• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Khushboo Sundar: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡ ಹಿರಿಯ ನಟಿ ಖುಷ್ಬೂ ಸುಂದರ್

Khushboo Sundar: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡ ಹಿರಿಯ ನಟಿ ಖುಷ್ಬೂ ಸುಂದರ್

 ಖುಷ್ಬೂ ಸುಂದರ್

ಖುಷ್ಬೂ ಸುಂದರ್

ಎನ್‌ಸಿಡಬ್ಲ್ಯು ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿರುವ ಖುಷ್ಬೂ ಅವರನ್ನು ಕೆ ಅಣ್ಣಾಮಲೈ ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದು ಅವರ ಪಟ್ಟುಬಿಡದ ಅನ್ವೇಷಣೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಹೋರಾಟದ ಫಲ' ಎಂದಿದ್ದಾರೆ.

  • Share this:

ಚೆನ್ನೈ: ತಮಿಳುನಾಡಿನ (Tamil nadu) ಭಾರತೀಯ ಜನತಾ ಪಾರ್ಟಿ ಮುಖಂಡೆ, (Senior BJP Leader) ಹಿರಿಯ ನಟಿ ಖುಷ್ಬೂ ಸುಂದರ್ (Khushbu Sundar) ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ನಟಿ ಖುಷ್ಬೂ ಸುಂದರ್, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆದೇಶ ಪತ್ರವನ್ನು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.


ಎನ್‌ಸಿಡಬ್ಲ್ಯು ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ ಈ ನಾಮ ನಿರ್ದೇಶನವು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಇರಲಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಬೆನ್ನಲ್ಲೇ ಖುಷ್ಬೂ ಸುಂದರ್ ಅವರಿಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ:  Bathroom Commodes: ಒಂದೇ ಸ್ನಾನ ಗೃಹದಲ್ಲಿ ಎರಡು ಕಮೋಡ್​​ಗಳಿರುವ ಕಟ್ಟಡ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್!


ಅಣ್ಣಾಮಲೈಗೆ ಧನ್ಯವಾದ ತಿಳಿಸಿದ ಖುಷ್ಬೂ


ಎನ್‌ಸಿಡಬ್ಲ್ಯು ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿರುವ ಖುಷ್ಬೂ ಅವರನ್ನು ಕೆ ಅಣ್ಣಾಮಲೈ ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದು ಅವರ ಪಟ್ಟುಬಿಡದ ಅನ್ವೇಷಣೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಹೋರಾಟದ ಫಲ' ಎಂದಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಟ್ವೀಟ್‌ಗೆ ರಿಪ್ಲೈ ಮಾಡಿರುವ ನಟಿ ಖುಷ್ಬೂ ಸುಂದರ್, ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ನನಗೆ ಯಾವಾಗಲೂ  ಉತ್ತಮ ರೀತಿಯಲ್ಲಿ ನನಗೆ ಸಿಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Explained: ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ, ಸಮೀಕ್ಷೆ ವರದಿಯಿಂದ ಬಿಜೆಪಿಗೆ ಟೆನ್ಶನ್, ತಮಿಳುನಾಡಿನಿಂದ ಸ್ಪರ್ಧಿಸ್ತಾರಾ ಮೋದಿ?


ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತೇನೆ


ಇನ್ನೊಂದೆಡೆ ಖುಷ್ಬೂ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಈ ಬಗ್ಗೆ ಎಲ್ಲರಿಗೂ ಧನ್ಯವಾದ ತಿಳಿಸಿರುವ ಖುಷ್ಬೂ ಸುಂದರ್, ನನ್ನ ಪರಿಚಯ ಇರುವ ಮತ್ತು ಅಪರಿಚಿರಿಚಿತ ಹಿತೈಷಿಗಳಿಂದ ಅಭಿನಂದನಾ ಮೆಸೇಜ್‌ಗಳನ್ನು ಕಂಡು ನಿಜಕ್ಕೂ ವಿನೀತಳಾಗಿದ್ದೇನೆ. ಈ ಪ್ರೀತಿ ಮತ್ತು ನಂಬಿಕೆಯನ್ನು ಹಾಗೆಯೇ ಕಾಪಾಡಿಕೊಳ್ಳಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನ ಪಡುತ್ತೇನೆ. ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತೇನೆ ಮತ್ತು ನನಗೆ ಕೊಟ್ಟಿರುವ ಜವಾಬ್ದಾರಿಗೆ ನನ್ನಲ್ಲಿರುವ ಎಲ್ಲವನ್ನೂ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ. ನಾನು ಮತ್ತೊಮ್ಮೆ ಪ್ರಧಾನಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.


ಖುಷ್ಬೂ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಬಳಿಕ ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಇದೀಗ ಬಿಜೆಪಿಗೆ ಸೇರಿದ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.


ಇದನ್ನೂ ಓದಿ: PM Modi: ಶಿವಮೊಗ್ಗ, ಬೆಳಗಾವಿಯಲ್ಲಿ ‘ನಮೋ’ಯಾನ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ? ಕಂಪ್ಲೀಟ್ ರಿಪೋರ್ಟ್​​

Published by:Avinash K
First published: