HOME » NEWS » National-international » VETERAN CONGRESS LEADER MOTILAL VORA 93 PASSES AWAY MAK

Motilal Vora: ಹಿರಿಯ ಕಾಂಗ್ರೆಸ್​ ಮುಖಂಡ ಮಧ್ಯಪ್ರದೇಶದ ಮಾಜಿ ಸಿಎಂ ಮೋತಿಲಾಲ್​ ವೋರಾ (93) ನಿಧನ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ವೋರಾ ಅವರು ನಿಜವಾದ ಕಾಂಗ್ರೆಸ್‌ನವರಾಗಿದ್ದು, ಅದ್ಭುತವಾದ ಮನುಷ್ಯ ಎಂಬುದರಲ್ಲಿ ಎರಡು ಮಾತಿಲ್ಲ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

news18-kannada
Updated:December 21, 2020, 5:25 PM IST
Motilal Vora: ಹಿರಿಯ ಕಾಂಗ್ರೆಸ್​ ಮುಖಂಡ ಮಧ್ಯಪ್ರದೇಶದ ಮಾಜಿ ಸಿಎಂ ಮೋತಿಲಾಲ್​ ವೋರಾ (93) ನಿಧನ
ಮೋತಿಲಾಲ್​ ವೋರಾ.
  • Share this:
ನವ ದೆಹಲಿ (ಡಿಸೆಂಬರ್​ 21); ಕೊರೋನಾ ಸೋಂಕಿಗೆ ತುತ್ತಾಗಿ ಇತ್ತೀಚೆಗೆ ಚೇತರಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್​ ಮುಖಂಡ ರಾಜಕಾರಣಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ 93 ವರ್ಷದ ಮೋತಿಲಾಲ್​ ವೋರಾ ವಯೋ ಸಹಜ ಖಾಯಲೆಯಿಂದಾಗಿ ಇಂದು ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಮೂತ್ರ ಸೋಂಕಿನ ಖಾಯಿಲೆಗೆ ತುತ್ತಾಗಿದ್ದ ಮೋತಿಲಾಲ್​ ವೋರಾ ಅವರನ್ನು ದೆಹಲಿಯ ಎಸ್ಕೋರ್ಟ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ವೆಂಟಿಲೇರ್​ ಸಹಾಯದಿಂದಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಖಚಿತಪಡಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಸಿಎಂ ಆಗಿ ಮತ್ತು ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಮೋತಿಲಾಲ್​ ವೋಹ್ರಾ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಅಲ್ಲದೆ, 2018ರ ವರೆಗೆ ಸತತ 16 ವರ್ಷಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಖಚಾಂಚಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ : Rajinikanth: ತಮಿಳುನಾಡು ಸ್ಟೆರ್​ಲೈಟ್​ ಗೋಲಿಬಾರ್​ ಪ್ರಕರಣ; ನಟ ರಜನಿಕಾಂತ್​ಗೆ ಸಮನ್ಸ್​ ಜಾರಿ ಮಾಡಿದ ನ್ಯಾಯಾಲಯ!ಇದೀಗ ಮೋತಿಲಾಲ್​ ವೋರಾ ಅವರ ಸಾವಿಗೆ ಇಡೀ ರಾಷ್ಟ್ರ ರಾಜಕೀಯ ವಲಯ ಕಣ್ಣೀರು ಮಿಡಿದಿದೆ. ಈ ಕುರಿತು ತಮ್ಮ ವಿಷಾಧವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, "ಶ್ರೀ ಮೋತಿಲಾಲ್ ವೊರಾ ಜಿ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ರಾಜಕೀಯ ಜೀವನದಲ್ಲಿ ಅಪಾರ ಆಡಳಿತ ಮತ್ತು ಸಾಂಸ್ಥಿಕ ಅನುಭವವನ್ನು ಹೊಂದಿದ್ದರು. ಅವರ ನಿಧನದಿಂದ ಬೇಸರವಾಗಿದೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು" ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, "ವೋರಾ ಅವರು ನಿಜವಾದ ಕಾಂಗ್ರೆಸ್‌ನವರಾಗಿದ್ದು, ಅದ್ಭುತವಾದ ಮನುಷ್ಯ ಎಂಬುದರಲ್ಲಿ ಎರಡು ಮಾತಿಲ್ಲ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
Published by: MAshok Kumar
First published: December 21, 2020, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories