ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕಾರ

ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕಾರ


Updated:December 27, 2017, 8:17 PM IST
ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕಾರ
ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕಾರ

Updated: December 27, 2017, 8:17 PM IST
ಗಾಂಧಿನಗರ(ಡಿ.26): ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅಧಿಕಾರ ಸ್ವೀಕರಿಸಿದ್ದಾರೆ.  ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಗವರ್ನರ್ ಓಂ ಪ್ರಕಾಶ್ ಕೊಹ್ಲಿ ಪ್ರಮಾಣ ವಚನ ಭೋದಿಸಿದರು.

ಗಾಂಧಿನಗರದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ, ಎಲ್.ಕೆ. ಅಡ್ವಾಣಿ, ಅಮಿತ್ ಶಾ, ನಿತಿನ್ ಗಡ್ಕರಿ, ನಿತೀಶ್ ಕುಮಾರ್, ಬಿಜೆಪಿ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಹುತೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.

ರೂಪಾನಿ 2ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಆನಂದಿ ಬೆನ್ ಪಟೇಲ್ ಅವರನ್ನ ಕೆಳಗಿಳಿಸಿ ರೂಪಾನಿ ಅವರನ್ನ ಸಿಎಂ ಪಟ್ಟ ಕಟ್ಟಲಾಗಿತ್ತು. ಇದೀಗ, 2ನೇ ಬಾರಿಗೆ ರೂಪಾನಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

6 ಮಂದಿ ಸಚಿವರು ಸೇರಿ ಹತ್ತರತ್ತಿರ 2 ಡಜನ್`ನಷ್ಟು ಶಾಸಕರು ಚುನಾವಣೆಯಲ್ಲಿ ಮರು ಆಯ್ಕೆಯಾಗಿಲ್ಲ. ಪ್ರಾದೇಶಿಕ ಮತ್ತು ಜಾತಿಯವಾರು ಸಮತೋಲನ ಕಾಯ್ದುಕೊಂಡು ಹೊಸ ತಂಡ ಕಟ್ಟುವುದು ವಿಜಯ್ ರೂಪಾನಿ ಮುಂದಿರುವ ದೊಡ್ಡ ಸವಾಲು.
First published:December 26, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...