HOME » NEWS » National-international » VIDEO OF PURPORTED POLICE BRUTALITY INSIDE LIBRARY NOT RELEASED BY JAMIA MILLIA ISLAMIA UNIVERSITY GNR

‘ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ‘: ಜಾಮಿಯಾ ವಿವಿ ಸ್ಪಷ್ಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿವಿಯ ಆವರಣ ಪ್ರವೇಶಿಸಿದ ಪಾರಾ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್​​​ ಸೇರಿದಂತೆ ಹಲವರು ಖಂಡಿಸಿದ್ಧಾರೆ.

news18-kannada
Updated:February 16, 2020, 9:32 PM IST
‘ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ‘: ಜಾಮಿಯಾ ವಿವಿ ಸ್ಪಷ್ಟನೆ
ಜಾಮಿಯಾ ವಿಡಿಯೋ
  • Share this:
ನವದೆಹಲಿ(ಫೆ.16): ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಪೊಲೀಸರ ದೌರ್ಜನ್ಯದ ವಿಡಿಯೋ ನಾವು ​ಬಿಡುಗಡೆ ಮಾಡಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಡಿಸೆಂಬರ್​​ 15ನೇ ತಾರೀಕಿನಂದು ರಾತ್ರಿ ವೇಳೆ ಗ್ರಂಥಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದರು. ಈ ಹಲ್ಲೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದಾದ ನಂತರ ನಿನ್ನೆ ಜಾಮಿಯಾ ಸಮನ್ವಯ ಸಮಿತಿ ಎಂಬ ಟ್ವಿಟರ್​​ ಖಾತೆಯಿಂದ ಪೋಸ್ಟ್​ ಮಾಡಲಾಗಿದ್ದು, ಭಾರೀ ವೈರಲ್​​ ಆಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಹೀಗೆ ಸ್ಪಷ್ಟೀಕರಣ ನೀಡಿದೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತಾಡಿರುವ ಜಾಮಿಯಾ ವಿಶ್ವವಿದ್ಯಾನಿಲಯದ ಸಿಬ್ಬಂದಿ ಡಾ. ಝಾಕಿರ್ ಹುಸೈನ್, ಗ್ರಂಥಾಲಯದಲ್ಲಿ ನಡೆದ ಪೊಲೀಸ್​​ ದೌರ್ಜನ್ಯ ವಿಡಿಯೋ ವೈರಲ್​​ ಆದ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋ ನಾವು ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ಧಾರೆ. ಜತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದ ನೇತೃತ್ವವಹಸಿಕೊಂಡಿರುವ ಜಾಮಿಯಾ ಸಮನ್ವಯ ಸಮಿತಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ ಡಾ. ಝಾಕಿರ್ ಹುಸೈನ್.

ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ಡಿಸೆಂಬರ್​ 15ರಂದು ಪ್ರತಿಭಟನೆ ನಡೆಯುವ ವೇಳೆ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳು ಪೊಲೀಸರು ಹಲ್ಲೆ ನಡೆಸಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ಹಲ್ಲೆಯ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಳೆ ವಿದ್ಯಾರ್ಥಿಗಳನ್ನು ಒಳಗೊಂಡ ಜಾಮಿಯಾ ಸಮನ್ವಯ ಸಮಿತಿ ಭಾನುವಾರ ಬೆಳಗ್ಗೆ ಈ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಅಮಿತ್​​ ಶಾ ನಿವಾಸದತ್ತ ಜಾಥಾ ಹೊರಟ ಶಾಹೀನ್​​ ಬಾಗ್​​​ ಪ್ರತಿಭಟನಾಕಾರರು: ಪೊಲೀಸರಿಂದ ತಡೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿವಿಯ ಆವರಣ ಪ್ರವೇಶಿಸಿದ ಪಾರಾ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್​​​ ಸೇರಿದಂತೆ ಹಲವರು ಖಂಡಿಸಿದ್ಧಾರೆ.

ಇನ್ನು, ವಿಡಿಯೊ ನಮ್ಮ ಕೈ ಸೇರಿದೆ. ಈ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ವಿಶೇಷ ಪೊಲೀಸ್ ಆಯುಕ್ತ(ಗುಪ್ತಚರ) ಪ್ರವೀಣ್ ರಂಜನ್ ತಿಳಿಸಿದ್ದರು.
First published: February 16, 2020, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories