ಇದು ಬೇಜವಾಬ್ದಾರಿ: ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದೆವೆಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕೇಂದ್ರ ಸಚಿವ ಸುಪ್ರಿಯೋ ಬೇಸರ

ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಿರತ ಪ್ರತಿಭಟನಾಕಾರರನ್ನು ನಾಯಿಗೆ ಹೊಡೆದಂತೆ ಹೊಡೆದುಹಾಕಲಾಯಿತು. ಅಂಥ ಕ್ರಮವನ್ನು ದೀದಿ ಬಂಗಾಳದಲ್ಲೂ ತೆಗೆದುಕೊಳ್ಳಬೇಕಿತ್ತು ಎಂದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಹೇಳಿಕೆ ನೀಡಿದ್ದರು.

news18
Updated:January 13, 2020, 2:23 PM IST
ಇದು ಬೇಜವಾಬ್ದಾರಿ: ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದೆವೆಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕೇಂದ್ರ ಸಚಿವ ಸುಪ್ರಿಯೋ ಬೇಸರ
ಬಾಬುಲ್ ಸುಪ್ರಿಯೋ
  • News18
  • Last Updated: January 13, 2020, 2:23 PM IST
  • Share this:
ಕೋಲ್ಕತಾ(ಜ. 13): ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ನಾಶ ಮಾಡುತ್ತಿದ್ದವರನ್ನು ನಾಯಿಗಳಂತೆ ಹೊಡೆದೆವು ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇವರ ಈ ವಿವಾದಾತ್ಮಕ ಹೇಳಿಕೆಗೆ ಬಂಗಾಳ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ವಿಷಾದ ವ್ಯಕ್ತಪಡಿಸಿದ್ದು, ಇದು ಬೇಜವಾಬ್ದಾರಿಯುತ ಹೇಳಿಕೆ ಎಂದು ಪ್ರತಿಕ್ರಿಯಿಸಿದ್ದಾರೆ.

“ದಿಲೀಪ್ ಅವರು ಆ ರೀತಿ ಹೇಳಿದ್ದು ಬೇಜವಾಬ್ದಾರಿತನದಿಂದ ಕೂಡಿದೆ. ಅವರದ್ದು ಕಪೋಲಕಲ್ಪಿತ ಹೇಳಿಕೆ. ಅವರ ಹೇಳಿಕೆಗೂ ಪಕ್ಷದ ಅಭಿಪ್ರಾಯಕ್ಕೂ ಸಂಬಂಧ ಇಲ್ಲ. ಉತ್ತರ ಪ್ರದೇಶ, ಅಸ್ಸಾಮ್​ನಲ್ಲಿರುವ ಬಿಜೆಪಿ ಸರ್ಕಾರಗಳು ಜನರ ಮೇಲೆ ಗುಂಡಿನ ದಾಳಿ ಮಾಡಲು ಯಾವತ್ತೂ ಪ್ರಯತ್ನಿಸಿಲ್ಲ” ಎಂದು ಬಾಬುಲ್ ಸುಪ್ರಿಯೋ ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಜೆಎನ್​ಯು ಹಿಂಸಾಚಾರ; ಮಾಹಿತಿ ಸಂರಕ್ಷಿಸಲು ವಾಟ್ಸಾಪ್​, ಫೇಸ್​ಬುಕ್​ಗೆ ದೆಹಲಿ ಹೈ ಕೋರ್ಟ್​ ನೋಟಿಸ್​

ದಿಲೀಪ್ ಘೋಷ್ ಹೇಳಿದ್ಧೇನು?

ಪಶ್ಚಿಮ ಬಂಗಾಳದಲ್ಲಿ ಕಳೆದ ತಿಂಗಳು ನಡೆದಿದ್ದ ಪೌರತ್ವ ವಿರೋಧಿ ಪ್ರತಿಭಟನೆಯ ವೇಳೆ ಸಾರ್ವಜನಿಕ ಸಾರಿಗೆ ಮತ್ತು ರೈಲ್ವೆ ಆಸ್ತಿಗಳನ್ನು ಕೆಲ ಜನರು ಜಖಂಡಗೊಳಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಾಠಿ ಚಾರ್ಜ್ ಮಾಡಲು ಪೊಲೀಸರಿಗೆ ಆದೇಶ ನೀಡಲಿಲ್ಲ ಎಂಬುದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಪ್ರಮುಖ ಆಕ್ಷೇಪವಾಗಿದೆ.

ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಿರತ ಪ್ರತಿಭಟನಾಕಾರರನ್ನು ನಾಯಿಗೆ ಹೊಡೆದಂತೆ ಹೊಡೆದುಹಾಕಲಾಯಿತು. ಅಂಥ ಕ್ರಮವನ್ನು ದೀದಿ ಬಂಗಾಳದಲ್ಲೂ ತೆಗೆದುಕೊಳ್ಳಬೇಕಿತ್ತು ಎಂಬುದು ದಿಲೀಪ್ ಅವರ ಅಭಿಪ್ರಾಯ.

“ಸಾರ್ವಜನಿಕ ಆಸ್ತಿಯ ಮೇಲೆ ಬೆಂಕಿ ಹಚ್ಚಲು ಅದೇನು ಅವರ ಅಪ್ಪನ ಆಸ್ತಿಯಾ? ತೆರಿಗೆ ಕಟ್ಟುವವರ ಹಣದಿಂದ ನಿರ್ಮಿಸಲಾದ ಸರ್ಕಾರಿ ಆಸ್ತಿಯನ್ನು ಅವರು ಹೇಗೆ ನಾಶ ಮಾಡುತ್ತಾರೆ?” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಪ್ರಶ್ನಿಸಿದ್ದರು.“ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದವರು ಅವರ ಮತದಾರರೇ ಆದ್ದರಿಂದ ಅವರ ವಿರುದ್ಧ ದೀದಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಉತ್ತರ ಪ್ರದೇಶ, ಅಸ್ಸಾಮ್ ಮತ್ತು ಕರ್ನಾಟಕದಲ್ಲಿ ನಮ್ಮ ಸರ್ಕಾರಗಳು ಈ ಜನರನ್ನು ನಾಯಿಗಳಂತೆ ಹೊಡೆದವು” ಎಂದು ಹೇಳಿಕೆ ನೀಡಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ