ಆನ್​ಲೈನ್ ಕ್ಲಾಸ್ನಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿ!

ಉಪನ್ಯಾಸಕರು ತರಾಟೆ ತೆಗೆದುಕೊಂಡ ಮೇಲೆ ಆ ವಿದ್ಯಾರ್ಥಿಗೆ ತನ್ನ ತಪ್ಪಿನ ಅರಿವಾಗಿ, ತನ್ನ ಬಟ್ಟೆ ಹಾಕಿಕೊಂಡು ತದ ನಂತರ ವಿಡಿಯೋ ಮೂಡ್​ ಆಫ್​ ಮಾಡಿದ್ದಾನೆ.

ಆನ್​ಲೈನ್​ ತರಗತಿ ನಡೆಯುವಾಗ ಸೆಕ್ಸ್​ ಮಾಡುತ್ತಿರುವ ದೃಶ್ಯ

ಆನ್​ಲೈನ್​ ತರಗತಿ ನಡೆಯುವಾಗ ಸೆಕ್ಸ್​ ಮಾಡುತ್ತಿರುವ ದೃಶ್ಯ

 • Share this:
  ಹೋ ಚಿ ಮಿನ್ (ವಿಯೆಟ್ನಾಂ):  ಕೊರೋನಾ ಕಾರಣದಿಂದ ಏನು ಬದಲಾವಣೆ ಆಗಿದೆಯೋ ಗೊತ್ತಿಲ್ಲ ಆದರೆ ಶಿಕ್ಷಣ ಮಾತ್ರ ಅಂಗೈಗೆ ಬಂದು ಕುಳಿತಿದೆ. ತರಗತಿಗಳಲ್ಲಿ ಚೇಷ್ಟೆ ಮಾಡಿ ಸುದ್ದಿಯಾಗುತ್ತಿದ್ದ ವಿದ್ಯಾರ್ಥಿಗಳು ಈಗ ಆನ್​ಲೈನ್​ ತರಗತಿಗಳಲ್ಲೂ ಚೇಷ್ಟೆಗಳನ್ನು ಶುರು ಮಾಡಿದ್ದಾರೆ. ಇಲ್ಲೊಬ್ಬ ಭೂಪ ಆನ್​ಲೈನ್​ ತರಗತಿ ನಡೆಯುವಾಗಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ವಿಯೆಟ್ನಾಂ ದೇಶದ ಹೋ ಚಿ ಮಿನ್ ನಗರದಲ್ಲಿ ನಡೆದಿದೆ.

  ಆನ್​ಲೈನ್​ ತರಗತಿ ನಡೆಯುವಾಗ ವಿಡಿಯೋ ಮೂಡ್​ ಅನ್ನು ಆಫ್​ ಮಾಡಲು ಮರೆತಿದ್ದ ಭೂಪ ತನ್ನ ಸಂಗಾತಿಯ ಜೊತೆ ಮೈ ಮರೆತಿದ್ದಾನೆ. ವಿದ್ಯಾರ್ಥಿಯ ಈ ವರ್ತನೆ   ಉಪನ್ಯಾಸಕರು ಹಾಗೂ ಸಹಪಾಠಿಗಳ ಗಮನಕ್ಕೆ ತಕ್ಷಣ ಬಂದಿಲ್ಲ ಆದರೆ ಇವನು ತನ್ನ ಸಂಗಾತಿಯ ಜೊತೆ ಇದ್ದ ವಿಡಿಯೋವನ್ನು ಕಳೆದ ವಾರ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿ ಬಾರಿ ಸುದ್ದಿ ಮಾಡಿದೆ.

  ಈ ವಿಚಾರ ಉಪನ್ಯಾಸಕನಿಗೆ ಗೊತ್ತಾದ ಕೂಡಲೇ ಆಘಾತಕ್ಕೆ ಒಳಗಾಗಿ  ಆ ವಿದ್ಯಾರ್ಥಿ  ಕಿಂಚಿತ್ತಾದರೂ ನಾನೆಲ್ಲಿದ್ದೇನೆ ಎನ್ನುವ ಜ್ಣಾನವಿದೆಯೇ, ನೇರವಾಗಿ ನಡೆಯುವ ಕ್ಲಾಸ್​ ನಡೆಯುವಾಗಲೂ ಇದೇ ತರ ಮಾಡ್ತಿಯಾ, ಮತ್ತೆ ಈಗ ಆನ್​ಲೈನ್​ ಕ್ಲಾಸ್​ ನಡೆಯುವಾಗ ಈ ರೀತಿ ಅಸಭ್ಯವಾಗಿ ವರ್ತಿಸುವುದು ಸರಿಯೇ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

  ಉಪನ್ಯಾಸಕರು ತರಾಟೆ ತೆಗೆದುಕೊಂಡ ಮೇಲೆ ಆ ವಿದ್ಯಾರ್ಥಿಗೆ ತನ್ನ ತಪ್ಪಿನ ಅರಿವಾಗಿ, ತನ್ನ ಬಟ್ಟೆ ಹಾಕಿಕೊಂಡು ತದ ನಂತರ ವಿಡಿಯೋ ಮೂಡ್​ ಆಫ್​ ಮಾಡಿದ್ದಾನೆ.

  ವಿಯೆಟ್ನಾಂ ದಿನ ಪತ್ರಿಕೆ ಲಾ ಡೊಂಗ್​ ವರದಿ ಮಾಡಿರುವ ಪ್ರಕಾರ ಈ ವಿದ್ಯಾರ್ಥಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತದ ಸಲುವಾಗಿ ಉಪನ್ಯಾಸಕರಿಗೆ ಹಾಗೂ ತನ್ನ ಸಹಪಾಠಿಗಳಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದಾನೆ.

  ಈ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಅಲ್ಲಿನ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್​ ಕೂಡ ಒಂದು ಸಾರ್ವಜನಿಕ ವೇದಿಕೆ ಎನ್ನುವುದನ್ನು ಮರೆಯಬಾದರು. ಇನ್ನು ಮುಂದಾದರೂ ಸರಿಯಾಗಿ ವರ್ತಿಸುವುದನ್ನು ಕಲಿಯಿರಿ ಅಲ್ಲದೇ  ಈ ವಿಡಿಯೋ ಹೆಚ್ಚು ವೈರಲ್​ ಆಗದಂತೆ ನಮ್ಮ ದೇಶದ ಜನರು ಎಚ್ಚರವಹಿಸಬೇಕು, ತಡೆಯಿಡಿಯಬೇಕು ಎಂದು ಮನವಿಯನ್ನು ಸಹ ಮಾಡಿದೆ.

  ಇದನ್ನೂ ಓದಿ: ಹೆಬ್ಬೆರಳೇ ಇಲ್ಲದ ವಿಶೇಷಚೇತನ ವ್ಯಕ್ತಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಹೇಗೆ? ಮಾಸಾಶನಕ್ಕಾಗಿ ಅಂಗವಿಕಲನ ಅಲೆದಾಟ!

  ಫೆಬ್ರುವರಿ ತಿಂಗಳಿನಲ್ಲಿ ಶ್ವೇತಾ ಎನ್ನುವ ಹುಡುಗಿಯ ಆಡಿಯೋ ಭಾರೀ ವೈರಲ್​​ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಆನ್​​ಲೈನ್​ ಕ್ಲಾಸ್​​ ನಡೆಯುವಾಗ ತನ್ನ ಹುಡುಗನ ರಹಸ್ಯಗಳ ಬಗ್ಗೆ  ಮಾತನಾಡಿದ್ದ ಶ್ವೇತಾ ಮೈಕ್​ ಆಫ್​ ಮಾಡುವುದನ್ನು ಮರೆತ್ತಿದ್ದಳು. ಅವಳ ಸಹಪಾಠಿಗಳು ಪದೇ, ಪದೇ ಶ್ವೇತಾ ನಿನ್ನ ಮೈಕ್​ ಆಫ್​ ಮಾಡು ಎಂದು ಕೊಟ್ಟ ಎಚ್ಚರಿಕೆಯನ್ನೂ ಕಿವಿಗೆ ಹಾಕಿಕೊಳ್ಳದೆ  ಮುಗುಗರಕ್ಕೆ ಒಳಗಾಗಿದ್ದಳು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: