HOME » NEWS » National-international » VETERAN CONGRESS LEADER BUTA SINGH PASSES AWAY SNVS

Buta Singh Death - ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ನಿಧನ

ಎಂಟು ಬಾರಿ ಸಂಸದರಾಗಿದ್ದ ಹಿರಿಯ ದಲಿತ ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್ ವಿಧಿವಶರಾಗಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.

news18
Updated:January 2, 2021, 11:16 AM IST
Buta Singh Death - ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ನಿಧನ
ಬೂಟಾ ಸಿಂಗ್
  • News18
  • Last Updated: January 2, 2021, 11:16 AM IST
  • Share this:
ನವದೆಹಲಿ(ಜ. 02): ಕೇಂದ್ರದ ಮಾಜಿ ಗೃಹ ಸಚಿವ ಹಾಗು ಹಿರಿಯ ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್ (86 ವರ್ಷ) ಇಂದು ಶನಿವಾರ ನಿಧನರಾದರು. ಕಾಂಗ್ರೆಸ್​ನ ಪ್ರಮುಖ ದಲಿತ ಮುಖವಾಗಿದ್ದ ಬೂಟಾ ಸಿಂಗ್ ಅವರು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸರ್ಕಾರದಲ್ಲಿ 1986ರಂದ 1989ರವರೆಗೆ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಅದಕ್ಕೂ ಮುನ್ನ ಎರಡು ವರ್ಷ ಅವರು ಕೃಷಿ ಸಚಿವರಾಗಿದ್ದರು. ಇಂದಿರಾ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಸರ್ಕಾರದಲ್ಲೂ ಅವರು ಸಚಿವರಾಗಿದ್ದರು. 2004ರಿಂದ 2006ರವರೆಗೆ ಅವರು ಬಿಹಾರದ ರಾಜ್ಯಪಾಲರಾಗಿದ್ದರು.

ರಾಜಕಾರಣಕ್ಕೆ ಬರುವ ಮುನ್ನ ಅವರು ಪತ್ರಕರ್ತರಾಗಿದ್ದರು. ಅಕಾಲಿ ದಳ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅವರು ಎಂಟು ಬಾರಿ ಲೋಕಸಭೆಗೆ ಪ್ರವೇಶ ಮಾಡಿದ್ದಾರೆ. ಜವಾಹರಲಾಲ್ ನೆಹರೂ ಕಾಲಘಟ್ಟದಲ್ಲೇ ಕಾಂಗ್ರೆಸ್ ಜೊತೆ ಇದ್ದ ಅವರು ಗಾಂಧಿ ಕುಟುಂಬದ ಅತ್ಯಂತ ಆಪ್ತರಲ್ಲೊಬ್ಬರೆನಿಸಿದ್ದರು. ಇಂದಿರಾ ಗಾಂಧಿ ಅವರ ನಂಬುಗೆಯ ವ್ಯಕ್ತಿಯಾಗಿದ್ದ ಅವರು ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಭಯೋತ್ಪಾದಕರನ್ನ ಸದೆಬಡಿದ ಬಳಿಕ ಗೋಲ್ಡನ್ ಟೆಂಪಲ್ ದುರಸ್ತಿಯ ಜವಾಬ್ದಾರಿಯನ್ನೂ ನಿಭಾಯಿಸಿದ್ದರು.

1998ರಲ್ಲಿ ಅವರು ಸಂವಹನ ಖಾತೆ ಸಚಿವರಾಗಿದ್ದಾಗ ಜೆಎಂಎಂ ಲಂಚ ಹಗರಣದ ಕಳಂಕ ಮೆತ್ತಿಕೊಂಡು ರಾಜೀನಾಮೆ ನೀಡಬೇಕಾಯಿತು. ಆನಂತರ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಬಿಹಾರದಲ್ಲಿ ರಾಜ್ಯಪಾಲರಾದ ಬಳಿಕ ಬಹುತೇಕ ನೇಪಥ್ಯಕ್ಕೆ ಸರಿದಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ಖಾಯಂ ನಿವಾಸಿ ಹಕ್ಕು ಪಡೆದ ಪಂಜಾಬಿ ವ್ಯಕ್ತಿ ಉಗ್ರರ ಗುಂಡಿಗೆ ಬಲಿ

ಬೂಟಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಶ್ರೀ ಬೂಟಾ ಸಿಂಗ್ ಅವರು ಅನುಭವಿ ಆಡಳಿತಗಾರರಾಗಿದ್ದರು. ಬಡವರು ಮತ್ತು ದೀನರ ಕಲ್ಯಾಣಕ್ಕೆ ಅವರು ಧ್ವನಿಯಾಗದ್ದರು. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬವರ್ಗ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ದೇಶ ಇವತ್ತು ಒಬ್ಬ ಜನನಾಯಕನನ್ನು ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
Published by: Vijayasarthy SN
First published: January 2, 2021, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories