇತರ ದೇವರುಗಳು, ದೇವತೆಗಳು ಮತ್ತು ಸಂತರ ಪ್ರತಿಮೆಗಳಿವೆ.


ದಸರಾ ದಿನದಂದು ಗ್ರಾಮಸ್ಥರು ರಾವಣನ ಆತ್ಮದ ಸದ್ಗತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಶಾಸ್ತ್ರ ಪೂಜೆಯನ್ನು ಗ್ರಾಮದವರು ನೆರವೇರಿಸುತ್ತಾರೆ. ಅಂದರೆ ರಾವಣನ ಆಯುಧಗಳಿಗೆ ಪೂಜೆಯನ್ನು ನೆರವೇರಿಸುತ್ತಾರೆ. ರಾವಣನ ಮಂತ್ರವನ್ನು ಜಪಿಸಿಕೊಂಡು ಈ ಪೂಜೆಗಳನ್ನು ಗ್ರಾಮಸ್ಥರು ನೆರವೇರಿಸುತ್ತಾರೆ. ರಾವಣನ ದೇವಾಲಯಲ್ಲಿರುವ ಅರ್ಚಕರಾದ ಅಶೋಕಾನಂದ ಆಚಾರ್ಯರು ರಾವಣನ ಮೂರ್ತಿಗೆ ಸಂಬಂಧಿಸಿದ ಎಲ್ಲಾ ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ.


ದಸರಾದ ದಿನ ಗ್ರಾಮಸ್ಥರು ಮೌನ ಪ್ರಾರ್ಥನೆಯನ್ನು ಮಾಡುತ್ತಾರೆ, ಆ ದಿನ ಹಳ್ಳಿಯೇ ಮೌನವಾಗಿರುತ್ತದೆ ಎಂಬುದು ಆಚಾರ್ಯರ ಮಾತಾಗಿದೆ. ಹಳ್ಳಿಯ ಕೆಲವು ಮಕ್ಕಳು ತಾತ್ಕಾಲಿಕ ಪ್ರತಿಮೆಯನ್ನು ಸುಡಲು ತೊಡಗಿದಾಗ ತಡೆದಿರುವುದಾಗಿ ಹೇಳಿದರು.


ಹಳ್ಳಿಯಲ್ಲಿ ಸಂಭವಿಸಿರುವ ಅಶುಭ ಘಟನೆಗಳು
ಹಳ್ಳಿಯ ಕುಟುಂಬವೊಂದು ಭಗವತ್ ಕಥೆಯನ್ನು ಆಯೋಜಿಸಿದ್ದರು, ಆದರೆ ಕೆಲವೇ ದಿನಗಳಲ್ಲಿ ಅವರ ಕುಟುಂಬದಲ್ಲಿ ಹಾಗೂ ನೆರೆಹೊರೆಯ ಮನೆಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿತು ಎಂಬುದು ಅರ್ಚಕರ ಮಾತಾಗಿದೆ. ನಾವು ಮೂಢನಂಬಿಕೆಗಳನ್ನು ಪಸರಿಸುತ್ತಿಲ್ಲ, ಹಳ್ಳಿಯಲ್ಲಿ ನಡೆದ ಅಹಿತಕರ ಘಟನೆಗಳೇ ಇದಕ್ಕೆ ಸಾಕ್ಷಿ ಎಂಬುದು ಅಶೋಕಾನಂದ ಆಚಾರ್ಯರ ಮಾತಾಗಿದೆ.


ಇದನ್ನೂ ಓದಿ:  Viral Video: ಸಖತ್‌ ವೈರಲ್‌ ಆಗ್ತಿರೋ ನೂತನ ಕೊಡಲಿ ವಿನ್ಯಾಸದ ವಿಡಿಯೋ, ನೀವು ನೋಡಿ ಬೆರಗಾಗ್ತಿರಾ!


ಹಳ್ಳಿಯಿಂದ ವಿವಾಹಿತರಾಗಿ ಬೇರೆಡೆಗೆ ಹೋದವರೂ ಕೂಡ ದಸರಾದಂದು ಶೋಕದಿವಸವನ್ನು ಆಚರಿಸುತ್ತಾರೆ ಎಂದು ತಿಳಿಸಿದ್ದಾರೆ. ರಾವಣನ ಪ್ರತಿಕೃತಿ ದಹನವನ್ನು ನಾನೆಂದು ಹಳ್ಳಿಯಲ್ಲಿ ನೋಡಿಲ್ಲ ಇದನ್ನು ಅಶುಭಕರ ಎಂದು ಹಳ್ಳಿಗರು ಮನಗಂಡಿರುವುದಾಗಿ ಹಳ್ಳಿಯವರಾದ ಸುಮನಾ ಅಭಿಪ್ರಾಯವಾಗಿದೆ.


ರಾವಣನನ್ನು ಜ್ಞಾನಿ ಎಂದು ಗೌರವಿಸುವ ಹಳ್ಳಿಗರು
ಹಳ್ಳಿಗರು ರಾವಣನನ್ನು ವಿದ್ಯಾವಂತ, ಪಂಡಿತ, ಜ್ಞಾನಿ ಎಂದು ಮನಗಂಡಿದ್ದಾರೆ. ನಮ್ಮ ಗೌರವಾನ್ವಿತ ದೇವರಾಗಿರುವ ರಾವಣ ದಸರಾದಂದು ವಿಶೇಷ ಪೂಜೆಗೆ ಭಾಜನರಾಗಿದ್ದಾರೆ. ಎಲ್ಲಾ ದಿನವೂ ರಾವಣನಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ ಎಂಬುದು ಹಳ್ಳಿಗರ ಮಾತಾಗಿದೆ.


ಜೈಪುರದ ವಿಗ್ರಹ ಕೆತ್ತನೆಗಾರ ಮನೀಶ್ ಶರ್ಮ ರಾವಣನ 7 ಅಡಿಯ ಅಮೃತಶಿಲೆಯ ವಿಗ್ರಹವನ್ನು ಕೆತ್ತಿದ್ದು ರಾವಣನ ಪೂರ್ವಜರ ವಿಗ್ರಹಗಳನ್ನು ಇದೇ ಕೆತ್ತನೆಗಾರ ನಿರ್ಮಿಸುತ್ತಿದ್ದಾರೆ ಎಂಬುದು ಹಳ್ಳಿಗರ ಹೇಳಿಕೆಯಾಗಿದೆ. ಇದರ ಎಲ್ಲಾ ವೆಚ್ಚವು ರೂ 4 ಲಕ್ಷಗಳಾಗಿವೆ. ಮುಂದಿನ ವರ್ಷ ಇದೆಲ್ಲಾ ವಿಗ್ರಹಗಳನ್ನು ಶಿವಲಿಂಗದೊಂದಿಗೆ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಹಳ್ಳಿಗರು ಹೇಳಿದ್ದಾರೆ.


ದಸರಾ ದಿನ ರಾವಣನಿಗೆ ಪೂಜೆ
ಬಿಸ್ರಾಖ್ ಅಯೋಧ್ಯೆಯಿಂದ 350 ಕಿಮೀ ದೂರದಲ್ಲಿದ್ದು ಶಾಸ್ತ್ರಗಳ ಪ್ರಕಾರ ರಾವಣನ ತಂದೆ ವಿಶ್ರವ ಇಲ್ಲಿ ಶಿವನ ಕುರಿತು ದೀರ್ಘ ತಪ್ಪಸ್ಸನ್ನು ನಡೆಸಿ ವರವನ್ನು ಪಡೆದನು ಎಂಬ ಐತಿಹ್ಯವಿದೆ.


ಇದನ್ನೂ ಓದಿ:  Yakshagana: ಯಕ್ಷಗಾನ ವೇಷಭೂಷಣ ಸೊಬಗು ನೋಡಿ!


ಇನ್ನು ಮುಂದಿನ ದಸರಾ ಸಮಯದಲ್ಲಿ ಎಲ್ಲರೂ ರಾವಣನ ಪ್ರತಿಕೃತಿಯ ದಹನವನ್ನು ಮಾಡಿದರೆ ಬಿಸ್ರಾಖ್‌ನ ಹಳ್ಳಿಗರು ರಾವಣನ ಹಬ್ಬವನ್ನು ಆಚರಿಸಲಿದ್ದಾರೆ. ರಾವಣನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥನೆಗಳನ್ನು ಮಾಡಿ ಸರಳವಾಗಿ ಆಚರಿಸುತ್ತಾರೆ.

Published by:Ashwini Prabhu
First published: