ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ತನ್ವೀರ್ ಹಶ್ಮಿ ಅವರನ್ನು ಭಾನುವಾರ ಕ್ರೈಂ ಬ್ರಾಂಚ್ ತನಿಖೆಗೆ ಒಳಪಡಿಸಿತು. ಆ ನಂತರ ಅವರು ಹೀಗೆ ಹೇಳಿರುವುದಾಗಿ ವರದಿಯಾಗಿದೆ. ಈ ವೀಡಿಯೊಗಳನ್ನು ಅಶ್ಲೀಲ ಎಂದು ಕರೆಯಲಾಗುವುದಿಲ್ಲ ಮತ್ತು ರಾಜ್ಕುಂದ್ರಾ ಅವರನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದಿದ್ದಾರೆ.
ಜಾಮೀನಿನ ಮೇಲೆ ಹೊರಬಂದ ನಂತರ ಹಶ್ಮಿ ಮಾಧ್ಯಮಗಳ ಎದುರು ಮಾತನಾಡಿದರು. ಈ ಪ್ರಕರಣದಲ್ಲಿ ನಟ ಗೆಹಾನಾ ವಶಿಷ್ಟ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಕಳಿಸಲಾಗಿತ್ತು ಆದರೆ ವಿಚಾರಣೆಗೆ ಹಾಜರಾಗಿಲ್ಲ.
ಜುಲೈ 20 ರಂದು ಮುಂಬೈ ಪೊಲೀಸರು ಅಶ್ಲೀಲ ಚಿತ್ರಗಳ ದಂಧೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಬಿಲಿಯನೇರ್ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಕುಂದ್ರಾ ಅವರ ಸಂಬಂಧಿಯ ಒಡೆತನದ ಹಾಟ್ಶಾಟ್ಸ್ ಆ್ಯಪ್ಅನ್ನು ರಾಜ್ ಕುಂದ್ರಾ ಅವರ ನಿರ್ಮಾಣದ ಚಿತ್ರಗಳನ್ನು ಬಿತ್ತರಿಸಲು ಬಳಸಲಾಗುತ್ತಿತ್ತು, ಕುಂದ್ರಾ ಅವರನ್ನು ಜುಲೈ 23 ರವರೆಗೆ ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು, ಈ ದಿನಾಂಕವನ್ನು ಈಗ ಜುಲೈ 27 ಕ್ಕೆ ವಿಸ್ತರಿಸಲಾಗಿದೆ.
ಸುಮಾರು 5 ಗಂಟೆಗಳ ಕಾಲ ಹಶ್ಮಿ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪ್ರಶ್ನಿಸಿತು. ವಿಚಾರಣೆ ವೇಳೆ ಮಾತನಾಡಿದ ಹಶ್ಮಿ ’’ನಾನು ಎಡಿಟ್ ಮಾಡುತ್ತಿದ್ದ ಚಿತ್ರಗಳನ್ನು ಅಶ್ಲೀಲ ಚಿತ್ರಗಳು ಎಂದು ಕರೆಯಲು ಆಗುವುದಿಲ್ಲ, ಅದರಲ್ಲಿ ಆ ರೀತಿಯ ಯಾವುದೇ ಅಂಶಗಳು ಇಲ್ಲ, ಜೊತೆಗೆ ನಾನು ಇದುವರೆಗೂ ಕೂಡ ಕುಂದ್ರಾ ಅವರನ್ನು ಭೇಟಿ ಮಾಡಿಲ್ಲ’’ ಎಂದು ಹೇಳಿದರು.
ವರದಿಗಳ ಪ್ರಕಾರ, ಫೆಬ್ರವರಿ 3 ರಂದು ಮದ್ ದ್ವೀಪದ ಅವರ ಬಂಗಲೆಯಲ್ಲಿ ದಾಳಿ ನಡೆಸಿದಾಗ ಹಶ್ಮಿ ಅಶ್ಲೀಲ ಚಲನಚಿತ್ರಗಳನ್ನು ನಿರ್ದೇಶಿಸುತ್ತಿರುವುದು ಕಂಡುಬಂದಿತ್ತು.
ಆದರೆ, ನಟ ಗೆಹಾನಾ ವಶಿಷ್ಠ ಮತ್ತು ಇತರ ಇಬ್ಬರು ವ್ಯಕ್ತಿಗಳು ಭಾನುವಾರ ವಿಚಾರಣೆಗೆ ಹಾಜರಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಂದ್ರಾ ಅವರ ಬಂಧನದ ನಂತರ, ಕುಂದ್ರಾ ಅವರ ಅಪ್ಲಿಕೇಶನ್‌ಗಾಗಿ ನಿರ್ಮಿಸಲಾದ ಮೂರು ಚಿತ್ರಗಳಲ್ಲಿ ವಸಿಷ್ಠ ಕೆಲಸ ಮಾಡಿದ್ದಾರೆ, ಈ ವೀಡಿಯೊದಲ್ಲಿ ಕಾಮಪ್ರಚೋದಕ ವಿಷಯವಾಗಲಿ ಇಲ್ಲ ಅಶ್ಲೀಲ ಚಿತ್ರಗಳಿಗಿಂತ ಇದು ಭಿನ್ನವಾಗಿದೆ ಎಂದು ಹೇಳಿದ್ದರು.
ಮುಂಬೈ ಅಪರಾಧ ವಿಭಾಗವು ಈ ಪ್ರಕರಣವನ್ನು ವಹಿಸಿಕೊಳ್ಳುವ ಮೊದಲು, ಅಶ್ಲೀಲ ಚಿತ್ರಗಳ ದಂಧೆಯ ಬಗ್ಗೆ ಮಹಾರಾಷ್ಟ್ರ ಸೈಬರ್ ಇಲಾಖೆಗೆ ದೂರು ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು. ಇಬ್ಬರು ಮಹಿಳೆಯರಿಂದ ಬಂದ ದೂರುಗಳ ಆಧಾರದ ಮೇಲೆ ಮಾಲ್ವಾನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು, ಮತ್ತೊಬ್ಬ ಮಹಿಳೆ ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ಅವರು ಹೇಳಿದರು.
ಫೆಬ್ರವರಿ 2021 ರಲ್ಲಿ ಈ ಜಾಲದ ಬಲೆಗೆ ಸಿಲುಕಿ ಮೋಸ ಹೋದವರು ಬಂದು ಮಾಲ್ವಾನಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ನಂತರ ಮುಂಬೈ ಅಪರಾಧ ವಿಭಾಗವು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತ್ತು ಎಂದು ಅವರು ಹೇಳಿದರು.
ತನಿಖೆಯ ಸಮಯದಲ್ಲಿ ಕೆಲವು ಕಿರಿಯ ಕಲಾವಿದರು ಒಂದಷ್ಟು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಕೆಲವು ವೆಬ್ ಸರಣಿಗಳು ಅಥವಾ ಸಣ್ಣ ಕಥೆಗಳ ಆಧಾರಿತ ಚಿತ್ರಗಳಲ್ಲಿ ನಿಮಗೆ ಅವಕಾಶ ಕೊಡಿಸುವುದಾಗಿ ಕರೆಸಿಕೊಳ್ಳಲಾಗುತ್ತಿತ್ತು. ಆಡಿಷನ್ಗೆ ಬಂದ ವೇಳೆ ‘ಬೋಲ್ಡ್’ ದೃಶ್ಯಗಳನ್ನು ಚಿತ್ರೀಕರಿಸುವುದಾಗಿ ಹೇಳಲಾಗುತ್ತಿತ್ತು, ಅದರೆ ಇದು ಆನಂತರ ನಗ್ನ ಅಥವಾ ಅರೆ ನಗ್ನ ದೃಶ್ಯಗಳಾಗಿ ಬದಲಾಗುತ್ತಿದ್ದವು, ಇವುಗಳನ್ನು ನಮ್ಮ ಇಚ್ಚೆಗೆ ವಿರುದ್ದವಾಗಿ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ತನಿಖೆಯ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಅನೇಕ ಅಶ್ಲೀಲ ಸಂಬಂಧಿತ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಗೊತ್ತಾಗಿದೆ. ಪೊಲೀಸರು ನಿರ್ಮಾಪಕ ರೋಮಾ ಖಾನ್, ನಟಿ ಗೆಹಾನಾ ವಶಿಷ್ಟ, ನಿರ್ದೇಶಕ ತನ್ವೀರ್ ಹಶ್ಮಿ ಮತ್ತು ಉಮೇಶ್ ಕಾಮತ್ (ಕುಂದ್ರಾ ಸಂಸ್ಥೆಯ ಭಾರತದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: BJP Karnataka: ಬಿಎಸ್ವೈ ನಂತರ ಯಾರಾಗಲಿದ್ದಾರೆ ರಾಜ್ಯದ ಸಿಎಂ? ಇಲ್ಲಿದೆ ಸಂಭಾವ್ಯರ ಪಟ್ಟಿ
ವಸಿಷ್ಠ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಈವರೆಗೆ ಕನಿಷ್ಠ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ