Devil: ಶ್, ಬಾಗಿಲು ತೆರೆದರೆ ಬರುತ್ತಂತೆ ದೆವ್ವ! ಮಾಟಗಾತಿ ಮಾತು ಕೇಳಿ 2 ದಿನ ಮನೆಯೊಳಗೆ ಬಂಧಿಯಾದ ಗ್ರಾಮಸ್ಥರು!

ಈ ಗ್ರಾಮದಲ್ಲಿ ದೆವ್ವ-ಭೂತಗಳು ಸಂಚರಿಸುತ್ತಿವೆ ಅಂತ ಮಾಟಗಾತಿ ಹೇಳಿದ್ದಳಂತೆ. ಅದರ ಶಕ್ತಿ ತಡೆಯಲು ಧಾರ್ಮಿಕ ಕಾರ್ಯಕ್ರಮ ಮಾಡಿ, ದಿಗ್ಬಂಧನ ಹಾಕಿದ್ದಳಂತೆ. ಆಕೆಯ ಮಾತಿನಂತೆ ಗ್ರಾಮಸ್ಥರು 2 ದಿನ ಮನೆ ಬಾಗಿಲು ಹಾಕಿಕೊಂಡು, ಸ್ವಯಂ ಬಂಧಿಯಾಗಿದ್ದರು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಆಂಧ್ರಪ್ರದೇಶ: ಬಹುಶಃ ನಿಮಗೆಲ್ಲ ನೆನಪಿರಬಹುದು. ತುಂಬಾ ವರ್ಷಗಳ ಹಿಂದೆ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ (Village) ಮೂಢ ನಂಬಿಕೆಯೊಂದು (Superstitious belief) ಕುರಿತು ಇನ್ನಷ್ಟು ಮಾಹಿತಿದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಪ್ರತಿ ಮನೆಗೆ ದುಷ್ಟ ಶಕ್ತಿಗಳು (Negative Energy) ಬರುತ್ತವೆ, ಅದು ಮನೆಯವರಿಗೆ ತೊಂದರೆ ಕೊಡುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಮನೆ ಬಾಗಿಲಿಗೆ, ‘ಇಂದಲ್ಲ ನಾಳೆ ಬಾ’ ಅಂತ ಬರೆಯಬೇಕು ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಯಾರ ಮನೆ ಬಾಗಿಲು (Door) ನೋಡಿದ್ರೂ ಇಂದಲ್ಲ ನಾಳೆ ಬಾ ಅನ್ನೋ ಬರಹ ಕಾಣಿಸುತ್ತಿತ್ತು. ಇದೀಗ ಇಂಥದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ. ಮನೆ ಬಾಗಿಲು ತೆರೆದರೆ ದುಷ್ಟ ಶಕ್ತಿ ಅಥವಾ ದೆವ್ವ (Devil), ಭೂತಗಳು (Ghost) ಮನೆಯೊಳಗೆ ಬರುತ್ತಂತೆ. ಅದಕ್ಕಾಗಿ 2 ದಿನ ಗ್ರಾಮಸ್ಥರೆಲ್ಲ ಮನೆ ಬಾಗಿಲಿಗೆ ಬೀಗ (Lock) ಹಾಕಿ, ಮನೆಯೊಳಗೆ ಬಂಧಿಯಾಗಿದ್ದರು!

ಮನೆ ಬಾಗಿಲು ತೆರೆದರೆ ಒಳ ಬರುತ್ತವಂತೆ ದೆವ್ವಗಳು!

ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸರುಬುಜ್ಜಿಲಿ ಮಂಡಲ್ ಗ್ರಾಮದಲ್ಲಿ ಇಂಥದ್ದೊಂದು ಮೂಢನಂಬಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಈ ಗ್ರಾಮದಲ್ಲಿ ದೆವ್ವ, ಭೂತಗಳ ಸಂಚಾರ ಶುರುವಾಗಿದ್ದು, ಅವು ಮನೆಗೆ ಬಂದು ಜನರಿಗೆ ತೊಂದರೆ ಕೊಡುತ್ತವಂತೆ.

ಮನೆ ಬಾಗಿಲು ಲಾಕ್ ಮಾಡಿಕೊಂಡ ಗ್ರಾಮಸ್ಥರು

ಗ್ರಾಮಸ್ಥರು ದುಷ್ಟಶಕ್ತಿಗಳು ಗ್ರಾಮವನ್ನು ಸುತ್ತುವರೆದಿವೆ ಎಂದು ಉಲ್ಲೇಖಿಸಿ ಎರಡು ದಿನಗಳ ಕಾಲ ಬೀಗ ಹಾಕಿಕೊಂಡಿದ್ದಾರೆ. ಗ್ರಾಮದಲ್ಲಿ ಯಾರ ಮನೆಯೂ ಎರಡು ದಿನಗಳ ಕಾಲ ತೆರೆದೇ ಇಲ್ಲ. 2 ದಿನ ಗ್ರಾಮಸ್ಥರೆಲ್ಲ ಮನೆ ಸೇರಿಕೊಂಡು, ಬಾಗಿಲು ಹಾಕಿಕೊಂಡು, ಕದಲದೇ ಕುಳಿತಿದ್ದರಂತೆ.

ಇದನ್ನೂ ಓದಿ: OMG... ಇದಪ್ಪಾ ಅದೃಷ್ಟ ಅಂದ್ರೆ, ಆಕಸ್ಮಿಕವಾಗಿ ಲಾಟರಿ ಬಟನ್ ಒತ್ತಿ 75 ಕೋಟಿ ಗೆದ್ದ ಮಹಿಳೆ!

ಸರಣಿ ಸಾವಿನಿಂದ ಗ್ರಾಮದಲ್ಲಿ ಆತಂಕ

ಈ ಗ್ರಾಮದಲ್ಲಿ ಸರಣಿ ಸಾವಿನ ಬಳಿಕ ದುಷ್ಟ ಶಕ್ತಿಗಳು ಸಂಚರಿಸುತ್ತಿವೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. "ಹಿಂದೆ ನಮ್ಮ ಪೂರ್ವಜರು ಎಲ್ಲಾ ರೀತಿಯ ಧಾರ್ಮಿಕ  ಆಚರಣೆಗಳನ್ನು ಮಾಡುತ್ತಿದ್ದರು, ಕಳೆದ 20 ವರ್ಷಗಳಿಂದ ಎಲ್ಲವೂ ಸರಿಯಾಗಿತ್ತು. ಆದರೆ ಕಳೆದ ಮೂರು ತಿಂಗಳಲ್ಲಿ ಸುಮಾರು ಐದು ಜನರು ಏಕಾಏಕಿ ಸಾವನ್ನಪ್ಪಿದ್ದಾರೆ, ಗ್ರಾಮದ ಮುಖ್ಯಸ್ಥರೊಬ್ಬರು ಸಹ ಇದ್ದಕ್ಕಿದ್ದಂತೆ ನಿಧನರಾದರು, ಅವರ ಸಾವಿನ ನಂತರ ನಾವು ಭಯಭೀತರಾಗಿ ಹೋದೆವು ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.

ಗ್ರಾಮಸ್ಥರಿಗೆ ಸಲಹೆ ನೀಡಿದ ಮಾಟಗಾತಿ!

ಈ ಬಗ್ಗೆ ಗ್ರಾಮಸ್ಥರು ವಿಜಯನಗರ ಗ್ರಾಮದ ಮಾಟಗಾತಿಯ ಸಲಹೆ ಕೇಳಿದ್ದಾಗಿ ಹೇಳುತ್ತಾರೆ. ಮಾಟಗಾತಿ ಈ ಗ್ರಾಮವು ಸುರಕ್ಷಿತವಾಗಿಲ್ಲ ಎಂದು ಹೇಳಿದಳು ಮತ್ತು ಕೆಲವು ಆಚರಣೆಗಳನ್ನು ಮಾಡುವಂತೆ ಕೇಳಿಕೊಂಡಳು. ನಾವು ಆಚರಣೆಗಳನ್ನು ಮಾಡಲು ವ್ಯವಸ್ಥೆ ಮಾಡಿದ್ದೇವೆ ಮತ್ತು ಯಾರಿಗೂ ತೊಂದರೆಯಾಗದಂತೆ ಗ್ರಾಮಕ್ಕೆ ಬೀಗ ಹಾಕಿದ್ದೇವೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: Viral Video: ಕೊರಿಯರ್ ಬಾಯ್ ಆಗಿ ಬಂದ ಮಗ, ಪತ್ರ ಪಡೆದು ಮುತ್ತುಕೊಟ್ಟ ತಂದೆ! ಭಾವುಕ ಕ್ಷಣಗಳ ದೃಶ್ಯ ನೀವೂ ಕಣ್ತುಂಬಿಕೊಳ್ಳಿ

ಗ್ರಾಮಸ್ಥರಿಗೆ ಬುದ್ಧಿ ಹೇಳಿದ ಪೊಲೀಸರು

ಈ ವಿಚಾರ ತಿಳಿದು ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ಬಂದಿದ್ದಾರೆ. ಇವೆಲ್ಲ ಮೂಢ ನಂಬಿಕೆ ಅಂತ ತಿಳಿ ಹೇಳಿದ್ದಾರೆ. ಗ್ರಾಮದಲ್ಲಿ ಇಂತಹ ಚಟುವಟಿಕೆಗಳನ್ನು ನಿರ್ಬಂಧಿಸಿದ್ದು, ಗ್ರಾಮಕ್ಕೆ ಬೀಗ ಹಾಕದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ದೆವ್ವ ಭೂತಗಳೆಲ್ಲ ಈಗಿಲ್ಲ, ಇವೆಲ್ಲ ಮೂಢ ನಂಬಿಕೆ ಅಂತ ಹೇಳಿದ್ದಾರೆ. ಕೊರೋನಾ ಸಮಯದಲ್ಲಿ ಸರ್ಕಾರ ಹೇಳಿದರೆ ಮಾತ್ರ ಲಾಕ್ ಡೌನ್ ಮಾಡಿಕೊಳ್ಳಿ, ಅದರ ಹೊರತಾಗಿ ಇಂತಹ ಮೂಢನಂಬಿಕೆಯಿಂದ ಮನೆ ಬಾಗಿಲು ಹಾಕಿಕೊಳ್ಳದಂತೆ ಸಲಹೆ ನೀಡಿದ್ದಾರೆ.
Published by:Annappa Achari
First published: