ತೆಲಂಗಾಣ ಅತ್ಯಾಚಾರಿ ಆರೋಪಿಗಳ ಅಂತ್ಯಕ್ರಿಯೆಗೆ ಗ್ರಾಮಸ್ಥರಿಂದ ವಿರೋಧ

ಎನ್​ಕೌಂಟರ್​ಗೆ ಒಳಗಾದ ನಾಲ್ವರು ಆರೋಪಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ಅವರ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಏರ್ಪಡುಮಾಡಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ.

Seema.R | news18-kannada
Updated:December 6, 2019, 6:03 PM IST
ತೆಲಂಗಾಣ ಅತ್ಯಾಚಾರಿ ಆರೋಪಿಗಳ ಅಂತ್ಯಕ್ರಿಯೆಗೆ ಗ್ರಾಮಸ್ಥರಿಂದ ವಿರೋಧ
ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನವರ್​ ಅತ್ಯಾಚಾರ ಆರೋಪಿಗಳ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ ತೆಗೆದ ಚಿತ್ರ.
  • Share this:
ಹೈದ್ರಾಬಾದ್ (ಡಿ.06): ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ತಪ್ಪಿಸಿಕೊಂಡು ಹೋಗುವಾಗ ಎನ್​ಕೌಂಟರ್​ಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಸಾವನ್ನಪ್ಪಿದ ಈ ಆರೋಪಿಗಳ ಅಂತ್ಯಕ್ರಿಯೆ ಈಗ ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿದೆ.

ಎನ್​ಕೌಂಟರ್​ಗೆ ಒಳಗಾದ ನಾಲ್ವರು ಆರೋಪಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ಅವರ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಏರ್ಪಡುಮಾಡಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ.

ಈ ಹಿನ್ನೆಲೆ ಇಂದು ರಾತ್ರಿ ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆರೋಪಿ ಮೊಹಮ್ಮದ್​ ಆರೀಫ್​ ಅಂತ್ಯಕ್ರಿಯೆಯನ್ನು ಜಾಕ್ಲೆರ್​ ಗ್ರಾಮದಲ್ಲಿ ನೇರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇನ್ನು ಮೂರು ಆರೋಪಿಗಳಾದ ಜೋಲು ಶಿವ, ಜೋಲು ನರೇಶ್​, ಚೆನ್ನಕೇಶವಲು ಅಂತ್ಯಕ್ರಿಯೆಯನ್ನು ಗುಂಡಿಗಡ್ಲ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನು ಓದಿ: ಆತ್ಮರಕ್ಷಣೆಗಾಗಿ ಅತ್ಯಾಚಾರ ಆರೋಪಿಗಳ ಮೇಲೆ ಫೈರ್ ಮಾಡುವುದು ಅನಿವಾರ್ಯವಾಗಿತ್ತು; ವಿಶ್ವನಾಥ್ ಸಜ್ಜನರ್ ಸ್ಪಷ್ಟನೆ

ಇನ್ನು ಜಮೀನೊಂದರಲ್ಲಿ ಆರೀಫ್ ಬಿಟ್ಟು ಇನ್ನು ಮೂವರ​ ಅಂತ್ಯಕ್ರಿಯೆಗೆ ಸಜ್ಜು ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ವಿರೋಧಿಸಿದ್ದಾರೆ. ಇದು ದಾನದಿಂದ ಸಿಕ್ಕ ಭೂಮಿ ಇಲ್ಲಿ ಅಂತ್ಯಕ್ರಿಯೆ ನೇರವೇರಿಸುವಂತಿಲ್ಲ ಎಂದಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಜನರ ಆಕ್ರೋಶ ಇನ್ನು ನಿಲ್ಲದ ಆರೋಪಿಗಳ  ಮನೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ