Viral Video: ಹಸಿವಿನ ಅಸಹಾಯಕತೆ; ರಸ್ತೆಯಲ್ಲಿ ಸತ್ತು ಬಿದ್ದಿದ್ದ ನಾಯಿಯ ಮಾಂಸ ತಿಂದ ವ್ಯಕ್ತಿ

ಜೈಪುರದ ಹೆದ್ದಾರಿಯಲ್ಲಿ ವಾಹನಕ್ಕೆ ಸಿಕ್ಕಿ ಸತ್ತುಬಿದ್ದಿದ್ದ ನಾಯಿಯ ಮಾಂಸ ರಸ್ತೆಯ ತುಂಬ ಚೆಲ್ಲಾಡಿಹೋಗಿತ್ತು. ಹಸಿದ ವ್ಯಕ್ತಿಯೋರ್ವ ಆ ನಾಯಿಯ ಮಾಂಸವನ್ನು ಹೆಕ್ಕಿ ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:May 22, 2020, 4:29 PM IST
Viral Video: ಹಸಿವಿನ ಅಸಹಾಯಕತೆ; ರಸ್ತೆಯಲ್ಲಿ ಸತ್ತು ಬಿದ್ದಿದ್ದ ನಾಯಿಯ ಮಾಂಸ ತಿಂದ ವ್ಯಕ್ತಿ
ರಸ್ತೆಯಲ್ಲಿ ಬಿದ್ದ ನಾಯಿಯನ್ನು ತಿನ್ನುತ್ತಿರುವ ವ್ಯಕ್ತಿ
  • Share this:
ಜೈಪುರ (ಮೇ 22): ಹಸಿವಿನ ಮುಂದೆ ಬೇರಾವುದೂ ಲೆಕ್ಕಕ್ಕೆ ಬರುವುದಿಲ್ಲ. ಹಸಿದವನ ಅಸಹಾಯಕತೆ ಯಾವ ಕೆಲಸ ಬೇಕಾದರೂ ಮಾಡಿಸುತ್ತದೆ. ಲಾಕ್​ಡೌನ್​ನಿಂದಾಗಿ ಊಟ ಸಿಗದೆ ಪರದಾಡುತ್ತಿದ್ದ ರಾಜಸ್ಥಾನದ ಜೈಪುರದ ವ್ಯಕ್ತಿಯೋರ್ವ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯ ಮಾಂಸವನ್ನು ತಿನ್ನುತ್ತಿದ್ದ ವಿಡಿಯೋವನ್ನು ನೋಡಿದರೆ ಎಂಥವರ ಮನಸೂ ಕರಗುತ್ತದೆ.

ಜೈಪುರದ ಹೆದ್ದಾರಿಯಲ್ಲಿ ವಾಹನಕ್ಕೆ ಸಿಕ್ಕಿ ಸತ್ತುಬಿದ್ದಿದ್ದ ನಾಯಿಯ ಮಾಂಸ ರಸ್ತೆಯ ತುಂಬ ಚೆಲ್ಲಾಡಿಹೋಗಿತ್ತು. ಹಸಿದು ಊಟಕ್ಕಾಗಿ ಅಲೆಯುತ್ತಿದ್ದ ವ್ಯಕ್ತಿಯೋರ್ವ ಆ ನಾಯಿಯ ಮಾಂಸವನ್ನು ಹೆಕ್ಕಿ ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿದೆ. ವಲಸಿಗರ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಈ ವಿಡಿಯೋ ತಾಜಾ ನಿದರ್ಶನವಾಗಿದೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಗುಡ್​ನ್ಯೂಸ್​; ಸ್ವಿಗ್ಗಿ, ಜೊಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರಲಿದೆ ಆಲ್ಕೋಹಾಲ್

ಟ್ವಿಟ್ಟರ್​ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಆ ವ್ಯಕ್ತಿಯ ಅಸಹಾಯಕತೆ ಮತ್ತು ಪರಿಸ್ಥಿತಿಗೆ ಸಾವಿರಾರು ಜನರು ಅನುಕಂಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮಾಡಿರುವ ವ್ಯಕ್ತಿ ಕೂಡ 'ಯಾಕೆ ರಸ್ತೆ ಮಧ್ಯೆ ಕುಳಿತಿದ್ದೀಯ? ಈಚೆ ಬಾ.. ಇಲ್ಲವಾದರೆ ವಾಹನ ಡಿಕ್ಕಿ ಹೊಡೆದು ಸತ್ತು ಹೋಗುತ್ತೀಯ. ಎಷ್ಟು ದಿನವಾಯ್ತು ಊಟ ಮಾಡದೆ? ಅದನ್ನೇಕೆ ತಿನ್ನುತ್ತಿದ್ದೀಯ?' ಎಂದು ಕೂಗುತ್ತಿರುವುದು ರೆಕಾರ್ಡ್​ ಆಗಿದೆ.ಮಾರ್ಚ್​ ಅಂತ್ಯದಲ್ಲಿ ದೇಶದಲ್ಲಿ ಲಾಕ್​ಡೌನ್​ ಶುರುವಾದಾಗಿನಿಂದ ಹಲವಾರು ವಲಸೆ ಕಾರ್ಮಿಕರು ತಮ್ಮ ಊರನ್ನು ತಲುಪಲು ಬೇರೆ ಜಿಲ್ಲೆ, ರಾಜ್ಯಗಳಿಂದ ನಡೆದುಕೊಂಡೇ ಹೋಗುತ್ತಿದ್ದಾರೆ. ಇವರಲ್ಲಿ ಹಲವರು ದಾರಿ ಮಧ್ಯೆ ಊಟ ಸಿಗದೆ, ಬಿಸಿಲಿನ ಬೇಗೆಯಿಂದ ಸಾವನ್ನಪ್ಪಿದ್ದಾರೆ. ಅವರ ಪರಿಸ್ಥಿತಿ ಯಾವ ರೀತಿ ಇದೆ? ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading