ಬಿಜೆಪಿ ಸೇರಿದ ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ!

ವಿದ್ಯಾರಾಣಿ ವೃತ್ತಿಯಲ್ಲಿ ವಕೀಲೆ. ಅಷ್ಟೇ ಅಲ್ಲ, ಸಾಕಷ್ಟು ಹೋರಾಟದಲ್ಲೂ ಇವರು ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹೀಗಾಗಿ, ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ವೀರಪ್ಪನ್​ ಮಗಳು

ವೀರಪ್ಪನ್​ ಮಗಳು

 • Share this:
  ಕೃಷ್ಣಗಿರಿ (ಫೆ. 23): ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಪೊಲೀಸರಿಗೆ ದುಃಸ್ವಪ್ನವಾಗಿ ವೀರಪ್ಪನ್​ ಕಾಡಿದ್ದ. ಈಗ ಈತನ ಮಗಳು ಬಿಜೆಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಕೃಷ್ಣಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್​ ರಾವ್​ ನೇತೃತ್ವದಲ್ಲಿ  ವಿದ್ಯಾರಾಣಿ ನಿನ್ನೆ ಕಮಲ ಪಕ್ಷ ಸೇರಿದ್ದಾರೆ.

  ವಿದ್ಯಾರಾಣಿ ವೃತ್ತಿಯಲ್ಲಿ ವಕೀಲೆ. ಅಷ್ಟೇ ಅಲ್ಲ, ಸಾಕಷ್ಟು ಹೋರಾಟದಲ್ಲೂ ಇವರು ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹೀಗಾಗಿ, ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

  ಈ ಬಗ್ಗೆ ಮಾತನಾಡಿರುವ ವಿದ್ಯಾರಾಣಿ, “ನಾನು ನರೇಂದ್ರ ಮೋದಿ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದೆ. ಕೇಂದ್ರ ಸಚಿವ ಪೊನ್​ ರಾಧಾಕೃಷ್ಣ ಅವರನ್ನು ನನ್ನನ್ನು ಭೇಟಿ ಮಾಡಿದಾಗ, ಬಿಜೆಪಿ ಸೇರಿ ಜನರ ಸೇವೆ ಮಾಡುವಂತೆ ಹುರಿದುಂಬಿಸಿದ್ದರು. ಈಗ ನಾನು ಬಿಜೆಪಿ ಸೇರುವ ಮೂಲಕ ಜನರ ಸೇವೆ ಮಾಡುತ್ತೇನೆ,” ಎಂದು ಹೇಳಿದರು.

  ಇದನ್ನೂ ಓದಿ: ಪಾಕ್​​​​​​ ಪರ ಘೋಷಣೆ ಆರೋಪ: ಅರುದ್ರಾಗೆ 14 ದಿನ ನ್ಯಾಯಾಂಗ ಬಂಧನ

  ಕಾಡುಗಳ್ಳ ವೀರಪ್ಪನ್​ ಸಾಕಷ್ಟು ದೂರುಗಳು ದಾಖಲಾಗಿದ್ದವು. ಶ್ರೀಗಂಧ ಕಳ್ಳ ಸಾಗಣೆ, ಪ್ರಭಾವಿ ಜನರ ಅಪಹರಣ ಸೇರಿ ಸಾಕಷ್ಟು ಪ್ರಕರಣಗಳಲ್ಲಿ ಈತ ಬೇಕಾಗಿದ್ದ. 2004ರಲ್ಲಿ ಪೊಲೀಸರು ಈತನನ್ನು ಹತ್ಯೆ ಮಾಡಿದ್ದರು.
  First published: