ವಿಜಯ್ ಮಲ್ಯ ದಿವಾಳಿಯೆಂದು ಘೋಷಿಸಿದ ಲಂಡನ್ ಹೈಕೋರ್ಟ್: ನಿಟ್ಟುಸಿರು ಬಿಟ್ಟ ಭಾರತೀಯ ಬ್ಯಾಂಕ್​ಗಳು

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಜೂನ್​ 5 ರಂದು ಅವಕಾಶ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮದ್ಯದ ದೊರೆಗೆ ಲಂಡನ್​ ಕೋರ್ಟ್​ ಮತ್ತೊಂದು ಶಾಕ್​ ನೀಡಿದೆ.

ವಿಜಯ್​ ಮಲ್ಯ

ವಿಜಯ್​ ಮಲ್ಯ

  • Share this:
    ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಹೈಕೋರ್ಟ್ ಸೋಮವಾರ ದಿವಾಳಿಯೆಂದು ಘೋಷಿಸಿತು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ಮಲ್ಯ ಅವರ ಈಗ ಕಾರ್ಯನಿರ್ವಹಿಸದೆ ನಿಂತು ಹೋಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದವು, ಈ ಸಾಲವನ್ನು ವಸೂಲಿ ಮಾಡುವುದೇ ಇವುಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.  ಈ ತೀರ್ಪಿನಿಂದಾಗಿ ಸಾಲ ವಸೂಲಿ ಮಾಡುವ ಕೇಸನ್ನು ಬ್ಯಾಂಕ್​ಗಳ ಒಕ್ಕೂಟ ಗೆದ್ದಂತಾಗಿದೆ.

    ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದಾರೆ, ಆದರೆ ಇದಕ್ಕೆ ಅನುಮತಿ ನಿರಾಕರಿಸಲಾಗಿದೆ.

    ಮೇನಲ್ಲಿ ಆನ್​ಲೈನ್​ ಮೂಲಕ ವಿಚಾರಣೆ ನಡೆಸಲಾಗಿತ್ತು, ಬ್ಯಾಂಕುಗಳು ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡುವ ಕಾನೂನನ್ನು ಲಂಡನ್ ಹೈಕೋರ್ಟ್ ಎತ್ತಿಹಿಡಿದಿತ್ತು, ಭಾರತದಲ್ಲಿ ಇರುವ  ಆಸ್ತಿಗಳ ಮೇಲೆ ತಮ್ಮ ಆಸ್ತಿಗೆ ಭದ್ರತೆಯನ್ನು ನೀಡಬೇಕು ಎಂದು ವಿಜಯ್​ ಮಲ್ಯ ಅವರು ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿಯು 2018 ರಲ್ಲಿ ಸಲ್ಲಿಸಿತ್ತು.

    65 ವರ್ಷದ ಉದ್ಯಮಿ ತಪ್ಪೇ ಮಾಡಿಲ್ಲ ಎಂದು ಸುಮ್ಮನೆ ಕಾಲಹರಣ ಮಾಡಿ ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬ್ಯಾಂಕುಗಳು ಆರೋಪಿಸಿದ್ದವು ಮತ್ತು ವಿಜಯ್​ ಮಲ್ಯ ಅವರ ದಿವಾಳಿತನದ ಅರ್ಜಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರಬೇಕು ಎಂದು ಬ್ಯಾಂಕ್​ಗಳ ಒಕ್ಕೂಟವು ಒತ್ತಾಯಿಸಿತ್ತು.

    ಎಸ್‌ಬಿಐ ನೇತೃತ್ವದ 13 ಭಾರತೀಯ ಬ್ಯಾಂಕುಗಳ ಒಕ್ಕೂಟ, ಇದರಲ್ಲಿ ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಸಿಒ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಷಿಯಲ್ ಅಸೆಟ್ ರೀಕನ್​ಸ್ಟ್ರಕ್ಷನ್​ ಕೋ ಪ್ರೈವೇಟ್ ಲಿಮಿಟೆಡ್ ಇವುಗಳೇ ವಿಜಯ್​ ಅವರಿಗೆ ಸಾಲ ನೀಡಿರುವ ಬ್ಯಾಂಕ್​ಗಳಾಗಿವೆ, ಈ ತೀರ್ಪಿನ ಅನ್ವಯ ಒಟ್ಟು ವಿಜಯ್​ ಮಲ್ಯ,  1 ಬಿಲಿಯನ್​ ಯುಕೆ ಪೌಂಡ್​ಗಳಿಗಿಂತಲೂ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.

    ಈ ಸಾಲವು ಅಸಲಿನ ಜೊತೆಗೆ ಬಡ್ಡಿಯನ್ನು ಒಳಗೊಂಡಿದೆ,  25 ಜೂನ್, 2013 ರಿಂದ ವಾರ್ಷಿಕ ಶೇಕಡಾ 11.5 ರ ದರದಲ್ಲಿ compound interest ಸಹ  ಇದಕ್ಕೆ ಸೇರಿಸಿ ಲೆಕ್ಕ ಹಾಕಲಾಗಿದೆ.

    14 ವಿವಿಧ ಬ್ಯಾಂಕ್‌ಗಳಿಗೆ ವಿಜಯ್‌ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. 2020ರ ಮೇ 14ರಂದು ಲಂಡನ್‌ ಸುಪ್ರೀಂ ಕೋರ್ಟ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

    ಇದನ್ನೂ ಓದಿ: ರಿಲಯನ್ಸ್ ಫೌಂಡೇಷನ್‌ನಿಂದ ಉದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರಿಗೆ 10 ಲಕ್ಷ ಡೋಸ್ ಲಸಿಕೆ

    ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಜೂನ್​ 5 ರಂದು ಅವಕಾಶ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮದ್ಯದ ದೊರೆಗೆ ಲಂಡನ್​ ಕೋರ್ಟ್​ ಮತ್ತೊಂದು ಶಾಕ್​ ನೀಡಿದೆ.



    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: