ಉಪ ರಾಷ್ಟ್ರಪತಿ Venkaiah Naidu ವೈಯಕ್ತಿಕ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯ!

Venkaiah Naidu: ಸಿನಿಮಾ ತಾರೆಯರು, ಕ್ರಿಕೆಟಿಗರು, ಫುಟ್​ಬಾಲ್​ ತಾರೆಯರು, ಸಾಧನೆ ಮಾಡಿದ ಸರದಾರರು, ರಾಜಕಾರಣಿಗಳು ಹೀಗೆ ಜನಪ್ರಿಯತೆ ಪಡೆದವರ ಖಾತೆಗೆ ಟ್ವಿಟ್ಟರ್​ ವಿಶೇಷ ನೀಲಿ ಬಣ್ಣದ ಬ್ಲೂ ಟಿಕ್​ ಅನ್ನು ನೀಡುತ್ತದೆ. ಅದರಂತೆ ವೆಂಕಯ್ಯ ನಾಯ್ಡು ಅವರು ತಮ್ಮ ವೈಯಕ್ತಿಕ ಖಾತೆಗೆ ಬ್ಲೂ ಬ್ಯಾಡ್ಜ್​ ಹೊಂದಿದ್ದರು.

Venkaiah Naidu

Venkaiah Naidu

 • Share this:
  ಜನಪ್ರಿಯ ತಾಣವಾದ ಟ್ವಿಟ್ಟರ್​​ ಭಾರತದ ಉಪ ರಾಷ್ಟ್ರಪತಿ  ಎಂ. ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಗೆ ನೀಡಿದ್ದ ಬ್ಲೂ ಟಿಕ್​ ಅನ್ನು ತೆಗೆದು ಹಾಕಿದೆ. ಶನಿವಾರದಂದು ಬ್ಲೂ ಬ್ಯಾಡ್ಜ್​ ಅನ್ನು ತೆಗೆದಿದೆ ಎಂದು ತಿಳಿದುಬಂದಿದೆ.

  ಸಿನಿಮಾ ತಾರೆಯರು, ಕ್ರಿಕೆಟಿಗರು, ಫುಟ್​ಬಾಲ್​ ತಾರೆಯರು, ಸಾಧನೆ ಮಾಡಿದ ಸರದಾರರು, ರಾಜಕಾರಣಿಗಳು ಹೀಗೆ ಜನಪ್ರಿಯತೆ ಪಡೆದವರ ಖಾತೆಗೆ ಟ್ವಿಟ್ಟರ್​ ವಿಶೇಷ ನೀಲಿ ಬಣ್ಣದ ಬ್ಲೂ ಟಿಕ್​ ಅನ್ನು ನೀಡುತ್ತದೆ. ಅದರಂತೆ ವೆಂಕಯ್ಯ ನಾಯ್ಡು ಅವರು ತಮ್ಮ ವೈಯಕ್ತಿಕ ಖಾತೆಗೆ ಬ್ಲೂ ಬ್ಯಾಡ್ಜ್​ ಹೊಂದಿದ್ದರು. ಆದರೀಗ ಟ್ವಿಟ್ಟರ್ ಅದನ್ನು​​ ತೆಗೆದುಹಾಕಿದೆ. ಆದರೆ ಭಾರತದ ಉಪಾಧ್ಯಕ್ಷ @VPSecretariat ಅಧಿಕೃತ ಹ್ಯಾಂಡಲ್​ನ ನೀಲಿ ಟಿಕ್​ ಅನ್ನು ಹಾಗೆ ಉಳಿಸಿಕೊಂಡಿದೆ.

  ಇನ್ನು ಬ್ಲೂ ಟಿಕ್​ ಟಿಕ್​ ಹೊಂದಿದ ಖಾತೆಯು ಸಕ್ರಿಯವಾಗಿರಬೇಕು. ಸರ್ಕಾರದಿಂದ ಗುರುತಿಸಿಕೊಂಡಿರುವ, ಬ್ರಾಂಡ್​ಗಳು, ಲಾಭ ರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳಿಗೆ ಟ್ವಿಟ್ಟರ್​ ಬ್ಲೂ ಟಿಕ್​ ನೀಡುತ್ತದೆ.

  ಕಳೆದ ಕೆಲ ತಿಂಗಳ ಹಿಂದೆ ಟ್ವಿಟ್ಟರ್​ ಬ್ಲೂ ಟಿಕ್​ ವೇರಿಫಿಕೇಶನ್​ ಬ್ಯಾಡ್ಜ್​ ಆಯ್ಕೆಯನ್ನು ಮತ್ತೆ ಪ್ರಾರಂಭಿಸಿದೆ. 2017ರ ನಂತರ ಸ್ಥಗಿತಗೊಳಿಸಿದ ಈ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಸಿದೆ. ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಢೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿತ್ತು.

  Published by:Harshith AS
  First published: