'ವಕೀಲರಿಗೆ, ಜಡ್ಜ್‌ಗೆ ಹೊಸ ಡ್ರೆಸ್ ಕೋಡ್ ಬೇಕು': ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ


Updated:February 14, 2018, 8:22 AM IST
'ವಕೀಲರಿಗೆ, ಜಡ್ಜ್‌ಗೆ ಹೊಸ ಡ್ರೆಸ್ ಕೋಡ್ ಬೇಕು': ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ

Updated: February 14, 2018, 8:22 AM IST
ನ್ಯೂಸ್ 18 ಕನ್ನಡ

ನವದೆಹಲಿ(ಫೆ.14): ದೇಶದಲ್ಲಿ ಈಗಾಗ್ಲೇ ವಕೀಲರು, ನ್ಯಾಯಾಧೀಶರಿಗೆ ಅವರದ್ದೇ ಆದ ಡ್ರೆಸ್ ಕೋಡ್ ಇದೆ. ಆದರೆ, ಸ್ವಾತಂತ್ರ್ಯ ಭಾರತದಲ್ಲಿ ಅವರಿಗೆ ಬೇರೆಯದ್ದೇ ಹೊಸದಾದ ಡ್ರೆಸ್ ಕೋಡ್ ಬೇಕಿದೆ ಎನ್ನುವ ಮಾತು ಕೇಳಿಬಂದಿದೆ. ಈ ವಿಷಯವನ್ನ ಬೆಂಬಲಿಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು.

ನಾನು ವಕೀಲರು, ನ್ಯಾಯಾಧೀಶರನ್ನ ನೋಡಿದಾಗ, ಸ್ವಾತಂತ್ರ್ಯ ಭಾರತದಲ್ಲಿ ನಮಗೆ ನಮ್ಮದ್ದೇ ಆದ ಹೊಸ ಡ್ರೆಸ್​ ಕೋಡ್ ಬೇಕು ಅನಿಸುತ್ತದೆ,ಹೀಗಂತ ಹೇಳಿದವರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು.ನವದೆಹಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಉಪರಾಷ್ಟ್ರಪತಿ, ನಮ್ಮ ಬಟ್ಟೆ, ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಬಿಂಬಿಸಬೇಕು, ಸಂಸತ್ ಕೂಡ ಸ್ವಾತಂತ್ರ್ಯಪೂರ್ವದ ಕೆಲ ಆಚರಣೆಗಳನ್ನೇ ಪಾಲಿಸುತ್ತಿದೆ. ವಕೀಲರು, ನ್ಯಾಯಾಧೀಶರಿಗೆ ಹೊಸ ಡ್ರೆಸ್ ಕೋಡ್ ಇದ್ದರೆ ಅದು ನಮ್ಮದೇದ ಒಂದು ಗುರುತು ನೀಡಲಿದೆ ಎಂದಿದ್ದಾರೆ.

ಇದೇ ವೇಳೆ, ನ್ಯಾಯಾಲಯದ ಆದೇಶಗಳು ಹಾಗೂ ತೀರ್ಪುಗಳು ದೇಶದ ಎಲ್ಲಾ ಸ್ಥಳೀಯ ಭಾಷೆಗಳಲ್ಲೂ ಸಿಗುವಂತಾಗಬೇಕು, ನ್ಯಾಯಾಧೀಶರು ಹಾಗೂ ವಕೀಲರು ಜನಸಾಮಾನ್ಯರ ಭಾಷೆ ಮಾತನಾಡಬೇಕು, ಅಂತ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ರು.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ