• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Vice Presidential Election 2022: ಜಗದೀಪ್ ಧನಕರ್ vs ಮಾರ್ಗರೇಟ್ ಆಳ್ವ; ಉಪರಾಷ್ಟ್ರಪತಿ ಚುನಾವಣೆ, ರಿಸಲ್ಟ್ ಎರಡೂ ಇಂದೇ

Vice Presidential Election 2022: ಜಗದೀಪ್ ಧನಕರ್ vs ಮಾರ್ಗರೇಟ್ ಆಳ್ವ; ಉಪರಾಷ್ಟ್ರಪತಿ ಚುನಾವಣೆ, ರಿಸಲ್ಟ್ ಎರಡೂ ಇಂದೇ

ಮಾರ್ಗರೇಟ್ ಆಳ್ವ vs ಜಗದೀಪ್ ಧನಕರ್

ಮಾರ್ಗರೇಟ್ ಆಳ್ವ vs ಜಗದೀಪ್ ಧನಕರ್

Vice President Poll 2022: ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಮತದಾನ ಮುಗಿದ ತಕ್ಷಣ ಮತ ಎಣಿಕೆ ನಡೆಯಲಿದೆ. ಶನಿವಾರ ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

  • Share this:

ದೆಹಲಿ: ಭಾರತದ ಹೊಸ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಆಗಸ್ಟ್ 6) ಚುನಾವಣೆ (Vice Presidential Election Today) ನಡೆಯಲಿದೆ. ಮತದಾನವು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಮತದಾನ ಮುಗಿದ ತಕ್ಷಣ ಮತ ಎಣಿಕೆ ನಡೆಯಲಿದೆ. ಶನಿವಾರ ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆಯ ಪ್ರಧಾನ ಕಾರ್ಯದರ್ಶಿಯನ್ನು ಚುನಾವಣೆಗೆ 9Vice Presidential Election 2022) ಚುನಾವಣಾಧಿಕಾರಿಯಾಗಿ ನೇಮಿಸಲಾಗುತ್ತದೆ. ಜಗದೀಪ್ ಧನಕರ್ ಅವರು (Jagdeep Dhankhar) ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDAಎ) ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮಾರ್ಗರೇಟ್ ಆಳ್ವ ಅವರನ್ನು (Margaret Alva) ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.


ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಗೆಲವು ಬಹುತೇಕ ಖಚಿತಗೊಂಡಿದೆ. ಉಪರಾಷ್ಟ್ರಪತಿ ಚುನಾವಣೆಗೆ ಮುನ್ನ ಬಿಜೆಪಿ ಶುಕ್ರವಾರ ಎನ್‌ಡಿಎ ಸಮ್ಮಿಶ್ರ ಸಂಸದರಿಗೆ ಅಣಕು ಮತದಾನ ಆಯೋಜಿಸಿತ್ತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರದ ಹಲವು ಸಚಿವರು ಈ ಅಣಕು ಮತದಾನದ ವೇಳೆ ಹಾಜರಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಸಚಿವ ಭೂಪೇಂದರ್ ಯಾದವ್ ಇದರ ಮೇಲ್ವಿಚಾರಣೆ ನಡೆಸಿದರು.


ಧನ್ಯವಾದ ಅರ್ಪಿಸಿದ ಜಗದೀಪ್ ಧನಕರ್


ಇದರ ನಂತರ NDA  ಉಪ ರಾಷ್ಟ್ರಪತಿ ನಾಮನಿರ್ದೇಶಿತ ಜಗದೀಪ್ ಧನಕರ್ ಅವರು ಸಂಸತ್ತಿಗೆ ತಲುಪಿದರು ಮತ್ತು ತಮ್ಮನ್ನು ತಮ್ಮ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದ್ದಕ್ಕಾಗಿ ಆಡಳಿತಾರೂಢ ಮೈತ್ರಿಕೂಟದ ಸಂಸದರಿಗೆ ಧನ್ಯವಾದ ಅರ್ಪಿಸಿದರು. ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್ 6 ರಂದು ಮತದಾನ ನಡೆಯಲಿದೆ. ಧಂಖರ್ ಆಡಳಿತಾರೂಢ ಮೈತ್ರಿ ಅಭ್ಯರ್ಥಿ ಮತ್ತು ಮಾರ್ಗರೇಟ್ ಆಳ್ವ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದಾರೆ.


ಜಗದೀಪ್ ಧನಕರ್ ಯಾರು?


ಜಗದೀಪ್ ಧನಕರ್ ಹೆಸರು ಕೇಳಿದ್ರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಜೊತೆಗಿನ ಸಂಘರ್ಷ ನೆನಪಿಗೆ ಬರುತ್ತದೆ. ಪಶ್ಚಿಮ ಬಂಗಾಳ ರಾಜ್ಯಪಾಲರಾಗಿರುವ ಜಗದೀಪ್ ಧನಕರ್, ದೀದಿ ಜೊತೆ ಸಂಘರ್ಷದಲ್ಲೇ ತೊಡಗಿದವರು.


ರಾಜಸ್ಥಾನ ಮೂಲದ ಜಗದೀಪ್ ಧನಕರ್


ಜಗದೀಪ್ ಧನಕರ್ ಅವರು 1951 ರಲ್ಲಿ ರಾಜಸ್ಥಾನದ ಕಿತಾನ ಗ್ರಾಮದಲ್ಲಿ ಜನಿಸಿದರು. ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಳ್ಳುವ ಮೊದಲು ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಶಾಲೆಯಲ್ಲಿಯೇ ಮುಗಿಸಿದರು. ನಂತರ ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಓದಿದರು. ಅವರು ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.


ಇದನ್ನೂ ಓದಿ: Vice-Presidential Election: ಯಾರಿಗೆ ಮಾಯಾವತಿ ಬೆಂಬಲ? BSP ನಾಯಕಿಯಿಂದ ಮಹತ್ವದ ಘೋಷಣೆ!


80 ವರ್ಷದ ಮಾರ್ಗರೇಟ್ ಆಳ್ವಾ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿಯಾಗಿದ್ದಾರೆ. ಅವರನ್ನು ಕಾಂಗ್ರೆಸ್ ತನ್ನ ಉಪ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಕಾಂಗ್ರೆಸ್ ಮೈತ್ರಿಪಕ್ಷಗಳಲ್ಲೇ ಕೆಲವು ಮಾರ್ಗರೇಟ್ ಆಳ್ವಾಗೆ ಬೆಂಬಲ ಘೋಷಿಸಿಲ್ಲ.


ಇದನ್ನೂ ಓದಿ: Jagdeep Dhankhar: ದೀದಿ ಕಾಡಿದ ಗವರ್ನರ್ ಉಪರಾಷ್ಟ್ರಪತಿ ಆಗ್ತಾರಾ? ಜಗದೀಪ್ ಧನಕರ್ ಬಗ್ಗೆ ಇಲ್ಲಿದೆ ಮಾಹಿತಿ


ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬಿಎಸ್ಪಿ ತನ್ನ ಆಟ ಆರಂಭಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರಿಗೆ ಬಿಎಸ್‌ಪಿ ಬೆಂಬಲ ನೀಡಲಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಃ ಮಾಯಾವತಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲೂ ಮಾಯಾವತಿಯವರ ಬಿಎಸ್‌ಪಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು  ಅವರನ್ನು ಬೆಂಬಲಿಸಿತ್ತು ಎಂಬುವುದು ಉಲ್ಲೇಖನೀಯ.

top videos
    First published: