ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿದೆ: ಟ್ರಂಪ್ ಸರ್ಕಾರದ ಉನ್ನತ ಅಧಿಕಾರಿ ಆತಂಕ

ಕೊರೋನಾ ಸೋಂಕು ಹರಡಲು ನಿರ್ದಿಷ್ಟ ಸಮುದಾಯದ ಜನರೇ ಕಾರಣ ಎಂಬಂತೆ ಭಾರತದಲ್ಲಿ ಬಿಂಬಿಸಲಾಗುತ್ತಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಆರೋಪ ಮಾಡಿದ್ಧಾರೆ.

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

 • News18
 • Last Updated :
 • Share this:
  ವಾಷಿಂಗ್ಟನ್(ಜೂನ್ 11): ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂಬ ಆತಂಕದ ಕೂಗು ಅಮೆರಿಕದಲ್ಲಿ ಮತ್ತೊಮ್ಮೆ ವ್ಯಕ್ತವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಮೆರಿಕಕ್ಕೆ ಕಳವಳಗೊಂಡಿದೆ ಎಂದು ಅಮೆರಿಕ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಆಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ರಾಯಭಾರಿಯಾಗಿರುವ ಸ್ಯಾಮುಯೆಲ್ ಬ್ರೌನ್​ಬ್ಯಾಕ್ ಅವರು ಈ ಆತಂಕ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕವಾಗಿ ಭಾರತದಲ್ಲಿ ಸಹಿಷ್ಣುತೆಯ ಗುಣ ಹೊಂದಿದೆ. ಎಲ್ಲಾ ಧರ್ಮಗಳ ಬಗ್ಗೆ ಇಲ್ಲಿ ಗೌರವಭಾವನೆ ಇದೆ. ಆದರೆ, ಈಗ ಈ ದೇಶದಲ್ಲಿ ಆಗುತ್ತಿರುವ ಬೆಳವಣಿಗೆ ಆತಂಕಕಾರಿಯಾಗಿದೆ ಎಂದವರು ಅಭಿಪ್ರಾಯಪಟ್ಟಿದ್ಧಾರೆ.

  “ಭಾರತದಲ್ಲಿ ಉನ್ನತ ಮಟ್ಟದಲ್ಲಿ ಅಂತರ್​ಧರ್ಮೀಯ ಸಂವಾದ ಪ್ರಕ್ರಿಯೆ ಪ್ರಾರಂಭವಾಗುವುದು ಬಹಳ ಅಗತ್ಯ ಎನಿಸುತ್ತದೆ. ನಾವು ನಿರ್ದಿಷ್ಟವಾಗಿ ಗುರುತಿಸಿ ತೋರಿಸಿದ ಸಮಸ್ಯೆಗಳನ್ನೂ ಬಗೆಹರಿಸುವ ಪ್ರಯತ್ನವಾಗಬೇಕಿದೆ… ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗದಿದ್ದಲ್ಲಿ ಭಾರತದಲ್ಲಿ ಹಿಂಸಾಚಾರಗಳು ಹೆಚ್ಚಾಗಬಹುದು. ಸಾಮಾಜಿಕವಾಗಿ ಸಂಕಷ್ಟಗಳು ಎದುರಾಗಬಹುದು“ ಎಂದು ಸ್ಯಾಮುಯೆಲ್ ಬ್ರೌನ್​ಬ್ಯಾಕ್ ಎಚ್ಚರಿಸಿದ್ದಾರೆ.

  ಇದನ್ನೂ ಓದಿ: PM Modi: ಕೊರೋನಾ ಸಂಕಷ್ಟ ಕಾಲವನ್ನು ಭಾರತ ಬದಲಾವಣೆಯ ಘಟ್ಟವನ್ನಾಗಿ ಪರಿವರ್ತಿಸಿಕೊಳ್ಳಬೇಕು; ಪ್ರಧಾನಿ ಮೋದಿ

  ಅಮೆರಿಕದ ಅಂತಾರಾಷ್ಟ್ರಿಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಕೆಲವಾರು ವರ್ಷಗಳಿಂದಲೂ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಡಿಸುತ್ತಲೇ ಬಂದಿದೆ. ಭಾರತ ಸರ್ಕಾರ ಜಾರಿಗೆ ತಂದ ಸಿಎಎ ಇತ್ಯಾದಿ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಈ ಆಯೋಗವು ತನ್ನ ವರದಿಯನ್ನ ಅಮೆರಿಕದ ಸಂಸತ್ತಿನಲ್ಲಿ ಮಂಡನೆ ಮಾಡಿತ್ತು.

  ಬ್ರೌನ್​ಬ್ಯಾಕ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದಲ್ಲಿ ಕೊರೊನಾ ಸೋಂಕು ಹರಡಲು ಅಲ್ಪಸಂಖ್ಯಾತರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರಿಂದ ದೇಶದ ವಿವಿಧೆಡೆ ಕೊರೋನಾ ಸೋಂಕು ಹಬ್ಬಿತ್ತು. ಈ ಬಗ್ಗೆ ವ್ಯಾಪಕ ಚರ್ಚೆಯಾಗಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಋಣಾತ್ಮಕ ಭಾವನೆ ಬರುವಂಥ ಮಾತುಗಳು ಸಾಕಷ್ಟು ಕೇಳಿಬಂದಿದ್ದವು. ಈ ವಿಚಾರವನ್ನು ಬ್ರೌನ್​ಬ್ಯಾಕ್ ಎತ್ತಿ ತೋರಿಸಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಯದ ವಾತಾವರಣ ಇದೆ ಎಂದು ವಾದಿಸಿದ್ದಾರೆ.

  ಇದನ್ನೂ ಓದಿ: ಭದ್ರತಾ ಸಿಬ್ಬಂದಿ-ಉಗ್ರರ ನಡುವೆ ಗುಂಡಿನ ಚಕಮಕಿ; ಸ್ಥಳದಿಂದ ಕಾಲ್ಕಿತ್ತ ಭಯೋತ್ಪಾದಕರು  ಆದರೆ, ಅಮೆರಿಕದ ಈ ಆಯೋಗದ ಅಭಿಪ್ರಾಯಗಳನ್ನ ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ. “ಕೋವಿಡ್-19 ರೋಗಕ್ಕೆ ಯಾವ ಧರ್ಮ, ಜಾತಿ, ಭಾಷೆ, ಗಡಿ ಇತ್ಯಾದಿ ತಾರತಮ್ಯ ಇಲ್ಲ. ಆದ್ದರಿಂದ ನಾವೆಲ್ಲರೂ ಏಕತೆಯಿಂದ ಮತ್ತು ಸೌಹಾರ್ದತೆಯಿಂದ ಕೊರೋನಾ ವಿರುದ್ಧ ಹೋರಾಡಬೇಕಿದೆ” ಎಂದು ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು.
  First published: