ಜೆಟ್​ ಏರ್​ವೇಸ್​ ಸೇವೆ ಸ್ಥಗಿತ; ಸರಣಿ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿ ಸರ್ಕಾರದ ನೀತಿಗೆ ಚಾಟಿ ಬೀಸಿದ ವಿಜಯ ಮಲ್ಯ

ಒಂದು ಕಾಲದಲ್ಲಿ ಕಿಂಗ್ ಫಿಷರ್​ಗೆ ಜೆಟ್ ಏರ್ವೇಸ್ ಪ್ರಮುಖ ಪ್ರತಿಸ್ಪರ್ಧಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಉಳಿಸಿಕೊಳ್ಳುವ ಬರದಲ್ಲಿ ಸಾರ್ವಜನಿಕ ನಿಧಿಯಲ್ಲಿ 35 ಸಾವಿರ ಕೋಟಿ ಜಾಮೀನು ಮಾಡಿದ ಕಾರಣ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ನುಭವಿಸಬೇಕಾಯಿತು ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ವಿಜಯ್​ ಮಲ್ಯ ಟೀಕಿಸಿದ್ದಾರೆ.

MAshok Kumar
Updated:April 17, 2019, 10:45 AM IST
ಜೆಟ್​ ಏರ್​ವೇಸ್​ ಸೇವೆ ಸ್ಥಗಿತ; ಸರಣಿ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿ ಸರ್ಕಾರದ ನೀತಿಗೆ ಚಾಟಿ ಬೀಸಿದ ವಿಜಯ ಮಲ್ಯ
ವಿಜಯ್​ ಮಲ್ಯ
MAshok Kumar
Updated: April 17, 2019, 10:45 AM IST
ನವದೆಹಲಿ (ಏ.17): ಭಾರತ ಸರ್ಕಾರ ಸಾರ್ವಜನಿಕ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಗಳ ನಡುವೆ ತಾರತಮ್ಯ ಮಾಡುತ್ತಿದ್ದು ಇದೆ ಕಾರಣಕ್ಕೆ ಖಾಸಗಿ ಸಂಸ್ಥೆಗಳು ದಿವಾಳಿಯಾಗುತ್ತಿವೆ ಎಂದು ಮಧ್ಯದ ದೊರೆ ವಿಜಯ ಮಲ್ಯ ಮತ್ತೊಮ್ಮೆ ಆಪಾದಿಸಿದ್ದಾರೆ.

ಭಾರತದ ಮತ್ತೊಂದು ಬೃಹತ್ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ವೇಸ್ 8 ಸಾವಿರ ಕೋಟಿ ಸಾಲದ ಹೊರೆಯಲ್ಲಿದ್ದು, ಮಂಗಳವಾರ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈ ಕುರಿತು ಸರಣಿ ಟ್ವೀಟ್ ಮಾಡಿ ವಿಜಯ ಮಲ್ಯ ವಿಷಾಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಾಕಿ ಸಂಬಳ ಕೊಡದಿದ್ದರೆ ಏಪ್ರಿಲ್ 1ರಿಂದ ವಿಮಾನ ಹಾರಾಟ ಬಂದ್; ಜೆಟ್ ಏರ್​ವೇಸ್ ಪೈಲಟ್​ಗಳ ಎಚ್ಚರಿಕೆ

“ಒಂದು ಕಾಲದಲ್ಲಿ ಕಿಂಗ್ ಫಿಷರ್​ಗೆ ಜೆಟ್ ಏರ್ವೇಸ್ ಪ್ರಮುಖ ಪ್ರತಿಸ್ಪರ್ಧಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಉಳಿಸಿಕೊಳ್ಳುವ ಬರದಲ್ಲಿ ಸಾರ್ವಜನಿಕ ನಿಧಿಯಲ್ಲಿ 35 ಸಾವಿರ ಕೋಟಿ ಜಾಮೀನು ಮಾಡಿದ ಕಾರಣ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ನುಭವಿಸಬೇಕಾಯಿತು” ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ಮಲ್ಯ ಟೀಕಿಸಿದ್ದಾರೆ.

“ನರೇಶ್ ಗೋಯಲ್ ಹಾಗೂ ಅವರ ತಂಗಿ ನೀತಾ ಗೋಯಲ್ ಅತ್ಯಂತ ಶ್ರಮವಹಿಸಿ ಜೆಟ್ ಏರ್ವೇಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಅವರ ಪರಿಶ್ರಮವನ್ನು ನೆನೆದರೆ ಅತ್ಯಂತ ಹೆಮ್ಮೆ ಎನಿಸುತ್ತದೆ. ಈ ಸಂಸ್ಥೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿತ್ತು. ಆದರೆ ಪ್ರಸ್ತುತ ಈ ಸಂಸ್ಥೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿರುವ ಮಲ್ಯ, ಭಾರತದಲ್ಲಿ ಯಾವ ಕಾರಣಕ್ಕಾಗಿ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ?” ಎಂದು ಗಂಭೀರ ಪ್ರಶ್ನೆ ಮಾಡಿದ್ದಾರೆ.

ಟ್ವೀಟ್​ನಲ್ಲಿ ತಮ್ಮ ಮೇಲಿನ ಆರೋಪದ ಕುರಿತು ಸ್ಪಷ್ಟಣೆ ನೀಡಿರುವ ಮಲ್ಯ, “ಸಾಲವಾಗಿ ಪಡೆದಿರುವ ಹಣದ ಶೇ.100 ರಷ್ಟು ಹಿಂದಿರುಗಿಸುತ್ತೇನೆ ಎಂದು ನಾನು ಪ್ರತಿಬಾರಿಯು ಹೇಳುತ್ತಿದ್ದೇನೆ. ನಾನು ಲಂಡನ್​ನಲ್ಲಿರಲಿ ಅಥವಾ ಭಾರತದ ಜೈಲಿನಲ್ಲಿರಲಿ ಬ್ಯಾಂಕಿಗೆ ಪಾವತಿಸಬೇಕಾದ ಹಣವನ್ನು ಖಂಡಿತ ಪಾವತಿಸುತ್ತೇನೆ. ಈಗಾಗಲೇ ಹಣ ಪಾವತಿಸಲು ನಾನು ಸಿದ್ದನಿದ್ದೇನೆ. ಆದರೆ, ಅದನ್ನು ಪಡೆಯಲು ಯಾವ ಬ್ಯಾಂಕ್ ಅಧಿಕಾರಿಯೂ ಮುಂದೆ ಬರುತ್ತಿಲ್ಲ. ಆದರೆ ಇದನ್ನು ಹೇಳದ ಮಾದ್ಯಮಗಳು ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿವೆ ಅಲ್ಲದೆ ಕೇಂದ್ರ ಸರ್ಕಾರ ಚುನಾವಣೆಯಲ್ಲಿ ಹೆಚ್ಚು ಮತಗಳಿಸಲು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದೆ ” ಎಂದು ಗುರುತರ ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ : 4 ತಿಂಗಳು ಕಳೆದರೂ ಸಂಬಳ ನೀಡದ ಜೆಟ್​ ಏರ್​ವೇಸ್; ಪ್ರತಿಭಟನೆ ಕೂರುವುದಾಗಿ ಎಚ್ಚರಿಕೆ ನೀಡಿದ ಪೈಲಟ್​ಗಳು

ಭಾರತದ ನಾನಾ ಬ್ಯಾಂಕ್​ಗಳಿಂದ ಸುಮಾರು 9 ಸಾವಿರ ಕೋಟಿ ಸಾಲ ಮಾಡಿದ್ದ ಉದ್ಯಮಿ ವಿಜಯ ಮಲ್ಯ ಎರಡು ವರ್ಷಗಳ ಹಿಂದೆ ದೇಶ ತೊರೆದು ಲಂಡನ್​ಗೆ ಪಲಾಯನ ಮಾಡಿದ್ದರು. ಇವರನ್ನು ಭಾರತಕ್ಕೆ ವಾಪಾಸ್ ಕರೆತರಲು ಕೇಂದ್ರ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸುತ್ತಿದೆ.
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626