• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Vertebrates: ಕಣ್ಣಿನಲ್ಲೇ ಇತ್ತು 500 ಮಿಲಿಯನ್ ವರ್ಷಗಳ ಹಿಂದಿನ ಬ್ಯಾಕ್ಟೀರಿಯಾ ಜೀನ್! ಬೆಚ್ಚಿ ಬೀಳಿಸುತ್ತೆ ಈ ಸಂಶೋಧನೆ

Vertebrates: ಕಣ್ಣಿನಲ್ಲೇ ಇತ್ತು 500 ಮಿಲಿಯನ್ ವರ್ಷಗಳ ಹಿಂದಿನ ಬ್ಯಾಕ್ಟೀರಿಯಾ ಜೀನ್! ಬೆಚ್ಚಿ ಬೀಳಿಸುತ್ತೆ ಈ ಸಂಶೋಧನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದೆ ಜೀನ್ ಕಣ್ಣಿನ ಇಂಟರ್ಫೋಟೋರೆಸೆಪ್ಟರ್ ರೆಟಿನಾಯ್ಡ್-ಬೈಂಡಿಂಗ್ ಪ್ರೊಟೀನ್ ಭಾಗದಲ್ಲಿದೆ. ಇಂಟರ್ಫೋಟೋರೆಸೆಪ್ಟರ್ ಮ್ಯಾಟ್ರಿಕ್ಸ್‌ನಲ್ಲಿ ಸ್ಥಳೀಕರಿಸಲಾದ ಪ್ರಮುಖ ಕರಗುವ ಪ್ರೋಟೀನ್ ಆಗಿದೆ. ಇಂಟರ್ಫೋಟೋರೆಸೆಪ್ಟರ್ ರೆಟಿನಾಯ್ಡ್-ಬೈಂಡಿಂಗ್ ಪ್ರೊಟೀನ್ ದ್ಯುತಿಗ್ರಾಹಕಗಳು ಮತ್ತು RPE ನಡುವಿನ ಬಾಹ್ಯಕೋಶದ ಜಾಗದಲ್ಲಿ ಇರುತ್ತದೆ.

ಮುಂದೆ ಓದಿ ...
  • Share this:

ಮಾನವ ಸೇರಿ ಕಶೇರುಕ ಪ್ರಾಣಿಗಳ (Vertebrate Vision) ಕಣ್ಣಲ್ಲಿ ನೂರಾರು ವರ್ಷಗಳ ಹಿಂದಿನ ಬ್ಯಾಕ್ಟೀರಿಯಾದ (Bacteria) ಒಂದು ಜೀನ್‌ (Gene) ಇದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಸುಮಾರು 500 ಮಿಲಿಯನ್ ವರ್ಷಗಳ ಹಿಂದೆ, ಬ್ಯಾಕ್ಟೀರಿಯಾವೊಂದು ತನ್ನ ಒಂದು ಜೀನ್ ಅನ್ನು ಎಲ್ಲಾ ಕಶೇರುಕ ಜೀವಿಗಳ ಪೂರ್ವಜರಿಗೆ ವರ್ಗಾಯಿಸಿದೆ. ಆ ಜೀನ್‌ ಈಗ ಎಲ್ಲರ ಕಣ್ಣಿನ ದೃಷ್ಟಿಯಲ್ಲಿ ಅಡಕವಾಗಿದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (University of California) ಸಂಶೋಧರು ಹೊಸ ಸಂಶೋಧನ ಅಧ್ಯಯನದಲ್ಲಿ ತಿಳಿಸಿದ್ದಾರೆ. ಸಂಶೋಧಕರ ತಂಡವು ಕಣ್ಣಿಗೆ ಸಂಬಂಧಿಸಿದಂತೆ ಈ ಜೀನ್‌ ಸಂಬಂಧ ಹೊಂದಿದೆ ಎಂದು ತಿಳಿಸಿದೆ ಮತ್ತು ಅದು ಜೀನ್‌ ಇರುವ ಭಾಗ ಹೇಗೆ ಕಾರ್ಯನಿರ್ಹಹಿಸುತ್ತಿದೆ ಎಂಬುದನ್ನು ಸಹ ಸ್ಪಷ್ಟಪಡಿಸಿದ್ದಾರೆ. ಆದರೆ ಆ ಜೀನ್ ಯಾವ ಬ್ಯಾಕ್ಟರೀಯಾದ್ದು, ಹೇಗೆ ಬಂತು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು  ‌ಸಂಶೋಧನಕಾರರು ಒದಗಿಸಿಲ್ಲ.


ಐಬಿಆರ್‌ಪಿಯಲ್ಲಿದೆ ಬ್ಯಾಕ್ಟೀರಿಯಾದ ಜೀನ್
ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದೆ ಜೀನ್ ಕಣ್ಣಿನ ಇಂಟರ್ಫೋಟೋರೆಸೆಪ್ಟರ್ ರೆಟಿನಾಯ್ಡ್-ಬೈಂಡಿಂಗ್ ಪ್ರೊಟೀನ್ (IBRP) ಭಾಗದಲ್ಲಿದೆ. ಇಂಟರ್ಫೋಟೋರೆಸೆಪ್ಟರ್ ಮ್ಯಾಟ್ರಿಕ್ಸ್‌ನಲ್ಲಿ ಸ್ಥಳೀಕರಿಸಲಾದ ಪ್ರಮುಖ ಕರಗುವ ಪ್ರೋಟೀನ್ ಆಗಿದೆ. ಇಂಟರ್ಫೋಟೋರೆಸೆಪ್ಟರ್ ರೆಟಿನಾಯ್ಡ್-ಬೈಂಡಿಂಗ್ ಪ್ರೊಟೀನ್ (IRBP) ದ್ಯುತಿಗ್ರಾಹಕಗಳು ಮತ್ತು RPE ನಡುವಿನ ಬಾಹ್ಯಕೋಶದ ಜಾಗದಲ್ಲಿ ಇರುತ್ತದೆ. IRBP ದೃಷ್ಟಿಗೋಚರ ರೆಟಿನಾಯ್ಡ್‌ಗಳನ್ನು ಬಂಧಿಸುತ್ತದೆ. ಜೊತೆಗೆ ಇಂಟರ್ಫೋಟೋರೆಸೆಪ್ಟರ್ ರೆಟಿನಾಯ್ಡ್-ಬೈಂಡಿಂಗ್ ಪ್ರೊಟೀನ್ ರೆಟಿನಾ ಮತ್ತು RPE ನಡುವೆ ರೆಟಿನಾಯ್ಡ್‌ಗಳ ಸಾಗಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರೋಟೀನ್ ಅನುಕ್ರಮವು ಪೆಪ್ಟಿಡೇಸ್ ಎಂಬ ಬ್ಯಾಕ್ಟೀರಿಯಾದ ಪ್ರೋಟೀನ್‌ಗೆ ಹೋಲುತ್ತದೆ, ಇದು ಪ್ರೋಟೀನ್‌ಗಳನ್ನು ವಿಭಜಿಸುತ್ತದೆ ಮತ್ತು ಅವುಗಳನ್ನು ಮರುಬಳಕೆ ಮಾಡುವ ಕೆಲಸ ಮಾಡುತ್ತದೆ.


ದೃಷ್ಟಿಗೆ ಸಂಬಂಧಿಸಿದಂತೆ IBRP ಪಾತ್ರ ಏನು?
ನಮ್ಮ-ನಿಮ್ಮೆಲ್ಲರ ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ IBRP ಮಹತ್ವದ ಪಾತ್ರವನ್ನು ಹೊಂದಿದೆ. ಮಾನವರಲ್ಲಿ, ಜೀನ್‌ನ ರೂಪಾಂತರಿತ ಆವೃತ್ತಿಗಳು ರೆಟಿನೈಟಿಸ್ ಪಿಗ್ಮೆಂಟೋಸಾ ಅಂದರೆ ದೃಷ್ಟಿ ಕಳೆದುಕೊಳ್ಳುವ ಕಣ್ಣಿನ ಅಸ್ವಸ್ಥತೆ ಮತ್ತು ರೆಟಿನಲ್ ಡಿಸ್ಟ್ರೋಫಿ (ವರ್ಣ ಕುರುಡುತನ ಅಥವಾ ರಾತ್ರಿ ಕುರುಡುತನ ಮತ್ತು ಪ್ರಗತಿಶೀಲ ಪರಿಸ್ಥಿತಿಗಳಲ್ಲಿ ಸಂಪೂರ್ಣ ಕುರುಡುತನಕ್ಕೆ ಕಾರಣವಾಗುವ ಕ್ಷೀಣಗೊಳ್ಳುವ ಅಸ್ವಸ್ಥತೆ) ನಂತಹ ವಿವಿಧ ರೆಟಿನಾದ ಕಾಯಿಲೆಗಳಿಗೆ ಕಾರಣವಾಗುತ್ತವೆ.


ಸಂಶೋಧನೆ ಬಗ್ಗೆ ಏನ್‌ ಹೇಳಿದೆ ಅಧ್ಯಯನ ತಂಡ?
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರಾದ ಸ್ಯಾನ್ ಡಿಯಾಗೋ ತಂಡವು ಈ ಒಂದು ಸಂಶೋಧನೆಯನ್ನು ಬೆಳಕಿಗೆ ತಂದಿದೆ. "ಬ್ಯಾಕ್ಟೀರಿಯಾದ ಜೀನ್‌ಗಳು ಇತರ ಬ್ಯಾಕ್ಟೀರಿಯಾದ ಪ್ರಭೇದಗಳಿಗೆ ಮಾತ್ರವಲ್ಲ, ಯುಕ್ಯಾರಿಯೋಟ್‌ಗಳಿಗೆ (ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು ಮತ್ತು ಅನೇಕ ಏಕಕೋಶೀಯ ಜೀವಿಗಳು) ವಿಕಸನೀಯ ನವೀನತೆಯ ಶ್ರೀಮಂತ ಮೂಲವನ್ನು ಒದಗಿಸುತ್ತವೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳನ್ನು ನಮ್ಮ ಅಧ್ಯಯನವು ಬಹಿರಂಗಪಡಿಸುತ್ತದೆ" ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ಬರೆದಿದ್ದಾರೆ.


IRBP ಪ್ರೊಟೀನ್ ಅನುಕ್ರಮಗಳು ಬಹು ಫೈಲೋಜೆನೆಟಿಕ್ ಪುನರ್ನಿರ್ಮಾಣ ವಿಧಾನಗಳ ಆಧಾರದ ಮೇಲೆ ಬ್ಯಾಕ್ಟೀರಿಯಾದ S41 ಕುಟುಂಬದ ಪೆಪ್ಟಿಡೇಸ್‌ಗಳಿಗೆ ಹೋಲುವ ಏಕೈಕ ಮೊನೊಫೈಲೆಟಿಕ್ ಕ್ಲೇಡ್ ಅನ್ನು ರೂಪಿಸುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ. ನಾಲ್ಕು-ಡೊಮೈನ್ ಪ್ರೊಟೀನ್ ಆರ್ಕಿಟೆಕ್ಚರ್ ಮತ್ತು ಮೂರು ಇಂಟ್ರಾನ್-ಒಳಗೊಂಡಿರುವ ಜೀನ್ ರಚನೆ, ಹಾಗೆಯೇ ಪ್ರೋಟಿಯೇಸ್ ವೇಗವರ್ಧಕ ಅವಶೇಷಗಳ ನಷ್ಟವು ಬ್ಯಾಕ್ಟೀರಿಯಾದಿಂದ ಏಕ-ಡೊಮೈನ್ ಪೆಪ್ಟಿಡೇಸ್ ಜೀನ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ವಿಕಸನಗೊಂಡಿದೆ. ಯೂಕಾರ್ಯೋಟಿಕ್ ಜಿನೋಮ್‌ಗಳಲ್ಲಿ ಹಲವಾರು ಹೆಚ್ಚುವರಿ IRBP ಹೋಮೋಲಾಗ್‌ಗಳನ್ನು ನಾವು ಮತ್ತಷ್ಟು ಗುರುತಿಸಿದ್ದೇವೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ವರದಿಯಾಗಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಬ್ಯಾಕ್ಟೀರಿಯಾಗಳು ಜೀನ್‌ಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳುತ್ತವೆ. ಈ ಸಂಶೋಧನೆ ನಿಜಕ್ಕೂ ನಂಬಲು ಅಸಾಧ್ಯವಾದದ್ದು ಎಂದು ಸಿಡ್ನಿ ವಿಶ್ವವಿದ್ಯಾಲಯದ ಸೇವ್ ಸೈಟ್ ಇನ್ಸ್ಟಿಟ್ಯೂಟ್​ನ ರೆಟಿನಾದ ಜೀವಶಾಸ್ತ್ರಜ್ಞ ಲಿಂಗ್ ಝು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

top videos
    First published: