ತಿನ್ನಲೆಂದೇ ಗೂಗಲ್​ ಕೆಲಸ ತೊರೆದವಳಿಗೆ ತಿಂದುಣ್ಣುವುದೇ ಸಂಪಾದನೆಯ ಮಾರ್ಗ

ಹೊಸ ಹೊಸ ಜಾಗಗಳನ್ನು ಅನ್ವೇಷಿಸಿ ಅಲ್ಲಿನ ರುಚಿಕರ ಖಾದ್ಯಗಳನ್ನು ಸವಿಯುವುದಕ್ಕಾಗಿಯೇ ಗೂಗಲ್​ ಕಂಪನಿಯಲ್ಲಿ ಕೆಲಸ ಬಿಟ್ಟ ಈಕೆಗ​ ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾಳೆ

Seema.R | news18-kannada
Updated:August 17, 2019, 4:50 PM IST
ತಿನ್ನಲೆಂದೇ ಗೂಗಲ್​ ಕೆಲಸ ತೊರೆದವಳಿಗೆ ತಿಂದುಣ್ಣುವುದೇ ಸಂಪಾದನೆಯ ಮಾರ್ಗ
ಸೀಮಾ ಗುರ್ನಾನಿ
Seema.R | news18-kannada
Updated: August 17, 2019, 4:50 PM IST
ಕುಳಿತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂಬ ಮಾತಿದೆ. ಆದರೆ, ಈ ಹುಡುಗಿಗೆ ಕುಳಿತು ತಿಂದರೆ ಮಾತ್ರ ಲಕ್ಷ ಲಕ್ಷ ಸಂಪಾದನೆಯಾಗುತ್ತದೆ. ಅಚ್ಚರಿಯಾದರೂ ನಿಜ.

ವಿಜಯವಾಡದ ಸೀಮಾ ಗುರ್ನಾನಿ ತಿನ್ನುವುದರಿಂದಲೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಪಂಡಾರಿವ್ಯೂ ಎಂಬ ಬ್ಲಾಗ್​ ನಡೆಸುತ್ತಿರುವ ಈಕೆಯ ಕೆಲಸ ಹೊಸ ಹೊಸ ಜಾಗಗಳನ್ನು ಅನ್ವೇಷಿಸಿ ಅಲ್ಲಿನ ಖಾದ್ಯಗಳನ್ನು ಟೆಸ್ಟ್​ ಮಾಡಿ ಹೇಗಿದೆ ಎಂದು ಹೇಳುವುದೇ ದೊಡ್ಡ ಉದ್ಯೋಗ.ಗೂಗಲ್​ ಕಂಪನಿ ಉದ್ಯೋಗಿಯಾಗಿದ್ದ ಸೀಮಾ ಚಿಕ್ಕವಳಿದ್ದಾಗ ಅಣ್ಣನೊಟ್ಟಿಗೆ ಹೊಸ ಸ್ಥಳಗಳಿಗೆ ಹೋಗುತ್ತಿದ್ದಳಂತೆ. ದೊಡ್ಡವಳಾದ ಬಳಿಕವೂ ಇದೇ ಹವ್ಯಾಸವಾಗಿ ಹೋಯಿತು.  ಪ್ರವಾಸ ಮಾಡಿ ಹೊಸ ಹೊಸ ಜಾಗ ನೋಡುವುದು ಎಂದರೆ ನನಗೆ ಬಲು ಇಷ್ಟವಾಗಿ ಹೋಯಿತು. ಅದನ್ನು ಇನ್ನು ಕೂಡ ಮುಂದುವರೆಸುತ್ತಿದ್ದೇನೆ. ಇದೇ ಕಾರಣಕ್ಕಾಗಿ ಎರಡು ವರ್ಷದ ಹಿಂದೆ ಗೂಗಲ್​ ಕಂಪನಿಯ ಕೆಲಸವನ್ನು ತೊರೆದೆ. ನನ್ನದೇ ಬ್ಲಾಗ್​ ಶುರುಮಾಡಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ ಅಲ್ಲಿನ ಖ್ಯಾತ ಖಾದ್ಯಗಳ ರುಚಿ ಸವಿಯುತ್ತಿದ್ದೇನೆ ಎನ್ನುತ್ತಾರೆ ಸೀಮಾ.ನನ್ನ ಅಮ್ಮ ಬಲು ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಅದರ ರುಚಿ ಸವಿದು ವಿಮರ್ಶೆ ಮಾಡುವುದು ನನ್ನ ಕೆಲಸವಾಗಿತ್ತು. ಆಕೆಯ ಕೈ ಅಡುಗೆಯನ್ನು ಬ್ಲಾಗ್​ನಲ್ಲಿ ಹಾಕುತ್ತಿದ್ದೆ. ಬಳಿಕ  ನಮ್ಮ ರಾಜ್ಯ, ದೇಶ ಮತ್ತು ವಿದೇಶಗಳ ತಿನಿಸುಗಳ ವಿಮರ್ಶೆ ಕುರಿತು  ಬ್ಲಾಗ್​ನಲ್ಲಿ ಬರೆಯುತ್ತಿದೆ. ಅದೇ ನನಗೆ ಉದ್ಯೋಗ ಮಾರ್ಗವಾಗಿ ಹೋಯಿತು.


Loading...

ನನ್ನ ಬ್ಲಾಗ್​ನಲ್ಲಿನ ವಿಮರ್ಶೆಯಿಂದಾಗಿ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಜನರು ತಮ್ಮ ರೆಸ್ಟೋರೆಂಟ್​ ಪ್ರಾರಂಭಿಸಿ ಅದರ ವಿಮರ್ಶೆ ಹೇಳಲು ನನ್ನನ್ನು ಇ-ಮೇಲ್​ ಮೂಲಕ ಆಹ್ವಾನಿಸುತ್ತಾರೆ. ಅವರ ರೆಸ್ಟೋರೆಂಟ್​ಗೆ ಹೋಗಿ ಅಲ್ಲಿನ ವಿಶೇಷ ಖಾದ್ಯ ಸವಿಯುತ್ತೇನೆ.ಇನ್ನು ರೆಸ್ಟೋರೆಂಟ್​ಗಳು ಕರೆದರು ಎಂಬ ಮಾತ್ರಕ್ಕೆ ಆ ಖಾದ್ಯ ಹೇಗೆ ಇರಲಿ ಹೊಗಳಿ ಬರೆಯುವುದಿಲ್ಲ. ನನಗೆ ನಿಜಕ್ಕೂ ಇಷ್ಟ ಎನಿಸಿದರೆ ಮಾತ್ರ ಬರೆಯುತ್ತೇನೆ. ಇಲ್ಲವಾದರೆ ಇಲ್ಲ ಎನ್ನುತ್ತಾರೆ.

First published:August 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...