WestBengal Assembly Eelection: ಆಟ ಶುರು ಅಲ್ಲ, ಅಭಿವೃದ್ಧಿ ಆರಂಭ; ದೀದಿಗೆ ಕುಟುಕಿದ ಪ್ರಧಾನಿ ಮೋದಿ

ಬ್ಯಾನರ್ಜಿ ಸರ್ಕಾರ ಭ್ರಷ್ಟಚಾರ ಮತ್ತು ಅಭಿವೃದ್ಧಿ ಹಿನ್ನಡೆ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದರು

Narendra Modi

Narendra Modi

 • Share this:
  ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ನಡೆಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ 10 ವರ್ಷಗಳಿಂದ ಆಟವಾಡಿದ್ದೀರಾ. ನಿಮ್ಮ ಆಟ ಮುಗಿಯಲಿದ್ದು ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ ಎಂದು ದೀದಿಯನ್ನು ಕುಟುಕಿದ್ದಾರೆ. ಮಾರ್ಚ್​ 27ರಿಂದ ಎಂಟು ಹಂತದ ಚುನಾವಣೆ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಲಿದೆ. ಈ ಹಿನ್ನಲೆ ಬಿರುಸಿನ ಪ್ರಚಾರ ನಡೆಸಿರುವ ಬಿಜೆಪಿ-ಟಿಎಂಸಿ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದ್ದಾರೆ. ಇಂದು ಇಲ್ಲಿನ ಪುರುಲಿಯಾದಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿಯಾದ ಪ್ರಧಾನಿ, ಬ್ಯಾನರ್ಜಿ ಸರ್ಕಾರ ಭ್ರಷ್ಟಚಾರ ಮತ್ತು ಅಭಿವೃದ್ಧಿ ಹಿನ್ನಡೆ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದರು.

  'ದೀದಿ ಆಟ ಶುರು ಎನ್ನುತ್ತಾರೆ. ಬಿಜೆಪಿ ಉದ್ಯೋಗ ಎನ್ನುತ್ತದೆ. ದೀದಿ ಆಟ ಶುರು ಎಂದರೆ ನಾವು ಶಿಕ್ಷಣ , ಅಭಿವೃದ್ಧಿ ಎನ್ನುತ್ತೇವೆ. ದೀದಿ ಆಟ ಶುರು ಎಂದರೆ ನಾವು ಜನರಿಗೆ ಮನೆಮ ಶುದ್ಧ ಕುಡಿಯುವ ನೀರು ಎನ್ನುತ್ತೇವೆ' ಎಂದರು.

  ಮಮತಾ ಬ್ಯಾನರ್ಜಿ ಮಾವೋವಾದಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಟಿಎಂಸಿ ಎಂದರೆ 'ಟ್ರಾನ್ಸ್​ಫರ್​ ಮೈ ಕಮಿಷನ್'​. ಕೇಂದ್ರ ಸರ್ಕಾರ ಬಂಗಾಳಕ್ಕೆ ನೇರ ಲಾಭ ವರ್ಗಾವಣೆ ಮಾಡುತ್ತಿದೆ. ಆದರೆ ಟಿಎಂಸಿ ಟ್ರಾನ್ಸ್​ಫರ್​ ಮೈ ಕಮಿಷನ್​ ಮೂಲಕ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

  ಇದನ್ನು ಓದಿ: ಶಿವಸೇನೆ, ಎಂಇಎಸ್ ವಿರುದ್ಧ ಕರವೇ ಪ್ರತಿಭಟನೆ: ಪ್ರವೀಣ್ ಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಪೊಲೀಸರ ವಶಕ್ಕೆ

  ಬುಡಕಟ್ಟು ಸಮುದಾಯವೇ ಹೆಚ್ಚಿರುವ ಪ್ರದೇಶದಲ್ಲಿ ಪ್ರಚಾರ ನಡೆಸಿರುವ ಪ್ರಧಾನಿ, ದೀದಿ ಬಡವರಿಗೆ ಮತ್ತು ಆದಿವಾಸಿಗಳಿಗೆ ಸಿಗಬೇಕಾದ ಸವತ್ತನ್ನು ಕಡಿತಗೊಳಿಸಿದ್ದಾರೆ. ಬಾಟ್ಲಾ ಹೌಸ್​ ಘಟನೆಯನ್ನು ನಕಲಿ ಎನ್​ಕೌಂಟರ್​ ಎಂದರು. ಅಲ್ಲದೇ, ಪುಲ್ವಾಮಾ ದಾಳಿಯ ಸಮಯವನ್ನು ಕೇಳಿದರು. ಇದೆಲ್ಲವನ್ನು ತಮ್ಮ ಓಲೈಕೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ. ಅವರ ಈ ಓಲೈಕೆ ರಾಜಕಾರಣದಿಂದಾಗಿ ಹಿಂದೂ ಸಮುದಾಯ ಒಬಿಸಿ ಸ್ಥಾನಮಾನದಿಂದ ವಂಚಿತರಾಗುತ್ತಿವೆ ಎಂದು ಆರೋಪಿಸಿದರು.

  ಇನ್ನು ಈ ಪುರುಲಿಯಾ ನೆಲ ಪ್ರವಿತ್ರ ಸ್ಥಳ ಸೀತೆ ಬಾಯಾರಿದಾಗ ರಾಮ ಬಾಣದಿಂದ ನೆಲಕ್ಕೆ ಬಡಿದು ನೀಡು ಪಡೆದರು ಎಂಬ ಮಾತಿದೆ. ಇಲ್ಲಿ ಸೀತಾಕುಂಡ ಇದೆ. ಆದರೆ, ಇಲ್ಲಿನ ಜನರಿಗೆ ಈಗ ನೀರಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರಿಗೆ ಕೃಷಿಗೆ ನೀರು ಸಿಗುತ್ತಿಲ್ಲ. ಮಹಿಳೆಯರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕಿದೆ. ಅಷ್ಟೇ ಅಲ್ಲದೇ ಇಲ್ಲಿ ಯಾವುದೇ ಉದ್ಯಮಕ್ಕೂ ಅವಕಾಶ ನೀಡಿಲ್ಲ ಎಂದು ದೂಷಿಸಿದರು.

  ಇನ್ನು ಇದೇ ವೇಳೆ ನಂದಿಗ್ರಾಮದಲ್ಲಿ ಪಿತೂರಿಯಿಂದಾಗಿ ಕಾಲು ಮುರಿದುಕೊಂಡಿರುವುದಾಗಿ ಆರೋಪಿಸಿರುವ ದೀದಿ ಆದಷ್ಟು ಶೀಘ್ರವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
  Published by:Seema R
  First published: