• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dalai Lama: ತನ್ನ ನಾಲಿಗೆ ತೋರಿಸಿ ನೆಕ್ಕುವಂತೆ ಬಾಲಕನಿಗೆ ಹೇಳಿದ ದಲೈಲಾಮಾ! ಇದೆಂಥಾ ಅಸಹ್ಯ? ವಿಡಿಯೋ ನೋಡಿ

Dalai Lama: ತನ್ನ ನಾಲಿಗೆ ತೋರಿಸಿ ನೆಕ್ಕುವಂತೆ ಬಾಲಕನಿಗೆ ಹೇಳಿದ ದಲೈಲಾಮಾ! ಇದೆಂಥಾ ಅಸಹ್ಯ? ವಿಡಿಯೋ ನೋಡಿ

ಚೀನಾಕ್ಕೆ ಮರಳುವುದರಲ್ಲಿ ಅರ್ಥವಿಲ್ಲ ಎಂದ್ರು ದಲೈ ಲಾಮಾ!

ಚೀನಾಕ್ಕೆ ಮರಳುವುದರಲ್ಲಿ ಅರ್ಥವಿಲ್ಲ ಎಂದ್ರು ದಲೈ ಲಾಮಾ!

ಪುಟ್ಟ ಬಾಲಕನ ತುಟಿಗಳಿಗೆ ಚುಂಬಿಸಿರುವ ದಲೈಲಾಮಾ, ತಮ್ಮ ನಾಲಿಗೆಯನ್ನು ಚೀಪುವಂತೆ ಆತನಿಗೆ ಹೇಳುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

  • Share this:

ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ (Video) ಕಂಡ ನೆಟ್ಟಿಗರು ದಲೈ ಲಾಮಾ ಈ ರೀತಿ ಯಾಕೆ ಮಾಡಿದರೂ ಅನ್ನುವ ಪ್ರಶ್ನೆ ಎದ್ದಿದೆ.  ಪುಟ್ಟ ಬಾಲಕನ ತುಟಿಗಳಿಗೆ ಚುಂಬಿಸಿರುವ ದಲೈಲಾಮಾ, ತಮ್ಮ ನಾಲಿಗೆಯನ್ನು (Tongue) ಚೀಪುವಂತೆ ಆತನಿಗೆ ಹೇಳುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸುಮಾರು ಒಂದು ತಿಂಗಳ ಹಿಂದಿನ ವಿಡಿಯೋ ಎನ್ನಲಾಗಿದೆ. ಆದರೆ ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ. ಬಾಲಕನೊಬ್ಬನನ್ನು ಕರೆದು ಬಳಿಕ ತನ್ನ ತುಟಿಗಳಿಗೆ ಮುತ್ತಿಟ್ಟು ನಾಲಿಗೆಯನ್ನು ನೆಕ್ಕುವಂತೆ ಸೂಚಿಸುತ್ತಿರುವ ವಿಡಿಯೋ ಇದಾಗಿದೆ.


ಬಾಲಕನ ತುಟಿಗೆ ಮುತ್ತಿಟ್ಟ ದಲೈಲಾಮಾ!


ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಧರ್ಮಗುರುವಿಗೆ ಗೌರವ ಸಲ್ಲಿಸಲು ಬಾಗಿದ್ದ ಪುಟಾಣಿ ಬಾಲಕನ ತುಟಿಗಳನ್ನು ದಲೈ ಲಾಮಾ ಚುಂಬಿಸಿದ್ದಾರೆ. ಬಳಿಕ ಬಾಲಕನ ತಲೆ ಸವರಿ, ಕೆನ್ನೆ ಮುಟ್ಟಿದ್ದಾರೆ. ಇದಾದ ಬಳಿಕ ತಮ್ಮ ನಾಲಿಗೆಯನ್ನು ಹೊರ ಚಾಚಿದ ದಲೈಲಾಮಾ, ಅದನ್ನು ಚೀಪುವಂತೆ ಬಾಲಕನಿಗೆ ಹೇಳಿದ್ದಾರೆ. "ನನ್ನ ನಾಲಿಗೆಯನ್ನು ಚೀಪಲು ನಿನಗೆ ಸಾಧ್ಯವೇ?" ಎಂದು ಬಾಲಕನಿಗೆ ದಲೈಲಾಮಾ ಕೇಳಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


ದಲೈಲಾಮಾ ವಿರುದ್ಧ ಭಾರೀ ಆಕ್ರೋಶ!


ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕ್ರೋಶ ಮನೆಮಾಡಿದೆ. ವಿಡಿಯೋವನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರ ಜೂಸ್ಟ್ ಬ್ರೋಕರ್ಸ್, "ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನಿಗೆ ಮುತ್ತಿಡುತ್ತಾರೆ. ಅವರ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಅವರು ನಿಜವಾಗಿಯೂ ನನ್ನ ನಾಲಿಗೆಯನ್ನು ಹೀರು ಎಂದು ಹೇಳುತ್ತಾರೆ. ಆ ಬಾಲಕ ಅದನ್ನು ಏಕೆ ಮಾಡಬೇಕು?" ಎಂದು ಪ್ರಶ್ನಿಸಿದ್ದಾರೆ.ಧರ್ಮ ಗುರುವಾಗಿ ಇದೆಂಥಾ ಕೆಲ್ಸ ಎಂದ ನೆಟ್ಟಿಗರು!


ಇನ್ನೂ ಅನೇಕರು ಈ ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ. ಇದು ದಲೈಲಾಮಾ ಅವರ ಯೋಗ್ಯವಲ್ಲದ ವರ್ತನೆ. ಈ ಕೆಟ್ಟ ನಡವಳಿಕೆಯನ್ನು ಯಾರೂ ಸಮರ್ಥಿಸಬಾರದು"  ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಹಳೆ ವಿಡಿಯೋ ಆಗಿದ್ದರು ಸರಿ, ಈ ರೀತಿ ಮಾಡುವುದರಿಂದ ಏನು ಸಂದೇಶ ನೀಡುತ್ತಿದ್ದಾರೆ ಅಂತ ನೆಟ್ಟಿಗರು ಧರ್ಮಗುರು ದಲೈಲಾಮಾ ವಿರುದ್ಧ ಕಿಡಿಕಾರಿದ್ದಾರೆ.


ಇದನ್ನೂ ಓದಿ: 8 ವರ್ಷದ ಬಾಲಕನನ್ನು ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕನನ್ನಾಗಿ ಘೋಷಿಸಿದ ದಲೈ ಲಾಮಾ!


2019ರಲ್ಲಿ ವಿವಾದ ಸೃಷ್ಟಿಸಿತ್ತು ದಲೈಲಾಮಾ  ಹೇಳಿಕೆ!


2019 ರಲ್ಲಿ ದಲೈಲಾಮಾ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು ಆಕರ್ಷಕವಾಗಿರಬೇಕು ಎಂದು ಹೇಳಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. “ಹೆಣ್ಣು ದಲೈಲಾಮಾ ಬಂದರೆ ಹೆಚ್ಚು ಆಕರ್ಷಕವಾಗಿರಬೇಕು” ಎಂದು ಹೇಳಿಕೆ ನೀಡಿದ್ದಾರೆ. ವಿಶ್ವದಾದ್ಯಂತ ಟೀಕೆಗೆ ಗುರಿಯಾದ ಹೇಳಿಕೆಯನ್ನು 2019ರಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟರ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.


ಇದು ಟಿಬೆಟ್​ ಸಂಪ್ರದಾಯವಾ?


ಸಾರ್ವಜನಿಕವಾಗಿ ಆಲಂಗಿಸುವುದು, ಕೆನ್ನೆಗಳಿಗೆ ಚುಂಬಿಸುವುದು, ಮುಖ ಹಾಗೂ ನಾಲಿಗೆಗೆ ಚುಂಬಿಸುವುದು ಟೆಬೆಟ್ ಸಂಸ್ಕೃತಿಯಲ್ಲ. ನಾಲಿಗೆ ಮೂಲಕ ಶುಭಕೋರುವುದು ಟಿಬೆಟ್ ಸಂಪ್ರದಾಯವಾಗಿದೆ ಎಂದು ಇನ್ನೂ ಕೆಲವರು ಸ್ಪಷ್ಟನೆ ನೀಡುತ್ತಿದ್ದಾರೆ. 


ದಲೈಲಾಮಾ ಅವರು ಕಳೆದ ತಿಂಗಳು ಅಮೆರಿಕದಲ್ಲಿ ಜನಿಸಿದ ಮಂಗೋಲಿಯಾದ ಬಾಲಕನನ್ನು ಟಿಬೆಟ್ ಬುದ್ಧಿಸಂನಲ್ಲಿನ ಮೂರನೆ ಉನ್ನತ ಶ್ರೇಣಿಯಾದ 10ನೇ ಖಾಲ್ಖಾ ಜೆತ್ಸುನ್ ಧಂಪಾ ರಿಂಪೊಚೆಯಾಗಿ ನೇಮಕ ಮಾಡಿದ್ದರು.

First published: