Venkaiah Naidu: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢ

Vice President Venkaiah Naidu: ಅದಾಗ್ಯೂ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಉತ್ತಮವಾಗಿದೆ. ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ

ವೆಂಕಯ್ಯ ನಾಯ್ಡು

ವೆಂಕಯ್ಯ ನಾಯ್ಡು

  • Share this:
    ನವದೆಹಲಿ (ಸೆ.29): ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಂಗಳವಾರ ಬೆಳಗ್ಗೆ ಕೋವಿಡ್​-19 ಪರೀಕ್ಷೆಗೆ ಒಳಗಾದ ಅವರ ವರದಿ ಪಾಸಿಟಿವ್​ ಬಂದಿದೆ ಎಂದು ಉಪ ರಾಷ್ಟ್ರಪತಿ ಕಚೇರಿ ತಿಳಿಸಿದೆ. ಅದಾಗ್ಯೂ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಉತ್ತಮವಾಗಿದೆ. ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ. ಅವರ ಹೆಂಡತಿ ಉಷಾ ನಾಯ್ಡು ಅವರ ಕೊರೋನಾ ಪರೀಕ್ಷೆ ನೆಗಟಿವ್​ ಬಂದಿದ್ದರೂ, ಅವರು ಕೂಡ ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ.







    ರಾಜ್ಯಸಭಾ ಸದಸ್ಯರು ಆಗಿರುವ 71 ವರ್ಷದ ವೆಂಕಯ್ಯ ನಾಯ್ಡು ಅವರು, ಕಳೆದ ವಾರ ನಡೆದ ಮುಂಗಾರು ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿದ್ದರು.  25ಕ್ಕೂ ಹೆಚ್ಚಿನ ಸಂಸದರು ಕೊರೋನಾ ಸೋಂಕಿಗೆ ಒಳಗಾದ ಹಿನ್ನಲೆ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ.
    Published by:Seema R
    First published: