One child policy: ಒಂದೇ ಮಗು ನೀತಿಯನ್ನು ತೆಗೆದು ಹಾಕಿ: ಯುಪಿ ಸಿಎಂ ಆದಿತ್ಯನಾಥ್​ಗೆ ವಿಎಚ್​ಪಿ ಒತ್ತಾಯ

1980 ರಲ್ಲಿ ಒನ್-ಚೈಲ್ಡ್ ನೀತಿಯನ್ನು ಅಳವಡಿಸಿಕೊಂಡಿದ್ದ ಚೀನಾ ಮೂರು ದಶಕಗಳ ನಂತರ ಈ ನೀತಿಯನ್ನು ಹಿಂತೆಗೆದುಕೊಂಡಿತು.

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

  • Share this:
    ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ವಿವಾದ್ಮತಕ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ಪ್ರಕಟಿಸಿತ್ತು ‘‘ಉತ್ತರ ಪ್ರದೇಶ ಜನಸಂಖ್ಯೆ  ಮಸೂದೆ- 2021” ಕರಡಿನ ಪ್ರಕಾರ, ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಬಡ್ತಿ ಪಡೆಯುವ ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ಇದು ನಿರ್ಭಂದಿಸುತ್ತದೆ.

    ಈ ಜನಸಂಖ್ಯಾ ನೀತಿಗೆ ಇಡೀ ದೇಶದಾದ್ಯಂತ ವಿರೋಧ ವ್ಯಕ್ತವಾಗಿದ್ದಲ್ಲದೇ ಇದು ಅವೈಜ್ಞಾನಿಕ ನೀತಿ ಎಂದು ಅನೇಕ ಪರಿಣಿತರು ಸರ್ಕಾರವನ್ನು ಜರಿದಿದ್ದರು. ಈಗ ವಿಶ್ವ ಹಿಂದೂ ಪರಿಷತ್​ ಕೂಡ ಈ ಕರಡಿನ ಬಗ್ಗೆ ತನ್ನ ಅಪಸ್ವರ ಎತ್ತಿದೆ.

    ಈ ಕರಡಿನಲ್ಲಿ ಇರುವ ‘ಒಂದೇ ಮಗು’ ನೀತಿಯನ್ನು ತೆಗೆದುಹಾಕುವಂತೆ ಆದಿತ್ಯನಾಥ್​  ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಸೂಚಿಸಿದೆ. ಇದು ವಿವಿಧ ಸಮುದಾಯಗಳ ನಡುವಿನ ಜನಸಂಖ್ಯೆಯ ಅಸಮತೋಲನ  ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

    ಉತ್ತರ ಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ಯಲ್ಲಿನ ಪೋಷಕರ ಬದಲು ಮಗುವಿಗೆ ನೀಡಲಾಗುವ ಬಹುಮಾನ ಅಥವಾ ಶಿಕ್ಷೆಯನ್ನು ತೆಗೆದುಹಾಕುವಂತೆ ಕೇಳಿದೆ.

    ಸಂಘಟನೆಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗಕ್ಕೆ (ಯುಪಿಎಸ್‌ಸಿಎಲ್) ಬರೆದ ಪತ್ರದಲ್ಲಿ  “ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳ ನೀತಿಯನ್ನು ಉತ್ತೇಜಿಸುವ ಮಸೂದೆ ಎಂದು ಹೇಳುತ್ತದೆ. ವಿಶ್ವ ಹಿಂದೂ ಪರಿಷತ್ ಎರಡೂ ವಿಷಯಗಳನ್ನು ಒಪ್ಪುತ್ತದೆ” ಎಂದು  ಹೇಳಿದ್ದಾರೆ.

    ಆದರೂ, ಮಸೂದೆಯ ಸೆಕ್ಷನ್ 5, 6 (2) ಮತ್ತು 7 ರಲ್ಲಿ ಹೇಳುವ, ಸರ್ಕಾರಿ ನೌಕರರು ಮತ್ತು ಇತರರನ್ನು ಒಂದೇ ಮಗುವನ್ನು ಹೊಂದುವ ವಿಷಯವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

    ಒಂದು ಮಗುವಿನ ನೀತಿಯಲ್ಲಿ ಹೆತ್ತವರ ಬದಲು ಮಗುವಿಗೆ ಬಹುಮಾನ ಅಥವಾ ಶಿಕ್ಷೆ ನೀಡುವ ಅಸಂಗತ ಸಂಗತಿಯನ್ನು ತೆಗೆದುಹಾಕಲು ನಾವು ಸೂಚಿಸುತ್ತೇವೆ. ಜೊತೆಗೆ ಜನಸಂಖ್ಯೆಯ ಸ್ಥಿರತೆಯನ್ನು ಸಾಧಿಸಲು ಎರಡು ಮಕ್ಕಳ ನೀತಿಯನ್ನು ನಾವು ಒಪ್ಪುತ್ತೇವೆ ಎಂದು ಅವರು ಹೇಳಿದ್ದಾರೆ.

    ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ರ ಕರಡನ್ನು ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ನೀಡುವಂತೆ ಆಹ್ವಾನ ನೀಡಿತ್ತು.

    ಪ್ರಸ್ತುತ ಒಂದು ಮಗುವಿನ ನೀತಿಯಿಂದ, ದುಡಿಯುವ ವಯಸ್ಸಿನ ಜನಸಂಖ್ಯೆ ಮತ್ತು ಅವಲಂಬಿತ ಜನಸಂಖ್ಯೆಯ ನಡುವೆ ಅನುಪಾತದಲ್ಲಿ ಏರುಪೇರಾಗುತ್ತದೆ. ಇದು ಇಬ್ಬರು ಪೋಷಕರು ಮತ್ತು ನಾಲ್ಕು ಅಜ್ಜ ಅಜ್ಜಿಯರನ್ನು ನೋಡಿಕೊಳ್ಳಲು ಕೇವಲ ಒಬ್ಬ ದುಡಿಯುವ ವ್ಯಕ್ತಿಯಿರುವಂತಹ ಪರಿಸ್ಥಿತಿಗೆ ತಂದೊಡ್ಡುತ್ತದೆ ಎಂದು ವಿಹೆಚ್‌ಪಿ ಹೇಳಿದೆ.

    ಇದನ್ನೂ ಓದಿ: ನನಗೂ ಸಿಎಂ ಆಗುವ ಆಸೆ ಇದೆ, ಅದಕ್ಕೆ‌ ಇನ್ನು‌‌ ಕಾಲ‌ ಇದೆ: ಸಚಿವ ಉಮೇಶ್​ ಕತ್ತಿ

    1980 ರಲ್ಲಿ ಒನ್-ಚೈಲ್ಡ್ ನೀತಿಯನ್ನು ಅಳವಡಿಸಿಕೊಂಡಿದ್ದ ಚೀನಾ ಮೂರು ದಶಕಗಳ ನಂತರ ಈ ನೀತಿಯನ್ನು ಹಿಂತೆಗೆದುಕೊಂಡಿತು ವಿಎಚ್‌ಪಿ ನಾಯಕ ಹೇಳಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: