HOME » NEWS » National-international » VERY SOON MYNTRA TO CHANGE IS LOGO SESR

ಶೀಘ್ರದಲ್ಲಿಯೇ ಬದಲಾಗಲಿದೆ Myntra ಲೋಗೋ; ಕಾರಣವೇನು?

ಪ್ಯಾಕೇಜಿಂಗ್​, ಪ್ರಿಂಟಿಂಗ್​ ವಸ್ತುಗಳಲ್ಲಿ ಕೂಡ ಈ ಬದಲಾವಣೆ ಆಗಲಿದ್ದು, ಶೀಘ್ರದಲ್ಲಿಯೇ ಹೊಸ ಲೋಗೋ ಅನಾವರಣಗೊಳ್ಳಲಿದೆ.

news18-kannada
Updated:January 30, 2021, 6:01 PM IST
ಶೀಘ್ರದಲ್ಲಿಯೇ ಬದಲಾಗಲಿದೆ Myntra ಲೋಗೋ; ಕಾರಣವೇನು?
ಮೈಂತ್ರಾ ಲೋಗೋ
  • Share this:
ಮುಂಬೈ (ಜ. 30): ಇ ಕಾರ್ಮಸ್​ನ ದೈತ್ಯ ಕಂಪನಿಗಳಲ್ಲಿ ಒಂದ ಮೈಂತ್ರಾ. ಬಟ್ಟೆಗಳ ಶಾಪಿಂಗ್​ಗೆ ಎಲ್ಲಾ ವಯೋಮಾನದವರ ಪ್ರಮುಖ ಅಚ್ಚು ಮೆಚ್ಚಿನ ಶಾಪಿಂಗ್​ ಪೋರ್ಟಲ್ ಆಗಿರುವ ಮೈಂತ್ರಾ​ ಶೀಘ್ರದಲ್ಲಿಯೇ ತನ್ನ ಲೋಗೋ ಬದಲಾಯಿಸಲು ಮುಂದಾಗಿದೆ. ಈ ಕುರಿತು ಕಂಪನಿ ಕೂಡ ತಿಳಿಸಿದೆ. ಇದಕ್ಕೆ ಕಾರಣ ಈ ಲೋಗೋವನ್ನು ಮಹಿಳೆಯರಿಗೆ ಅವಮಾನಕರ ರೀತಿಯಾಗಿ ರೂಪಿಸಲಾಗಿದೆ ಎಂದು ದಾಖಲಾದ ದೂರು. ಈ ಕುರಿತು ಮುಂಬೈ ಸೈಬರ್​ ಪೊಲೀಸರಿಗೆ ದೂರು ಕೂಡ ದಾಖಲಾಗಿದೆ. ಈ ಹಿನ್ನೆಲೆ ಕಂಪನಿ ಲೋಗೋ ಬದಲಾವಣೆಗೆ ಮುಂದಾಗಲಿದೆ. ಅವೆಸ್ಟಾ ಫೌಂಡೇಶನ್​ ಎಂಬ ಎನ್​ಜಿಒನ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಾಜ್​ ಪಟೇಲ್​ ಎಂಬುವವರು ಕಳೆದ ಡಿಸೆಂಬರ್​ನಲ್ಲಿ ಸೈಬರ್​ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಈ ಲೋಗೋ ಬದಲಾವಣೆಗೆ ಮುಂಬೈ ಮೂಲದ ಕಂಪನಿ ವಿಫಲವಾದರೆ ಸೂಕ್ತ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಹಾಕಿದ್ದರು. ಅಷ್ಟೇ ಅಲ್ಲದೇ ಈ ದೂರು ಸಲ್ಲಿಕೆಗೆ ಮುನ್ನ ಪಟೇಲ್​, ತಮ್ಮ ಈ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರಕಟಿಸಿದ್ದರು.

ಇನ್ನು ಈ ದೂರಿನ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಸೈಬರ್​ ಕ್ರೈಮ್​ ವಿಭಾಗದ ಡಿಸಿಪಿ ರಶ್ಮಿ ಕರಂದಿಕರ್​, ದೂರಿನ ಬಳಿಕ ಈ ಲೋಗೋವು ಆಕ್ರಮಣಕಾರಿಯಾಗಿ ಕಂಡು ಬಂದ ಕುರಿತು ಇ ಕಾರ್ಮಸ್​ ಸಂಸ್ಥೆಗೆ ಮೇಲ್​ ಮೂಲಕ ತಿಳಿಸಲಾಗಿದೆ. ಇದಾದ ಬಳಿಕ ಕಂಪನಿ ತನ್ನ ಲೋಗೋ ಬದಲಾಯಿಸಲು ಸಮ್ಮತಿ ನೀಡಿತು ಎಂದು ತಿಳಿಸಿದ್ದಾರೆ ಎಂದು ಜಾಗರಣ್​ ಇಂಗ್ಲಿಷ್​ ವರದಿ ಮಾಡಿದೆ.

ಈ ಕುರಿತು ಸಭೆ ನಡೆಸಲಾಗಿದ್ದು, ತಿಂಗಳೊಳಗೆ ತಮ್ಮ ಲೋಗೋವನ್ನು ಪರಿಷ್ಕರಿಸಲಾಗುವುದಾಗಿ ತಿಳಿಸಿದ್ದಾರೆ. ಅವರು ಈಗಾಗಲೇ ಈ ಕಾರ್ಯದಲ್ಲಿ ಪ್ರವೃತ್ತರಾಗಿದ್ದು, ಅಧಿಕೃತವಾಗಿ ಎಲ್ಲಾ ಸ್ಥಳಗಳಲ್ಲಿ ಅವರು ಈ ಬದಲಾವಣೆ ನಡೆಸಲಿದ್ದಾರೆ. ಪ್ಯಾಕೇಜಿಂಗ್​, ಪ್ರಿಂಟಿಂಗ್​ ​ ವಸ್ತುಗಳಲ್ಲಿ ಕೂಡ ಈ ಬದಲಾವಣೆ ಆಗಲಿದ್ದು, ಶೀಘ್ರದಲ್ಲಿಯೇ ಹೊಸ ಲೋಗೋ ಅನಾವರಣಗೊಳ್ಳಲಿದೆ.
Published by: Seema R
First published: January 30, 2021, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories