Kerala flood- ಕೇರಳದಲ್ಲಿ ಭೀಕರ ಪ್ರವಾಹ; ಮುಳುಗಿದ ಬಸ್, ಜನರ ಸಾವು-ಬದುಕಿನ ಹೋರಾಟದ ವಿಡಿಯೋ

Flood Videos- ಕೋವಿಡ್​ನಿಂದ ತತ್ತರಿಸುತ್ತಿರುವ ಕೇರಳದಲ್ಲಿ ಈಗ ಭಾರೀ ಮಳೆ ಮತ್ತು ಭೀಕರ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಪ್ರವಾಹದ ಆರ್ಭಟ ತೋರಿಸುವ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಕೇರಳ ಪ್ರವಾಹ

ಕೇರಳ ಪ್ರವಾಹ

 • News18
 • Last Updated :
 • Share this:
  ತಿರುವನಂತರಪುರಂ, ಅ. 16: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು (Kerala Rains), ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಾಯಾಂ, ಪಥನಮ್‍ತಿಟ್ಟಾ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶ್ಯೂರ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಈ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಹಾಯವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಏಳು ಜಿಲ್ಲೆಗಳಲ್ಲಿ ರಾಜಧಾನಿ ತಿರುವನಂತರಪುರಂ, ಕೊಲ್ಲಂ, ಅಲ್ಲಪುಜಾ, ಪಾಲಕ್ಕಾಡ್, ಮಲ್ಲಪುರಂ, ಕೊಯಿಕ್ಕೊಡ್ ಮತ್ತು ವಯನಾಡು ಸೇರಿವೆ.

  ಪ್ರವಾಹದ ವಿಡಿಯೋಗಳು ವೈರಲ್: ಈ ನಡುವೆ ಪ್ರವಾಹದ ತೀವ್ರತೆ ವಿಡಿಯೋಗಳು ಸೋಶಿಯಲ್ ಮೀಡಿಯಾ (Social Media)ದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ (Viral Video)ಗಳಲ್ಲಿ ಕೇರಳದ ಪ್ರವಾಹ ಪರಿಸ್ಥಿತಿ ಅನಾವರಣಗೊಂಡಿದೆ. ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು, ವಾಹನ ಸವಾರರು ರಸ್ತೆ ದಾಟಲು ಪರದಾಡ ನಡೆಸುತ್ತಿದ್ದಾರೆ. KSRTC (ಕೇರಳ ಸಾರಿಗೆ) ಬಸ್​ವೊಂದು ಪ್ರವಾಹದಲ್ಲಿ ಸಿಲುಕಿದ್ದು, ಪ್ರಯಾಣಿಕರು ಹರಸಾಹಸಪಟ್ಟು ಹೊರ ಬರುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಕೊಟ್ಟಾಯಂ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಜನರು ಕಾರ್ ತಳ್ಳಿಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗಿದೆ.


  ರಾಜ್ಯ ಸರ್ಕಾರದ ಮನವಿ ಮೇರೆಗೆ ವಾಯುಪಡೆಯ ಹೆಲಿಕಾಪ್ಟರ್ ಗಳು ಕೇರಳಕ್ಕೆ ಆಗಮಿಸಿವೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಎನ್‍ಡಿಆರ್‍ಎಫ್ ತಂಡ ಸನ್ನದ್ಧವಾಗಿದೆ. ಈಗಾಗಲೇ 30 ಸೈನಿಕರ ಸೇನಾ ತುಕಡಿಯನ್ನು ಪಾಂಗೋಡಿನಿಂದ ಕೊಟ್ಟಾಯಂ ಜಿಲ್ಲೆಯ ಕಂಜೀರಪಲ್ಲಿಗೆ ಸ್ಥಳಾಂತರಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಗಳು ಸಿದ್ಧಗೊಂಡಿವೆ. ಇಡುಕ್ಕಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 22 ಜನ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ತ್ರಿಶ್ಯೂರ್ ಜಿಲ್ಲೆಯಲ್ಲಿ ಭೂ ಕುಸಿತವಾಗುತ್ತಿದ್ದು, ಮುಂದಿನ ಮೂರು ದಿನ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಕೊಟ್ಟಾಯಂನಲ್ಲಿ ಜನರು ಕಾಣೆಯಾಗಿರುವ ಬಗ್ಗೆ ವರದಿಗಳು ಪ್ರಕಟವಾಗುತ್ತಿದ್ದು, ಅಧಿಕೃತವಾಗಿ ದೃಢಪಟ್ಟಿಲ್ಲ.

  ಇದನ್ನೂ ಓದಿ: Bangladesh Hindu Temple Attack- ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇಗುಲದ ಮೇಲೆ ದಾಳಿ; ಒಬ್ಬನ ಹತ್ಯೆ

  ನದಿಗೆ ತೆರಳದಂತೆ ಎಚ್ಚರಿಕೆ:

  ಜನರು ನದಿ ತೀರ ಮತ್ತು ಪರ್ವತ ಪ್ರದೇಶಗಳಿಗೆ ತೆರಳದಂತೆ ಮುಖ್ಯಮಂತ್ರಿಗಳ ಕಾರ್ಯಲಯ ಸೂಚನೆ ನೀಡಿದೆ. ಈ ಸಮಯದಲ್ಲಿ ಪ್ರವಾಸಿಗರು ಸಹ ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನ ಇಲ್ಲದೇ ಟ್ರೆಕ್ಕಿಂಗ್ ಮಾಡದಂತೆ ಸೂಚನೆ ನೀಡಿದೆ. ಮಳೆಯ ತೀವ್ರತೆ ಕಡಿಮೆ ಆಗೋವರೆಗೂ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಳ್ಳಬೇಕು ಮತ್ತು ಕೇರಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ತಮ್ಮ ಪ್ರಯಾಣ ಮುಂದೂಡಿ ಎಂದು ಸಲಹೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ವೇಗ ಮತ್ತು ಎತ್ತರ ದೊಡ್ಡದಾಗಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

  ಇದನ್ನೂ ಓದಿ: Teacher Rapes Student- ಸರ್ಕಾರಿ ಶಾಲೆ ಶಿಕ್ಷಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಅಪ್ರಾಪ್ತೆಗೆ ಅಶ್ಲೀಲ ಸಂದೇಶಗಳನ್ನೂ ಕಳಿಸಿದ್ದ ಕಾಮುಕ

  ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ:

  ಅಕ್ಟೋಬರ್ 17 ಮತ್ತು 18 (ಭಾನುವಾರ, ಸೋಮವಾರ) ಭಾರೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 19ರ ನಂತರ ಮಳೆಯ ಅಬ್ಬರ ಕ್ಷೀಣವಾಗಲಿದೆ. ಸರ್ಕಾರ ಮೀನುಗಾರರಿಗೆ ಶನಿವಾರ ಮತ್ತು ಭಾನುವಾರ ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 45-50 ಕಿ.ಮೀ ನಿಂದ 60  ಕಿ.ಮೀ.ನಷ್ಟು ಹೆಚ್ಚಾಗಲಿದೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: