ನ್ಯಾಯಾಲಯದ ಆದೇಶದಂತೆ ಇಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ ಪ್ರಸಿದ್ಧಯಾತ್ರಾ ಸ್ಥಳವಾಗಿರುವ ವಾರಣಾಸಿಯ (Varanasi) ಕಾಶಿ ವಿಶ್ವನಾಥ್-ಜ್ಞಾನವಾಪಿ (Gyanvapi mosque) ಸಂಕೀರ್ಣದಲ್ಲಿರುವ ಮಾ ಶೃಂಗಾರ್ ಗೌರಿ ಸ್ಥಳದ ವೀಡಿಯೊಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆಗೆ ಮುಂದಾಗಿದೆ. ಮಸೀದಿ ವ್ಯಾಪ್ತಿಯಲ್ಲಿ ಈ ಸರ್ವೇ ಕಾರ್ಯಕ್ಕೆ ವಿರೋಧಿಸಿ ನೂರಾರು ಮುಸ್ಲಿಮರು ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿಯು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ವಿರೋಧಿಸುವುದಾಗಿ ಈಗಾಗಲೇ ಎಚ್ಚರಿಸಿತ್ತು. ಈ ಹಿನ್ನಲೆ ಕೆಲ ಕಾಲ ಪ್ರತಿಭಟನೆ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆಯನ್ನು ಮಸೀದಿ ಸುತ್ತ ನೇಮಿಸಲಾಗಿದೆ
ವಿರೋಧದ ನಡುವೆ ಸಮೀಕ್ಷೆ ಆರಂಭ
ಇಂತಹ ಆತಂಕದ ಪರಿಸ್ಥಿತಿಯ ನಡುವೆ ಮಸೀದಿ ಸುತ್ತುಮತ್ತು ಭಾರೀ ಪೊಲೀಸ್ ಬಂದೋಬಸ್ತ್ ನಡೆಸಿದ್ದು, ನ್ಯಾಯಾಲಯದಿಂದ ನೇಮಕವಾದ ತಂಡ ಮಧ್ಯಾಹ್ನ ಸಮೀಕ್ಷೆ ಕೆಲಸವನ್ನು ಆರಂಭಿಸಿದೆ.
ಈ ನಡುವೆ ಜಿಲ್ಲಾಡಳಿತ ಇಂತೇಜಾಮಿಯಾ ಸಮಿತಿ, ಅಧರ್ಮಿಗಳಿಗೆ ಮಸೀದಿಯನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. ಈ ನಡುವೆ ತಾವು ಈ ಸಮೀಕ್ಷೆಗೆ ಶಾಂತಿ ರೀತಿಯಲ್ಲೇ ವಿರೋಧಿಸುತ್ತೇವೆ ಎಂದು ತಿಳಿಸಿದೆ.
ಸಮೀಕ್ಷೆಗೆ ಅನುಮತಿ ನೀಡಿದ್ದ ನ್ಯಾಯಾಲಯ
ಜ್ಞಾನವಾಪಿ ಮಸೀದಿಯು ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದೊಂದಿಗೆ ಹೊಂದಿಕೊಂಡಿದೆ. ಜ್ಞಾನವಾಪಿ ಮಸೀದಿಯನ್ನು ಕಾಶಿ ವಿಶ್ವನಾಥ ದೇವಾಲಯದ ಭಾಗ ಕೆಡವಿ ನಿರ್ಮಿಸಲಾಗಿದೆ. ಹೀಗಾಗಿ ಈ ಭೂಮಿಯನ್ನು ಮಂದಿರಕ್ಕೆ ಮರಳಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬಳಿಕ ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆಗೆ ಅವಕಾಶ ನೀಡಲಾಗಿದೆ
ಇದನ್ನು ಓದಿ: Modi ಸರ್ಕಾರದಿಂದ ಎಲ್ಐಸಿಯ ಐಪಿಒ ಕಡಿಮೆ ಮೌಲ್ಯಮಾಪನ; ರಾಹುಲ್ ಗಾಂಧಿ ಆರೋಪ
ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021 ರ ಏಪ್ರಿಲ್ 18 ರಂದು ಜ್ಞಾನವಾಪಿಯ ಹೊರಗೋಡೆಯಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿಯಲ್ಲಿ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ನೀಡುವಂತೆ ಕೋರಿ ಪ್ರಕರಣವನ್ನು ದಾಖಲಿಸಿದ್ದಾರೆ. ಮಸೀದಿ. ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ವಿರೋಧಿಗಳು ತಡೆಯಲು ಪ್ರಯತ್ನಿಸಿದರು.
ನೆಲ ಮಾಳಿಗೆಯ ಸಮೀಕ್ಷೆ
ಜ್ಞಾನವಾಪಿ ಮಸೀದಿಯ ಎರಡೂ ನೆಲಮಾಳಿಗೆಗಳನ್ನು ಸಹ ಸಮೀಕ್ಷೆ ನಡೆಸಲಾಗುವುದು, ಅದರಲ್ಲಿ ಒಂದು ನೆಲಮಾಳಿಗೆಯ ಕೀ ಆಡಳಿತದ ಬಳಿ ಮತ್ತು ಇನ್ನೊಂದರ ಕೀ ಮಸೀದಿಯ ನಿರ್ವಹಣೆಯಲ್ಲಿದೆ. ಸಂಪೂರ್ಣ ಸಮೀಕ್ಷೆಗೆ ಮೂರ್ನಾಲ್ಕು ದಿನ ಬೇಕಾಗುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಗ್ರಾಫ್ ಮತ್ತು ಛಾಯಾಚಿತ್ರ ಕೂಡ ಮಾಡಲಾಗುತ್ತದೆ.
ಮುನ್ನೆಚ್ಚರಿಕೆಯಾಗಿ ಜ್ಞಾನವಾಪಿ ಸಂಕೀರ್ಣಕ್ಕೆ ತೆರೆ
ಇನ್ನು ಸಮೀಕ್ಷೆ ಆರಂಭವಾದ ಹಿನ್ನಲೆ ಮಸೀದಿ ಸುತ್ತಮುತ್ತ ಬಿಗಿ ಭದ್ರತೆ ಜೊತೆಗೆ ಭದ್ರತಾ ಸಮಸ್ಯೆ ಹಿನ್ನಲೆ ಜ್ಞಾನವಾಪಿ ಸಂಕೀರ್ಣವನ್ನು ಹೋರ್ಡಿಂಗ್ಗಳಿಂದ ಮುಚ್ಚಲಾಗಿದೆ. ಇನ್ನು ಇಂದು ಶುಕ್ರವಾರವಾದ್ದರಿಂದ ಮಸೀದಿಯಲ್ಲಿ ನಮಾಜ್ಗಾಗಿ ಕೂಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಸುಮಾರು 100 ನಮಾಜಿಗಳಿಗೆ ಮಾತ್ರ ಅವಕಾಶವಿದೆ. ಶುಕ್ರವಾರ ಮಧ್ಯಾಹ್ನ ಒಮ್ಮೆ ಮಾತ್ರ 'ನಮಾಜ್' ನಡೆಯುತ್ತದೆ.
ಇದನ್ನು ಓದಿ: ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ನಾಯಕನ ಬಂಧಿಸಿದ ಪಂಜಾಬ್ ಪೊಲೀಸರು
ಮಸೀದಿಯಲ್ಲಿ ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅರ್ಜಿದಾರ ರಾಖಿ ಸಿಂಗ್ ಮತ್ತು ಇತರ ನಾಲ್ವರು ಸೇರಿದಂತೆ ವಕೀಲರಾಗಿದ್ದಾರೆ.
ಎರಡೂ ಪಕ್ಷಗಳ ಸಮ್ಮುಖದಲ್ಲಿ ಶೃಂಗಾರ್ ಗೌರಿ ಸ್ಥಳಕ್ಕೆ ಭೇಟಿ ನೀಡುವಂತೆ ವಕೀಲ ಕಮಿಷನರ್ಗೆ ನ್ಯಾಯಾಲಯ ಸೂಚಿಸಿತ್ತು. ತಂಡವು ಸ್ಥಿತಿಗತಿಯ ವರದಿಯನ್ನು ಸಿದ್ಧಪಡಿಸಿ, ಮುಂದಿನ ವಿಚಾರಣೆಯ ದಿನವಾದ ಮೇ 10 ರಂದು ನ್ಯಾಯಾಲಯದ ಮುಂದೆ ಸಲ್ಲಿಸಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ